Home Breaking Entertainment News Kannada Kantara : ಕಾಂತಾರ ಸಿನಿಮಾ ಇಂಗ್ಲೀಷ್‌ ನಲ್ಲಿ ಬರುತ್ತಾ? ಸಂಭಾಷಣೆ ಯಾವ ರೀತಿ ಇರಬಹುದು?

Kantara : ಕಾಂತಾರ ಸಿನಿಮಾ ಇಂಗ್ಲೀಷ್‌ ನಲ್ಲಿ ಬರುತ್ತಾ? ಸಂಭಾಷಣೆ ಯಾವ ರೀತಿ ಇರಬಹುದು?

Hindu neighbor gifts plot of land

Hindu neighbour gifts land to Muslim journalist

ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ಗಮನ ಹರಿಸುವಂತೆ ಮಾಡಿದ ಕಾಂತಾರ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲ, ಎಷ್ಟು ಬಾರಿ ನೋಡಿದರೂ ಸಾಲದು ಎಂಬಂತೆ ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದ ಸಿನಿ ಪ್ರಿಯರಿಗೆ ಅಮೆಜಾನ್ ಪ್ರೈಮ್ ಅಲ್ಲಿ ರಿಲೀಸ್ ಕೂಡ ಆಗಿ ಹೆಚ್ಚಿನ ವ್ಯೂಸ್ ಕೂಡ ಪಡೆದಿದೆ.

ಕಾಂತಾರ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ವಿವರಿಸಬೇಕಾಗಿಲ್ಲ!! ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಸಿನಿಮಾ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಇಂದಿಗೂ ಕನ್ನಡದ ಕಾಂತಾರ ಅರ್ಭಟ ಕಮ್ಮಿ ಆಗಿಲ್ಲ.

ಇದೀಗ ಹೊಸ ಕುತೂಹಲಕಾರಿ ಸಂಗತಿ ಹೊರ ಬಿದ್ದಿದ್ದು, ಕಾಂತಾರ ಸಿನಿಮಾ ಇಂಗ್ಲಿಷ್​ಗೆ ಡಬ್ಬಿಂಗ್ ಆಗುತ್ತಾ? ಹಾಗಾದ್ರೆ ಡೈಲಾಗ್ಸ್ ಹೇಗೆ ಬರಬಹುದು ಎಂಬ ಪ್ರಶ್ನೆ ಸಹಜವಾಗಿ ಸಿನಿ ಪ್ರಿಯರಿಗೆ ಕಾಡುತ್ತಿದೆ.

ರಿಷಬ್ ಶೆಟ್ಟಿ ನಾಯಕರಾಗಿರುವ ಚಿತ್ರವನ್ನು ತೆಲುಗಿನಲ್ಲಿ ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರವಿಂದ್ ನಿರ್ಮಿಸಿದ್ದಾರೆ. ಇದು ಅಕ್ಟೋಬರ್ 15 ರಂದು ಬಿಡುಗಡೆಯಾಗಿದೆ. ಕಾಂತಾರ ಸಿನಿಮಾ ಬಿಡುಗಡೆಯಾದ ಬಳಿಕ ಎಲ್ಲ ಭಾಷೆಗಳಲ್ಲಿಯೂ ಸಖತ್ ಕಲೆಕ್ಷನ್ ಮಾಡಿದ್ದು, ಹಿಂದಿಯಲ್ಲಿ 75 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು ಟಾಲಿವುಡ್​ನಲ್ಲಿ ಸುಮಾರು 60 ಕೋಟಿ ಗಳಿಸಿದೆ.


ಅಮೆಜಾನ್ ಪ್ರೈಮ್ ವಿಡಿಯೋ ಕಾಂತಾರ ಡಿಜಿಟಲ್ ಹಕ್ಕುಗಳನ್ನು ದೊಡ್ಡ ಬೆಲೆಗೆ ಪಡೆದು ಕೊಂಡಿದ್ದು, ನವೆಂಬರ್ 24 ರಿಂದ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ನಡುವೆ ಈ ಸಿನಿಮಾ ಇಂಗ್ಲಿಷ್ ಭಾಷೆಗೂ ಡಬ್ ಆಗಲಿದೆ ಎನ್ನುವ ವಿಚಾರ ಎಲ್ಲೆಡೆ ಸಂಚಲನ ಮೂಡಿಸಿದೆ.

ಸಿನಿಮಾದಲ್ಲಿ ಗ್ರಾಮೀಣ ಭಾಷೆಯ ಸೊಡಗು ಇರುವುದರಿಂದ ಜೊತೆಗೆ ಅದೇ ಸಿನಿಮಾದ ದೊಡ್ಡ ಹೈಲೈಟ್ ಆಗಿರುವುದರಿಂದ ಇಂಗ್ಲಿಷ್​ನಲ್ಲಿ ಸಿನಿಮಾ ಹೇಗೆ ಬರಲಿದೆ ಎಂಬ ಕುತೂಹಲ ಸಹಜವಾಗಿ ಮೂಡಿಸಿದೆ

ಈ ಸಿನಿಮಾ ಈಗಾಗಲೇ ತೆಲುಗು ಹಾಗೂ ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಲಭ್ಯವಿದ್ದು, ನಿರ್ಮಾಪಕರು ಈ ಸಿನಿಮಾವನ್ನು ಇಂಗ್ಲಿಷ್‌ನಲ್ಲೂ ಡಬ್ ಮಾಡಿ ಬಿಡುಗಡೆ ಮಾಡಲಿದ್ದಾರೆ. ಆದರೆ ಇಂಗ್ಲಿಷ್ ವರ್ಷನ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವುದೋ ಇಲ್ಲವೆ OTT ಗೆ ಸೀಮಿತಗೊಳಿಸಲಾಗುತ್ತದೆಯೇ ಎಂಬ ಮಾಹಿತಿ ತಿಳಿದು ಬಂದಿಲ್ಲ.


ಕಾಂತಾರ ಸಿನಿಮಾದ ಅಬ್ಬರ ಕಂಡವರೆಲ್ಲ ಕಾಂತಾರ ಇಂಗ್ಲೀಷ್ ವರ್ಷನ್ ಹೇಗಿರಬಹುದು?? ಇದರ ಡೈಲಾಗ್ ಹೇಗಿರಬಹುದು? ಸಾಂಗ್ ಹೇಗೆ ಬರಬಹುದು ಎಂದು ಚಿಂತನೆ ಮಾಡುತ್ತಿದ್ದಾರೆ. ಹೇಗಿದ್ದರೂ ಹೈ ಕ್ವಾಲಿಟಿ ಡಬ್ಬಿಂಗ್ ಇರಲಿದೆ ಎನ್ನುವುದು ಸಿನಿಪ್ರಿಯರ ಅಭಿಪ್ರಾಯ ವಾಗಿದ್ದು, ಸಿನಿಮಾ ಬಿಡುಗಡೆಯಾದ ಬಳಿಕವಷ್ಟೆ ಎಲ್ಲರ ಕುತೂಹಲಕ್ಕೆ ತೆರೆ ಬೀಳಲಿದೆ.