Home Entertainment ನಾಳೆ ಸಿಹಿ ಸುದ್ದಿ ನೀಡುತ್ತೇನೆಂದು ಟ್ವೀಟ್ ಮಾಡಿದ ಮೋಹಕ ತಾರೆ ರಮ್ಯಾ

ನಾಳೆ ಸಿಹಿ ಸುದ್ದಿ ನೀಡುತ್ತೇನೆಂದು ಟ್ವೀಟ್ ಮಾಡಿದ ಮೋಹಕ ತಾರೆ ರಮ್ಯಾ

Hindu neighbor gifts plot of land

Hindu neighbour gifts land to Muslim journalist

ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟಿ, ಗ್ಲಾಮರ್ ಗೂ ಸೈ ನಟನೆಗೂ ಸೈ ಎನಿಸಿ ಈಗಲೂ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ನಟಿ ರಮ್ಯಾ ಅವರು ಸಿಹಿ ಸುದ್ದಿ ನೀಡುತ್ತೇನೆ ಎನ್ನುವ ಮೂಲಕ ಕುತೂಹಲ ಮುಟ್ಟಿಸಿದ್ದಾರೆ. ಒಂದು ಕಾಲದ ಎವರ್ಗ್ರೀನ್ ನಟಿ ಎಂದು ಕರೆಸಿಕೊಂಡಿರುವ ನಟಿ ರಮ್ಯಾ ಅವರಿಗೆ ಯಾರು ಸಾಟಿ ಇಲ್ಲ. ಅಷ್ಟು ಚೆಂದದ ಮುದ್ದಾದ ನಟಿ ರಮ್ಯಾ.

ಸಿನಿಮಾ ರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ ನಂತರ ನಟಿ ಅನಂತರ ರಾಜಕೀಯದತ್ತ ಗಮನ ಹರಿಸಿ ಈಗ ಅಲ್ಲೂ ಹೆಸರು ಮಾಡಿದ ಪ್ರತಿಭಾವಂತೆ. ಈಗ ರಮ್ಯಾ ಮಾಡಿರುವ ಟ್ವೀಟ್, ಭಾರೀ ಸುದ್ದಿ ಮಾಡುತ್ತಿದೆ. ಏಕೆಂದರೆ ಅವರ ಅಭಿಮಾನಿಗಳು ಈ ಟ್ವೀಟ್ ಗೆ ಪ್ರತಿಕ್ರಿಯಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

“ನಾಳೆ ನಿಮ್ಮೊಂದಿಗೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳಲಿದ್ದೇನೆ” ‘ನಾನು ಕೈಗೊಳ್ಳುವ ನಿರ್ಧಾರದ ಬಗ್ಗೆ ನೀವು ಯೋಚಿಸುವುದಿಲ್ಲವೇ? ನಾಳೆ ಬೆಳಗ್ಗೆ 11.15ಕ್ಕೆ ನಾನೊಂದು ಸಿಹಿ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ. ಇದು ಅಧಿಕೃತ’
ಎಂದು ನಟಿ, ರಾಜಕಾರಣಿ ರಮ್ಯಾ ಸಾಮಾಜಿಕ ಮಾಧ್ಯಮದಲ್ಲಿ ಮಂಗಳವಾರ ಪೋಸ್ಟ್ ಪ್ರಕಟಿಸಿದ್ದಾರೆ.

ಈ ಟ್ವೀಟ್ಚಗೆ ‘ನಿಮ್ಮ ನಿರ್ಧಾರ ಏನೇ ಆಗಿರಲಿ, ದೇವರು ನಿಮಗೆ ಒಳ್ಳೆಯದು ಮಾಡಲಿ. ಖುಷಿಯಾಗಿರಿ’ ಎಂದು ತಮಿಳುನಾಡು ಕಾಂಗ್ರೆಸ್ ಐಟಿ ವಿಭಾಗದ ಅಧ್ಯಕ್ಷ ಕೆ.ಟಿ ಲಕ್ಷ್ಮೀಕಾಂತನ್ ಎಂಬುವವರು ಶುಭ ಕೋರಿದ್ದಾರೆ.

ಆದರೆ ರಮ್ಯಾ ಅಭಿಮಾನಿಗಳಂತೂ, ‘ಇದು ಮದುವೆ ಸಂಬಂಧಿಸಿದ್ದೋ ಅಥವಾ ಹೊಸ ಸಿನಿಮಾದಲ್ಲೇನಾದರೂ ನಟಿಸುತ್ತಿದ್ದೀರೋ’ ಎಂದು ಪ್ರಶ್ನೆ ಮಾಡಿದ್ದು, ಅಂತೂ ಕುತೂಹಲಕ್ಕೆ ದಾರಿ ಮಾಡಿ ಕೊಟ್ಟಿದ್ದಾರೆ ರಮ್ಯಾ ಎಂದೇ ಹೇಳಬಹುದು.