Home Entertainment Vastu Plants: ಒಂದೇ ಬಾರಿಗೆ ಮನೆಗೆ ತನ್ನಿ ಈ ವಿವಿಧ ಗಿಡಗಳನ್ನು | ...

Vastu Plants: ಒಂದೇ ಬಾರಿಗೆ ಮನೆಗೆ ತನ್ನಿ ಈ ವಿವಿಧ ಗಿಡಗಳನ್ನು | ನಂತರ ನಡೆಯೋ ವಿಶೇಷತೆ ಗಮನಿಸಿ!

Hindu neighbor gifts plot of land

Hindu neighbour gifts land to Muslim journalist

ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆಗಳಿರುವುದು ಸಹಜ. ಕೆಲವರು ದೇವರ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡಿದರೆ ಮತ್ತೆ ಕೆಲವರು ದೇವರನ್ನು ಅತಿಯಾಗಿ ನಂಬಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಮನೆ ಕಟ್ಟುವಾಗ, ಮದುವೆ ಹೀಗೆ ಯಾವುದೇ ಶುಭ ಕಾರ್ಯ ಮಾಡುವಾಗಲೂ ಕೂಡ ಪಂಡಿತರ ಸಲಹೆ ಪಡೆದು ಪೂಜೆ ಪುನಸ್ಕಾರ ನಡೆಸುವುದು ಹೆಚ್ಚಿನವರ ವಾಡಿಕೆ.

ಹಾಗೆಯೇ ಮನೆಯಲ್ಲಿ ಕೂಡ ಕೆಲವೊಂದು ನಿಯಮಗಳನ್ನು ಪಾಲಿಸುವುದು ಕ್ರಮ. ಕೆಲವು ವಸ್ತುಗಳು ಮನೆಗೆ ಸಕಾರಾತ್ಮಕ ಪ್ರಭಾವ ಬೀರಿದರೆ ಮತ್ತೆ ಕೆಲವು ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗೆಯೇ ಮನೆ ಅಥವಾ ಆವರಣದಲ್ಲಿ ಹಸಿರು ಇರಬೇಕು ಎಂದು ಹೆಚ್ಚಿನವರು ಬಯಸುತ್ತಾರೆ. ಆದ್ರೆ ವಾಸ್ತು ಶಾಸ್ತ್ರದಲ್ಲಿ ಯಾವ ಗಿಡ ಬೆಳೆಸಬೇಕು ಮತ್ತು ಬೆಳೆಸಬಾರದು ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಮನೆಯ ಅಂದ ಚೆಂದ ಹೆಚ್ಚಿಸುವ ಇಲ್ಲವೇ ಹೂದೋಟ ಮಾಡುವ ಅಭ್ಯಾಸ ಹೆಚ್ಚಿನವರಿಗೆ ಇರುತ್ತದೆ. ಇಲ್ಲವೇ ಹಸಿರು ಗಿಡ ಬೆಳೆಸುವ ಅಭ್ಯಾಸ ಇರುತ್ತದೆ. ಹಾಗೆಯೇ ನಗರ ಪ್ರದೇಶಗಳ ಜನರು ಇರುವ ಚಿಕ್ಕ ಜಾಗದಲ್ಲಿಯೇ ಬೋನ್ಸಾಯ್ ಗಿಡಗಳನ್ನು ಇಡುತ್ತಾರೆ. ಈ ಗಿಡಗಳು ಮನೆಯಲ್ಲಿರುವ ಸದಸ್ಯರಿಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತವೆ ಎಂದು ನಂಬಲಾಗುತ್ತದೆ.

ಹೆಚ್ಚಿನ ಸಂದರ್ಭದಲ್ಲಿ ಒಳ್ಳೆಯ ಸಂಬಳ ಇದ್ದರೂ ಕೂಡ ಕೈಯಲ್ಲಿ ದುಡ್ಡೇ ಉಳಿಯುವುದಿಲ್ಲ ಎಂಬ ಮಾತು ಹೇಳುವುದನ್ನು ನಾವು ಕೇಳಿರುತ್ತೇವೆ. ಕೆಲವೊಮ್ಮೆ ವಾಸ್ತು ಪ್ರಕಾರದ ದೋಷ ಇಲ್ಲವೇ ಕೆಟ್ಟ ಗ್ರಹ-ನಕ್ಷತ್ರಗಳ ಕಾರಣದಿಂದಾಗಿ, ಮನೆಯಲ್ಲಿ ದೋಷಗಳು ಕಂಡು ಬರುವ ಸಾಧ್ಯತೆಗಳಿವೆ. ಇದು ವ್ಯಕ್ತಿಯ ಶ್ರೇಯಸ್ಸಿಗೆ ಅಡಚಣೆ ಉಂಟು ಮಾಡಬಹುದು. ವಾಸ್ತು ಶಾಸ್ತ್ರದ ಪ್ರಕಾರ ಕೆಲ ಗಿಡ ಮರಗಳ ಕುರಿತು ಉಲ್ಲೇಖ ಮಾಡಲಾಗಿದ್ದು, ಅವುಗಳನ್ನು ಮನೆಯ ಸುತ್ತಮುತ್ತ ಇಟ್ಟರೆ ಅದರ ಪ್ರಯೋಜನ ಕಂಡುಕೊಳ್ಳಬಹುದು.

ವಾಸ್ತು ತಜ್ಞರ ಅನುಸಾರ, ವಿಷ್ಣು ಕಮಲ್ ಮತ್ತು ಲಕ್ಷ್ಮಿ ಕಮಲ್ ಸಸ್ಯಗಳನ್ನು ಮನೆಯಲ್ಲಿ ಜೋಡಿಯಾಗಿ ನೆಡುವುದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಎರಡು ವಿಭಿನ್ನ ಸಸ್ಯಗಳಾಗಿದ್ದು, ಇವುಗಳನ್ನು ನೆಡುವುದರಿಂದ ವ್ಯಕ್ತಿಯ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. .

ನೋಡುವಾಗ ಸ್ಪಷ್ಟವಾಗಿ ಕಮಲದ ಹೂವಿನಂತೆ ಕಂಡುಬರುತ್ತದೆ. ತಾಯಿ ಲಕ್ಷ್ಮಿ ಕುಳಿತುಕೊಳ್ಳುವ ಕಮಲದ ಹೂವಿನ ಬಣ್ಣ ಹಸಿರಾಗಿದ್ದು, ಈ ಹಿನ್ನಲೆಯಲ್ಲಿ ವಿಷ್ಣು ಕಮಲದ ಹೂವಿನ ಎಲೆಗಳ ಬಣ್ಣ ಬದಲಾಗುತ್ತಲೇ ಇರುವ ಜೊತೆಗೆ ಇದು ಕಂದು ಅಥವಾ ತಿಳಿ ಕೆಂಪು ಬಣ್ಣವನ್ನು ಹೊಂದಿರುತ್ತದೆ ಎನ್ನಲಾಗಿದೆ. ಲಕ್ಷ್ಮಿ ಕಮಲ್ ಮತ್ತು ವಿಷ್ಣು ಕಮಲ ಕಡಿಮೆ ನೀರು ಇರುವ ಪ್ರದೇಶ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕಂಡುಬರುವ ಸಸ್ಯಗಳಾಗಿದ್ದು, ಈ ಸಸ್ಯಗಳು ರಸದಲ್ಲಿ ಸಮೃದ್ಧವಾಗಿರುತ್ತವೆ ಎನ್ನಲಾಗಿದೆ. ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ.

ಇದನ್ನು ಮನೆಯ ಮುಖ್ಯ ದ್ವಾರದಲ್ಲಿ ನೆಡುವುದು ಹೆಚ್ಚು ಪ್ರಯೋಜನಕಾರಿ ಇಲ್ಲವೇ ಮನೆಯ ಪೂರ್ವ-ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಉತ್ತಮ ಫಲಿತಾಂಶ ಲಭ್ಯವಾಗಲಿದೆ. ತುಳಸಿ ಗಿಡದಂತೆ ಈ ಗಿಡಗಳನ್ನು ಕೂಡ ಪೂಜಿಸಲಾಗುತ್ತದೆ. ಈ ಗಿಡಗಳನ್ನು ಜೋಡಿಯಾಗಿ ನೆಡುವುದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ. ವ್ಯವಹಾರದಲ್ಲಿ ಕೂಡ ಶ್ರೇಯಸ್ಸು ಗಳಿಸಲು ಸಾಧ್ಯವಾಗುತ್ತದೆ.