Home Breaking Entertainment News Kannada ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ‘ತುಳುವೆದಿ’ |ಮೊದಲ ಚಿತ್ರದಲ್ಲೇ ಧನ್ವೀರ್ ಜೊತೆಗೆ ನಟನೆಗೆ ಅವಕಾಶ ಪಡೆದ...

ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ‘ತುಳುವೆದಿ’ |ಮೊದಲ ಚಿತ್ರದಲ್ಲೇ ಧನ್ವೀರ್ ಜೊತೆಗೆ ನಟನೆಗೆ ಅವಕಾಶ ಪಡೆದ ಉಜಿರೆ SDM ನ ಹಳೆ ವಿದ್ಯಾರ್ಥಿನಿ

Hindu neighbor gifts plot of land

Hindu neighbour gifts land to Muslim journalist

ಸಂಸ್ಕೃತಿ, ಕಲೆ, ಆಚಾರ-ವಿಚಾರ ಎಂದೊಡನೆ ನಮಗೆಲ್ಲಾ ನೆನಪಾಗುವುದು ತುಳುನಾಡು. ಇಂತಹ ಸುಂದರವಾದ ತುಳುನಾಡಿನ ಅದೆಷ್ಟೋ ಪ್ರತಿಭೆಗಳು ಇಂದು ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಇದೀಗ ಮತ್ತೊಮ್ಮೆ ‘ಕುಡ್ಲದ ತುಳುವೆದಿ’ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವ ಮೂಲಕ ತುಳುನಾಡ ಗರಿಮೆಯನ್ನು ಹೆಚ್ಚಿಸಲಿದ್ದಾರೆ.

ಹೌದು.ಧನ್ವೀರ್ ಗೌಡ ನಟನೆಯ ‘ವಾಮನ’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೀಗ ವಾಮನ ಅಂಗಳದಿಂದ ಮೆಗಾ ಅಪ್ ಡೇಟ್ ಸಿಕ್ಕಿದೆ.ಧನ್ವೀರ್ ಗೆ ನಾಯಕಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ಚಿತ್ರತಂಡ ಉತ್ತರ ನೀಡಿದೆ.ವಾಮನ ಸಿನಿಮಾಗೆ ತುಳುನಾಡ ಕುವರಿ, ಚೆಂದುಳ್ಳಿ ಚೆಲುವೆ ರಚನಾ ರೈ ಎಂಟ್ರಿ ಕೊಟ್ಟಿದ್ದಾರೆ.

ಈ ಹಿಂದೆ ತುಳು ಸಿನಿಮಾವೊಂದರಲ್ಲಿ ನಟಿಸಿದ್ದ ರಚನಾಗೆ ಇದು ಮೊದಲ ಕನ್ನಡ ಸಿನಿಮಾವಾಗಿದೆ.ಬ್ಯಾಡ್ಮಿಂಟನ್ ಪ್ಲೇಯರ್ ಆಗಿರುವ ಈಕೆ ಮಾಡೆಲ್,ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ ಹೌದು. ಓ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ರಚನಾ ಸದ್ಯ ಕನ್ನಡ ಚಿತ್ರರಂಗದಲ್ಲೂ ತನ್ನ ಛಾಪು ಮೂಡಿಸಲು ಹೊರಟಿದ್ದಾರೆ. ಮೂಲತಃ ಉಜಿರೆಯವಳಾದ ಈ ಬೆಡಗಿ,ಎಸ್ ಡಿಎಂ ನ ಹಳೆ ವಿದ್ಯಾರ್ಥಿನಿ. ಈಕೆ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ. ಈಕೆಯ ಮೂಲ ಹೆಸರು ಶ್ರಾವ್ಯ ರೈ. ಆದರೆ ಸಿನಿಮಾ ಕ್ಷೇತ್ರಕ್ಕಾಗಿ ತನ್ನ ಹೆಸರನ್ನು ರಚನಾ ರೈ ಎಂಬುದಾಗಿ ಬದಲಾಯಿಸಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಹೆಚ್ಚೇನೂ ಗುಟ್ಟುಬಿಟ್ಟು ಕೊಡದ ರಚನಾ, ಬಬ್ಲಿ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ವಾಮನ ಸಿನಿಮಾದಲ್ಲಿ ಧನ್ವೀರ್ ಗೆ ನಾಯಕಿಯಾಗಿ ನಟಿಸ್ತಿರುವ ರಚನಾ ರೈ, ಈಗಾಗಲೇ ಸೆಕೆಂಡ್ ಶೆಡ್ಯೂಲ್ಡ್ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ.

ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್‌ ನಡಿ ಮೂಡಿ ಬರ್ತಿರುವ ಮಾಸ್​ ಆಕ್ಷನ್ ಎಂಟರ್​ಟೇನರ್ ವಾಮನ ಸಿನಿಮಾಗೆ ಚೇತನ್ ಕುಮಾರ್ ಬಂಡವಾಳ ಹೂಡಿದ್ದು, ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸಂಭಾಷಣಾಗಾರನಾಗಿ ಕಾರ್ಯನಿರ್ವಹಿಸಿದ್ದ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.