Home Breaking Entertainment News Kannada DDLJ ರಿಮೇಕ್ ನಲ್ಲಿ ವಿಜಯ್ ದೇವರಕೊಂಡ | ಶಾರುಖ್ ಗೆ ಸ್ಟಾರ್ ಪಟ್ಟ ಕೊಟ್ಟ ಈ...

DDLJ ರಿಮೇಕ್ ನಲ್ಲಿ ವಿಜಯ್ ದೇವರಕೊಂಡ | ಶಾರುಖ್ ಗೆ ಸ್ಟಾರ್ ಪಟ್ಟ ಕೊಟ್ಟ ಈ ಸಿನಿಮಾದಲ್ಲಿ ಲೈಗರ್ ನಟ| ಬಾಲಿವುಡ್ ಈ ಬಗ್ಗೆ ಏನಂತಿದೆ?

Hindu neighbor gifts plot of land

Hindu neighbour gifts land to Muslim journalist

ತಮ್ಮ ನಟನೆಯ ಮೂಲಕ ನಾರಿಯರ ಮನಗೆದ್ದಿರುವ ಜನಪ್ರಿಯ ನಟ ವಿಜಯ್ ದೇವರಕೊಂಡ ಟಾಲಿವುಡ್ ನ ಬಹುಬೇಡಿಕೆಯ ನಟ ಎಂದರು ತಪ್ಪಾಗದು. ‘ಲೈಗರ್’ ಚಿತ್ರ ತೆರೆಕಂಡು ಸಿನಿಮಾ ಸೋತರು ಕೂಡ , ವಿಜಯ್ ಫ್ಯಾನ್ ಫಾಲೋವರ್ಸ್ ಗಳಿಗೇನು ಕೊರತೆ ಬಂದಿಲ್ಲ.

ಇಂಡಿಯಾ ಲೆವೆಲ್‌ನಲ್ಲಿ ಫೇಮಸ್ ಆಗಿರುವ ನಟ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು. ಟಾಲಿವುಡ್‌ ರೌಡಿ ವಿಜಯ್ ದೇವರಕೊಂಡ ‘ಲೈಗರ್’ ಸಿನಿಮಾ ಪ್ರಚಾರದ ವೇಳೆ ಅವರ ಅಭಿಮಾನಿಗಳ ಪ್ರೀತಿ ಎಷ್ಟಿದೆ ಎಂಬುದು ಸಾಬೀತಾಗಿದೆ. ಈ ಬೆನ್ನಲ್ಲೇ ಟಾಲಿವುಡ್‌ನಲ್ಲಿ ಹೊಸ ವಿಚಾರವೊಂದು ಸದ್ದು ಮಾಡುತ್ತಿದೆ.

ಬಾಲಿವುಡ್‌ನ ಟಾಪ್ ಡೈರೆಕ್ಟರ್ ಆದಿತ್ಯ ಚೋಪ್ರಾ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಅದು ಅವರೇ ನಿರ್ದೇಶಿಸಿದ್ದ DDLJ ಸಿನಿಮಾದ ರಿಮೇಕ್ ಆಗುವ ಕುರಿತಾಗಿ ಅನೇಕ ಚರ್ಚೆಗಳು ನಡೆಯುತ್ತಿವೆ. ಸಿನಿಮಾ ಬಗ್ಗೆನೇ ಟಾಲಿವುಡ್‌ನಲ್ಲೀಗ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ಅಷ್ಟಕ್ಕೂ ಏನಿದು DDLJ ಮ್ಯಾಟರ್? ಈ ಸಿನಿಮಾ ಸೆಟ್ಟೇರೋದು ನಿಜವೇ? ಎಂಬ ಕುತೂಹಲ ಮೂಡಿಸುವುದು ಸಹಜ. ಆದರೆ, ಇದಕ್ಕೆ ಉತ್ತರ ಇಲ್ಲಿದೆ:

ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡಬೇಕೆಂಬ ಅಭಿಲಾಷೆ ಹಾಗೂ ಕನಸು ಕಂಡಿದ್ದ ವಿಜಯ್ ದೇವರಕೊಂಡ ಅದಕ್ಕಾಗಿಯೇ ‘ಲೈಗರ್’ ಸಿನಿಮಾ ಸೆಟ್ಟೇರಿತ್ತು. ಆದರೆ, ವಿಜಯ್ ಅವರ ಅದೃಷ್ಟ ಕೈ ಹಿಡಿಯದೇ, ಪುರಿ ಜಗನ್ನಾಥ್ ನಿರ್ದೇಶಿಸಿದ ಈ ಸಿನಿಮಾ ಹೀನಾಯವಾಗಿ ಸೋಲಿನ ರುಚಿ ಕಂಡಿತ್ತು.

ಈ ಸಿನಿಮಾ ವಿಜಯ್ ದೇವರಕೊಂಡ ವೃತ್ತಿ ಬದುಕಿನ ಅತಿ ದೊಡ್ಡ ದುರಂತ ಎಂದು ಸಾಬೀತಾಗಿದ್ದು, ಈ ಸೋಲಿನ ಬೆನ್ನಲ್ಲೇ ಹೊಸ ಸಿನಿಮಾ ಬಗ್ಗೆ ಹೆಚ್ಚಿನ ವಿಚಾರ ಹೊರ ಬಿದ್ದಿರಲಿಲ್ಲ. ಇದೀಗ, ವಿಜಯ್ ದೇವರಕೊಂಡ DDLJ ರಿಮೇಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಊಹಾ ಪೋಹ ಗಳು ಜೋರಾಗಿ ನಡೆಯುತ್ತಿದೆ.

ಕೆಲವು ದಿನಗಳಿಂದ ಹಲವು ತೆಲುಗು ಮೀಡಿಯಾಗಳಲ್ಲಿ ಈ ಬಗ್ಗೆ ಸುದ್ದಿಯಾಗುತ್ತಿದೆ. ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ರಿಮೇಕ್ ಆಗುತ್ತಿದ್ದು, ನಿರ್ದೇಶಕ ಆದಿತ್ಯ ಚೋಪ್ರಾ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

ಶಾರುಖ್ ಖಾನ್ ಪಾತ್ರದಲ್ಲಿ ನಟಿಸೋಕೆ ವಿಜಯ್ ದೇವರಕೊಂಡ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ, ಈ ಬಗ್ಗೆ ವಿಜಯ್ ದೇವರಕೊಂಡರವರಾಗಲೀ ಆದಿತ್ಯ ಚೋಪ್ರಾರವರಾಗಲಿ ಏನು ಮಾಹಿತಿ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲದಿದ್ದರೂ ಕೂಡ , ಟಾಲಿವುಡ್‌ನಲ್ಲಿ ಈ ಸುದ್ದಿ ವೈರಲ್ ಆಗುತ್ತಿದೆ.

ಧರ್ಮ ಪ್ರೊಡಕ್ಷನ್ ಬಳಿಕ ಯಶ್ ರಾಜ್ ಫಿಲ್ಮ್ಸ್ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡುವ ಸಲುವಾಗಿ ಕಾತುರದಿಂದ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದೆಲ್ಲಾ ಕೇವಲ ಗಾಳಿ ಸುದ್ದಿಯಷ್ಟೇ ಅಂತ ಬಾಲಿವುಡ್ ಮೂಲಗಳ ಹೇಳುತ್ತಿದ್ದು, ಆದಿತ್ಯಾ ಚೋಪ್ರಾ ತಮ್ಮದೇ ಎವರ್‌ಗ್ರೀನ್ ಸಿನಿಮಾ DDLJಯನ್ನು ರಿಮೇಕ್ ಮಾಡುವುದಿಲ್ಲ. ಅಂತಹ ಸಾಹಸಕ್ಕೆ ಯಾರೇ ಒತ್ತಾಯ ಮಾಡಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳುತ್ತಿದ್ದು, ಹೀಗಾಗಿ ಇದೆಲ್ಲಾ ಬರೀ ಸುಳ್ಳು ಸುದ್ದಿ ಎಂದು ಹೇಳಲಾಗುತ್ತಿದೆ.

ಸದ್ಯ ಸೋಲಿನ ಬಳಿಕ ವಿಜಯ್ ದೇವರಕೊಂಡ ಬ್ಲಾಕ್ ಬಸ್ಟರ್ ಸಿನಿಮಾ ನೀಡಿ ಜನರ ಮನ ಗೆಲ್ಲುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅವರು ‘ಖುಷಿ’ ಸಿನಿಮಾದ ಮೂಲಕ ಸಮಂತಾ ಅವರ ಜೊತೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಇದೆ. ಸದ್ಯ ಸಮಂತಾ ಆರೋಗ್ಯ ಸರಿಯಿರದೆ ಇರುವುದರಿಂದ ‘ಖುಷಿ’ ಚಿತ್ರೀಕರಣ ನಿಂತಿದೆ ಎನ್ನಲಾಗಿದೆ.