Home Entertainment ಬಿಗ್‌ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿ ಹೊಸ ಸಿನಿಮಾ ಬಿಡುಗಡೆ | ಸಿನಿಮಾ ವಿಶೇಷತೆ ಏನು ಗೊತ್ತಾ?

ಬಿಗ್‌ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿ ಹೊಸ ಸಿನಿಮಾ ಬಿಡುಗಡೆ | ಸಿನಿಮಾ ವಿಶೇಷತೆ ಏನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಮನೆಯ ಮೂಲಕ ಎಲ್ಲರ ಮನ ಗೆದ್ದ ಕರಾವಳಿಯ ಪ್ರತಿಭೆಯ ರೂಪೇಶ್ ಶೆಟ್ಟಿ ಬಗ್ಗೆ ಹೊಸ ವಿಚಾರವೊಂದು ಹೊರ ಬಿದ್ದಿದ್ದು, ಈ ವಿಚಾರ ತಿಳಿದರೆ ರೂಪಿ ಅಭಿಮಾನಿಗಳು ಫುಲ್ ಖುಷ್ ಆಗೋದು ಪಕ್ಕಾ!!!ಹೌದು!!! ಅರೇ…ಅಂತಹ ವಿಚಾರ ಏನಪ್ಪಾ ಅಂತ ಯೋಚಿಸ್ತಾ ಇದ್ದಿರಾ??

ಬಿಗ್ ಬಾಸ್ ಮನೆಯ ಆಟದ ಮೂಲಕ ಕನ್ನಡಿಗರ ಮನ ಗೆದ್ದ ರೂಪೇಶ್ ಶೆಟ್ಟಿ ಇದೀಗ ತನ್ನ ನಟನೆಯ ಮೂಲಕ ಸೈ ಎನಿಸಿಕೊಳ್ಳಲು ಅಣಿಯಾಗಿದ್ದಾರೆ. ಹೌದು!!ರೂಪೇಶ್ ಶೆಟ್ಟಿ ದೊಡ್ಮನೆ ಗೆ ಎಂಟ್ರಿ ಕೊಡುವ ಮೊದಲೇ ಒಂದು ಸಿನಿಮಾ ಮಾಡಿದ್ದು, ದೊಡ್ಡ ಪರದೆಯ ಮೇಲೆ ಅದ್ಬುತವಾಗಿ ನಟಿಸಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು, ಆದರೆ ಸಿನಿಮಾ ಮಾತ್ರ ಕಾರಣಾಂತರಗಳಿಂದ ರಿಲೀಸ್ ಆಗದೇ ಬಾಕಿ ಉಳಿದಿತ್ತು.

ಬಿಗ್ ಬಾಸ್ ವಿನ್ನರ್ ರೂಪೇಶ್ (Bigg Boss Roopesh Shetty Movie) ಶೆಟ್ಟಿ ಅದೃಷ್ಟ ಪರೀಕ್ಷೆಗೆ ಸಿದ್ದರಾಗಿದ್ದು, ಈಗಾಗಲೇ ದೊಡ್ಮನೆಯಲ್ಲಿ ಪ್ರೇಕ್ಷಕರ ದಿಲ್ ಕದ್ದು, ಬಣ್ಣದ ಲೋಕದಲ್ಲಿ ತನ್ನ ಪ್ರತಿಭೆಯ ಅನಾವರಣಕ್ಕೆ ಕೈ ಹಾಕಿದ್ದು (Roopesh Shetty New Movie) ಇಲ್ಲು ಕೂಡ ಕನ್ನಡಿಗರ ಪ್ರೀತಿ ವಿಶ್ವಾಸ ಪಡೆಯಲು ಸಜ್ಜಾಗಿದ್ದಾರೆ . ರೂಪೇಶ್ (Roopesh Shetty Movie Release Soon) ಅವರ ಹೊಸ ಸಿನಿಮಾದ ಹೆಸರು ಕೂಡ ವಿಭಿನ್ನ ವಾಗಿದ್ದು, ಅದರ ವಿಶೇಷತೆಯ ಬಗ್ಗೆ ಜನತೆಯ ಮುಂದಿಡಲು ಟ್ರೈಲರ್ (Roopesh Shetty Film Trailer Release Soon) ಅನ್ನು ಸಿನಿಮಾ ತಂಡ ರಿಲೀಸ್ ಮಾಡುತ್ತಿದೆ.

ರೂಪೇಶ್ ಶೆಟ್ಟಿ ಮುಖ್ಯ ಭೂಮಿಕೆಯ ಬಣ್ಣ ಹಚ್ಚಿರುವ ಚಿತ್ರದ ಶೀರ್ಷಿಕೆ ಮಂಕು ಭಾಯ್ ಫಾಕ್ಸಿ ರಾಣಿ ಎಂದಾಗಿದ್ದು, ರೂಪೇಶ್ ಶೆಟ್ಟಿ ಅಭಿನಯದ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲೇ ಬಹುತೇಕ ಪೂರ್ಣಗೊಂಡಿವೆ. ಚಿತ್ರ ತಂಡ ಈಗ ಸಿನಿಮಾ ಟ್ರೈಲರ್ ರಿಲೀಸ್ ಮಾಡುವ ಯೋಜನೆಯ ಜೊತೆಗೆ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇದೇ ತಿಂಗಳ 13 ರಂದು ಚಿತ್ರವನ್ನ ತೆರೆಗೆ ತರುವ ಯೋಜನೆ ಸಿನಿಮಾ ತಂಡ ಹಾಕಿಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಜನವರಿ-5 ರಂದು ಚಿತ್ರದ ಟ್ರೈಲರ್​ ಅನ್ನು ಬೆಳಗ್ಗೆ 10.30ಕ್ಕೆ ರಿಲೀಸ್ ಮಾಡಲು ಸಿನಿಮಾ ಟೀಮ್ ಪ್ಲಾನ್ ಮಾಡಿಕೊಂಡಿದ್ದು, ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಮಾಡಲಾಗುತ್ತದೆ ಎನ್ನಲಾಗಿದೆ.

ಈ ಚಿತ್ರದ ಹಾಡುಗಳು ರಿಲೀಸ್ ಆಗಿದ್ದು, ಈಗಾಗಲೇ ಜನರ ಮನ ಸೆಳೆಯುವ ಕಾರ್ಯಕ್ಕೆ ಮುಂದಾಗಿದೆ.ಮಂಕು ಭಾಯ್ ಫ್ರಾಕ್ಸಿ ರಾಣಿ ಚಿತ್ರಕ್ಕೆ ಶಮೀರ್ ಮುಡಿಪು ಚಿತ್ರಕ್ಕೆ ಸಂಗೀತ ನೀಡಿದ್ದರೆ, ಗಗನ್ ಎಂ ಡೈರೆಕ್ಟ್ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಮತ್ತು ಗೀತಾ ಭಾರತಿ ಭಟ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ಜನರ ಮನದಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕಿದೆ.

ಈ ಚಿತ್ರದಲ್ಲಿ ರೂಪೇಶ್ ರೂಪವೇ ವಿಭಿನ್ನವಾಗಿದ್ದು, ಈ ಚಿತ್ರದಲ್ಲಿ ಇನ್ನೂ ಒಬ್ಬ ವಿಶೇಷ ಕಲಾವಿದರೊಬ್ಬರು ಅಭಿನಯಿಸಿದ್ದು, ಕನ್ನಡದ ಕಿರುತೆರೆಯಲ್ಲಿ ವಿಶೇಷವಾಗಿಯೇ ಹೆಸರು ಮಾಡಿದ ಗೀತಾ ಭಾರತಿ ಭಟ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ರೂಪೇಶ್ ಶೆಟ್ಟಿ ಅಭಿನಯದ ಹೊಸ ಸಿನಿಮಾ ರಿಲೀಸ್ ಆಗುವ ಮೊದಲೇ ಜನರಲ್ಲಿ ಕುತೂಹಲ ಮನೆ ಮಾಡಿದ್ದು, ಸಿನಿಮಾ ರಿಲೀಸ್ ಆಗೋದನ್ನು ಜನ ಕಾತುರದಿಂದ ಎದುರು ನೋಡುತ್ತಿದ್ದಾರೆ.