Home Breaking Entertainment News Kannada ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಡಾಲಿ!

ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಡಾಲಿ!

Hindu neighbor gifts plot of land

Hindu neighbour gifts land to Muslim journalist

ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ಟೀವ್ ಆಗಿದ್ದಾರೆ. ತಮ್ಮ ಸಿನಿಮಾ ಪ್ರಚಾರದ ಅಷ್ಟೂ ವಿಷಯಗಳನ್ನ ಹಂಚಿಕೊಂಡಿರುತ್ತಾರೆ. ತಮ್ಮ ಅಧಿಕೃತ ಪೇಜ್ ಮೂಲಕವೇ ಎಲ್ಲರಿಗೂ ಅದನ್ನ ತಿಳಿಸೋ ಕೆಲಸ ಮಾಡ್ತಾರೆ. ಧನಂಜಯ್ ಎಂದೂ ಸುಮ್ನೆ ಏನೂ ಬರೆಯೋದಿಲ್ಲ. ಹಾಗೆ ಏನೇನೋ ಬರೆದು ವಿವಾದಗಳನ್ನ ಮೈ ಮೇಲು ಎಳೆದುಕೊಳ್ಳೊದಿಲ್ಲ. ಹೀಗಿರೋವಾಗ ಜನರ ತಲೆಗೆ ಹುಳ ಬಿಡೋ ಕೆಲಸ ಮಾಡ್ತಾರಾ? ಇಲ್ಲ ಬಿಡಿ ಅನ್ನೋ ಹೊತ್ತಿಗೆ ಅಂತಹದ್ದೇ ಒಂದು ವೀಡಿಯೋ ಈಗ ವೈರಲ್ ಆಗಿದೆ.

ಧನಂಜಯ್ ಸಿನಿಮಾ ಪ್ರಚಾರಕ್ಕೆ ಹೊಸ ಐಡಿಯಾ ಮಾಡಿದ್ರಾ? ಗೊತ್ತಿಲ್ಲ ಬಿಡಿ. ಈಗ ಬಿಟ್ಟಿರೋ ಒಂದು ವೀಡಿಯೋ ಎಲ್ಲರೂ ತೆಲೆಕೆರೆದುಕೊಳ್ಳುವಂತೆ ಮಾಡಿದೆ. ಏನಿರಬಹುದು ಅಂತಲೂ ಎಲ್ಲರೂ ಯೋಚ್ನೆ ಮಾಡ್ತಿದ್ದಾರೆ. ಹೀಗೆ ಅಂದುಕೊಳ್ಳುವಂತನೇ ಧನಂಜಯ್ ಈ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ವಿಟರ್​ ನಲ್ಲಿ ಇರೋವಿಡಿಯೋ ಏನು? 12-1 = 23 ಅಂದ್ರೇನೂ? ಇದನ್ನ ಡಾಲಿ ಧನಂಜಯ್ ಅವರೇ ಹೇಳಬೇಕು. ಈಗಾಗಲೇ ಇವರ ನಿರ್ಮಾಣದ ಸಿನಿಮಾ ಸೆಟ್ಟೇರಿದೆ. ಅದರ ಕೆಲಸ ಕೂಡ ನಡೆಯುತ್ತಿದೆ. ಇನ್ನು ಡಾಲಿ ಧನಂಜಯ್ ಅಭಿನಯದ ಜಮಾಲಿಗುಡ್ಡ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಅದು ಇದೇ 30 ಅನ್ನೋದು ಕೂಡ ಗೊತ್ತಿದೆ.

ಹಾಗಿದ್ರೆ ಈ ನಂಬರ್ ಏನು?ಉತ್ತರಕಾಂಡ ಸಿನಿಮಾದ ನಾಯಕಿ ರಮ್ಯ ಕೂಡ ಇದಕ್ಕೆ ರಿಯಾಕ್ಟ್ ಮಾಡಿದ್ದಾರೆ. ಇದು ನಿಮ್ಮ ಮದುವೆ ಡೇಟಾ ಅಂತಲೂ ಪ್ರಶ್ನೆ ಮಾಡಿದ್ದಾರೆ. ಆದರೆ ಇದು ಹಾಗೆ ಕಾಣೋದಿಲ್ಲ ಬಿಡಿ. ಯಾಕೆಂದ್ರೆ, ಧನಂಜಯ್ ತಮ್ಮ ಬಡವ ರಾಸ್ಕಲ್ ಚಿತ್ರದ 50 ದಿನದ ಶೀಲ್ಡ್ ನೋಡಿಯೇ ಯೋಚ್ನೆ ಕೂಡ ಮಾಡ್ತಾರಾ.

ಹಾಗಾಗಿಯೇ ಅದಕ್ಕೇನಾದ್ರೂ ಈ ನಂಬರ್ ರಿಲೇಟ್ ಆಗಿದಿಯಾ ಅನ್ನೋ ಡೌಟ್ ಕೂಡ ಇದೆ. ಲಿ ಮದುವೆ ಡೇಟ್ ಹಿಂಗೆ ಬರೆದ್ರಾ? ಒಟ್ಟಿನಲ್ಲಿ ಇವೆಲ್ಲಾ ಪ್ರಶ್ನೆಗಳಿಗೆ ಡಾಲಿನೇ ಉತ್ತರ ಕೊಡಬೇಕಾಗಿದೆ ಅಷ್ಟೇ.