Home Entertainment ಒಬ್ಬ ಪ್ರಿಯಕರನಿಗಾಗಿ ಇಬ್ಬರು ಹುಡುಗಿಯರ ಬೀದಿ ಕಾಳಗ|ಪ್ರೀತಿಗಾಗಿ ಜಡೆಹಿಡಿದು ಕಿತ್ತಾಡಿದ ಹೆಣ್ಮಕ್ಕಳ ವಿಡಿಯೋ ವೈರಲ್

ಒಬ್ಬ ಪ್ರಿಯಕರನಿಗಾಗಿ ಇಬ್ಬರು ಹುಡುಗಿಯರ ಬೀದಿ ಕಾಳಗ|ಪ್ರೀತಿಗಾಗಿ ಜಡೆಹಿಡಿದು ಕಿತ್ತಾಡಿದ ಹೆಣ್ಮಕ್ಕಳ ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಪ್ರೀತಿಗಾಗಿ ಜಗಳವಾಡಿದ್ದನ್ನು ನಾವು ನೋಡಿದ್ದೇವೆ. ಅದೇನು ವಿಶೇಷವೇನಲ್ಲ. ಸಾಮಾನ್ಯವಾಗಿ ಒಂದೇ ಹುಡುಗಿಯ ಹಿಂದೆ ಇಬ್ಬರೋ ಅಥವಾ ಮೂವರೋ ಅಲೆದಾಡೋದನ್ನ ನಾವು ನೋಡಿದ್ದೇವೆ. ಹಾಗೇ ನನ್ನವಳು ಆಕೆ ಎಂದು ಹೊಡೆದಾಡಿಕೊಂಡಿದ್ದನ್ನು ಕೂಡ ಹಲವು ವೈರಲ್ ವಿಡಿಯೋಗಳಲ್ಲಿ ನೋಡಿದ್ದೇವೆ.ಆದ್ರೆ ಇಲ್ಲೊಂದು ಕಡೆ ವಿಚಿತ್ರವೆಂಬಂತೆ ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರು ರೋಡಲ್ಲೇ ಕಾಳಗ ಶುರು ಹಚ್ಚಿಕೊಂಡಿದ್ದಾರೆ.

ಹೌದು.ಇಲ್ಲಿ ಯುವತಿಯರಿಬ್ಬರು ಒಬ್ಬನನ್ನೇ ಪ್ರೀತಿಸುತ್ತಿದ್ದು, ಅವನ ವಿಚಾರವಾಗಿ ನಡು ರಸ್ತೆಯಲ್ಲೇ ಕೂದಲು ಹಿಡಿದು ಯರ್ರಾಬಿರ್ರಿ ಹೊಡೆದಾಡಿಕೊಂಡು ಪರಸ್ಪರ ಜಗಳವಾಡಿರುವ ವೀಡಿಯೋ ಇದೀಗ ವೈರಲ್‌ ಆಗಿದೆ.ಈ ಘಟನೆ ತಮಿಳುನಾಡಿನ ಚೆನ್ನೈನ ಕಾಲೇಜೊಂದರಲ್ಲಿ ನಡೆದಿದ್ದು, ಅದೇ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಇಬ್ಬರು ಹುಡುಗಿಯರು ಒಬ್ಬನನ್ನೇ ಪ್ರೀತಿಸುತ್ತಿದ್ದಾರೆ.

ಕಾಲೇಜು ಮುಗಿದ ನಂತರ ಅಣ್ಣಾ ಬಸ್​​ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಯುವಕನನ್ನು ಪ್ರೀತಿಸುತ್ತಿದ್ದ ವಿಚಾರವಾಗಿ ನಡು ರಸ್ತೆಯಲ್ಲೇ ಇಬ್ಬರು ಪರಸ್ಪರ ಕೂದಲೆಳೆದು ಕಿತ್ತಾಡಿದ್ದಾರೆ ಎನ್ನಲಾಗಿದ್ದು,ಘಟನೆಯ ವಿಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.