Home Breaking Entertainment News Kannada ಅತಿ ಶೀಘ್ರದಲ್ಲಿ ವೀಕೆಂಡ್ ವಿತ್ ರಮೇಶ್ !! ಈ ಬಾರಿಯ ಸಾಧಕರ ಲಿಸ್ಟ್ ನಲ್ಲಿ ಯಾರೆಲ್ಲ...

ಅತಿ ಶೀಘ್ರದಲ್ಲಿ ವೀಕೆಂಡ್ ವಿತ್ ರಮೇಶ್ !! ಈ ಬಾರಿಯ ಸಾಧಕರ ಲಿಸ್ಟ್ ನಲ್ಲಿ ಯಾರೆಲ್ಲ ಇದ್ದಾರೆ??

Hindu neighbor gifts plot of land

Hindu neighbour gifts land to Muslim journalist

ಕನ್ನಡದ ನಂಬರ್ ಒನ್ ಮನರಂಜನಾ ವಾಹಿನಿ ಜೀ ಕನ್ನಡ ಮನರಂಜನೆಯ ಸರಮಾಲೆಯನ್ನೇ ವೀಕ್ಷಕರಿಗೆ ನೀಡುತ್ತಾ ಹದಿಹರೆಯದವರಿಂದ ಹಿಡಿದು ವಯಸ್ಸಾದವರ ರ ವರೆಗೂ ಎಲ್ಲರೂ ನೆಚ್ಚಿಕೊಂಡು ಮೆಚ್ಚಿಕೊಂಡು ನೋಡುವ ಅದ್ದೂರಿ ಕಾರ್ಯಕ್ರಮ ಪ್ರಸಾರ ಮಾಡುತ್ತ ಝೀ ಕನ್ನಡ ವಾಹಿನಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ಮಾತಿನಲ್ಲೇ ಮೋಡಿ ಮಾಡುವ ನಿರೂಪಕಿ ಅನುಶ್ರೀ , ಮಾಸ್ಟರ್ ಆನಂದ್ ಜೋಡಿಯ ಕಮಾಲ್ ಸರಿಗಮಪ ಚಾಂಪಿಯನ್ ಷಿಪ್ ನೋಡುಗರ ಕಣ್ಣಿಗೆ ಹಬ್ಬ ಕಿವಿಗೆ ಇಂಪಿನ ಸವಿಯ ನಡುವೆ ಮನರಂಜನೆಯ ಉಣಬಡಿಸುವ ‘ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್’ ಮೂಲಕ ಕಾಮಿಡಿ ಕಿಲಾಡಿಗಳು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದು ಗೊತ್ತಿರುವ ವಿಚಾರವೇ. ಈ ಹಿಂದೆ ಜೀ ಕನ್ನಡದಲ್ಲಿ ಎಲ್ಲರ ನೆಚ್ಚಿನ ಶೋ ಎಂದು ಗುರುತಿಸಿಕೊಂಡಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೊಮ್ಮೆ ಜನರನ್ನು ರಂಜಿಸಲು ಅತಿ ಶೀಘ್ರದಲ್ಲಿಯೆ ಬರಲಿದೆ ಎನ್ನಲಾಗುತ್ತಿದೆ.

ಸದ್ಯದಲ್ಲೇ ಕಾಮಿಡಿ ಕಿಲಾಡಿಗಳು ಸೀಸನ್ 4 ಮುಕ್ತಾಯವಾಗಲಿದ್ದು , ಅದು ಮುಗಿದ ನಂತರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗಲಿದೆ ಎನ್ನಲಾಗುತ್ತಿದೆ. ರಮೇಶ್ ಅರವಿಂದ್ ಅವರ ಸಾರಥ್ಯದಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಸಾಧನೆಗೈದ ಮಹನೀಯರ ಸ್ಪೂರ್ತಿದಾಯಕ ನಿಜ ಜೀವನದ ಕೈಗನ್ನಡಿಯಂತೆ ತೋರಿಸುವ ಮೂಲಕ ಉಳಿದವರು ಕೂಡ ಆದರ್ಶ ವ್ಯಕ್ತಿ ಆಗಲು ಪ್ರೇರೇಪಿಸುವ ಕಾರ್ಯಕ್ರಮವಾಗಿ ವೀಕೆಂಡ್ ವಿತ್ ರಮೇಶ್ ಜನರ ಮನದಲ್ಲಿ ಸ್ಥಾನ ಪಡೆದಿದೆ.

ಮೊದಲ ಸೀಸನ್ ಆಗಸ್ಟ್ 2 , 2014 ರಂದು ಪ್ರಸಾರವಾಗಿದ್ದು, ಎಲ್ಲರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಮೊದಲ ಆಹ್ವಾನಿತರಾಗಿದ್ದರು. ಈಗಾಗಲೇ 4 ವೀಕೆಂಡ್ ವಿತ್ ರಮೇಶ್ ಸೀಸನ್‍ಗಳು ಮುಗಿದಿದ್ದು, ಇನ್ನೂ ಮತ್ತೊಮ್ಮೆ ಶುರುವಾಗುವ ಸೀಸನ್ ಐದನೇ ಸೀಸನ್ ಆಗಿರಲಿದೆ. 2014 ಆಗಸ್ಟ್ 2 ರಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗಿದ್ದು, ಈವರೆಗೆ 104 ಎಪಿಸೋಡ್ ಗಳಾಗಿವೆ ಎನ್ನಲಾಗಿದೆ. ಈ ಕಾರ್ಯಕ್ರಮದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯ ಮೂಲಕ ಜನಪ್ರಿಯತೆಗಳಿಸಿ ತೆರೆಮರೆಯಲ್ಲಿ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಮಹನೀಯರನ್ನು ಗುರುತಿಸುವ ಮಹತ್ಕಾರ್ಯವನ್ನು ಝೀ ಕನ್ನಡ ವಾಹಿನಿ ನಡೆಸಿಕೊಂಡು ಬರುತ್ತಿದೆ.

ಸದ್ಯ ಬೆಂಗಳೂರಿನ ಚಿಕ್ಕಲಸಂದ್ರ ಪ್ರದೇಶದಲ್ಲಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಈ ಕಾರ್ಯಕ್ರಮವನ್ನು ಚಿತ್ರೀಕರಣದ ಕಾರ್ಯ ನಡೆಯುತ್ತಿವೆ ಎನ್ನಲಾಗಿದೆ. ಈಗ ಪ್ರಸಾರಗೊಂಡ 4 ಸೀಸನ್‍ಗಳಲ್ಲಿ ಹಲವಾರು ಸಾಧಕರು ತುಳಿದು ಬಂದ ಹಾದಿಯ ಬಗ್ಗೆ ಕಷ್ಟಗಳ ನಡುವೆಯೂ ಛಲ ಬಿಡದೇ ಯಶಸ್ಸು ಗಳಿಸಿದ ವಿಧಾನದ ಬಗ್ಗೆ ತಮ್ಮ ಅನುಭವ, ಅಭಿಪ್ರಾಯಗಳ ಬಗ್ಗೆ ಸಾಧಕರು ವೀಕ್ಷಕರ ಮುಂದೆ ಮನದ ಮಾತನ್ನು ಬಿಚ್ಚಿಟ್ಟಿದ್ದಾರೆ. ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕೂಡ ಜನರಲ್ಲಿ ಅನೇಕ ನಿರೀಕ್ಷೆಯ ಜೊತೆ ಕೂತೂಹಲ ಮೂಡಿಸಿರುವುದಂತು ಸುಳ್ಳಲ್ಲ.