Home Breaking Entertainment News Kannada Kantara : ಹಿಂದಿ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅಚ್ಚ ಕನ್ನಡದಲ್ಲಿ ಬರೆದುದು ಏನು ಗೊತ್ತಾ ?...

Kantara : ಹಿಂದಿ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅಚ್ಚ ಕನ್ನಡದಲ್ಲಿ ಬರೆದುದು ಏನು ಗೊತ್ತಾ ? 2023 ರ ಅಜೆಂಡಾ ರಿಷಬ್‌ ಶೆಟ್ಟಿ ಹಸ್ತಾಕ್ಷರಗಳಲ್ಲಿ

Hindu neighbor gifts plot of land

Hindu neighbour gifts land to Muslim journalist

ಕಾಂತಾರ ಸಿನೆಮಾದ ಎಲ್ಲೆಡೆ ಪ್ರಖ್ಯಾತಿ ಪಡೆದದ್ದಲ್ಲದೆ, ತನ್ನ ಹವಾ ಎಷ್ಟರಮಟ್ಟಿಗೆ ಕಾಯ್ದುಕೊಂಡಿದೆ ಎಂಬುದಕ್ಕೆ ಜೀವಂತ ದೃಷ್ಟಾಂತ ಎಂಬಂತೆ ಅಂತಾರಾಷ್ಟ್ರೀಯ ಪ್ರತಿಷ್ಠಿತ ಫ್ರಂಟ್‍ಲೈನ್ ಮ್ಯಾಗಜಿನ್‍ನಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡು ಜಗತ್ತಿನ ಹೆಮ್ಮೆಯ ಗರಿಯನ್ನು ತನ್ನತ್ತ ಬಾಚಿಕೊಂಡಿದೆ.


ಜಗತ್ತಿನಾದ್ಯಂತ ಸಂಚಲನ ಮೂಡಿಸಿದ್ದ ‘ಕಾಂತಾರ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿ ಯಶಸ್ವಿ ಪ್ರದರ್ಶನ ಕಂಡು ಓಟಿಟಿಗೆ ಬಂದಿದೆ. ಹೀಗಿದ್ದರೂ ಕೂಡ ಥಿಯೇಟರ್‌ಗಳಲ್ಲಿ ಈಗಲೂ ರಿಷಬ್ ಶೆಟ್ಟಿ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಜನರಲ್ಲಿ ಕುತೂಹಲ ಮನೆ ಮಾಡಿದೆ. ಡಿವೈನ್ ಸ್ಟಾರ್ ಮುಂದಿನ ಅಜೆಂಡಾ ಏನಿರಬಹುದು ಎಂದು ಅಭಿಮಾನಿಗಳ ನಡುವೆ ಚರ್ಚೆ ನಡೆಯುತ್ತಿದ್ದು , ಈ ಬಗ್ಗೆ ರಿಷಬ್ ಶೆಟ್ಟಿ ಅವರನ್ನು ಕೇಳಿದಾಗ ಅವರು ಏನು ಹೇಳಿದರು ಗೊತ್ತಾ???

ದಸರಾ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ’ ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮೊದಲಿದ್ದ ದಾಖಲೆಗಳನ್ನು ಪುಡಿ ಪುಡಿ ಮಾಡಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಸದ್ದು ಮಾಡುತ್ತಿದೆ .

ಕಾಂತಾರ ಸಿನಿಮಾದ ಮೂಲಕ ತನ್ನ ಸುದೀರ್ಘ ಸಿನಿಮಾರಂಗದಲ್ಲಿ ತೊಡಗಿಸಿ ಕೊಂಡಿದ್ದರ ಪ್ರತಿಫಲವಾಗಿ ರಾತ್ರೋ ರಾತ್ರಿ ದೊಡ್ಡ ನೇಮ್ ಫೇಮ್ ಪಡೆದುಕೊಂಡು ರಿಷಬ್ ಶೆಟ್ಟಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿ ಬಿಟ್ಟಿದ್ದಾರೆ.
ಈ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗವು ತಿರುಗಿ ನೋಡುವಂತೆ ಮಾಡಿ ದೇಶಾದ್ಯಂತ ಕ್ರೇಜ್ ಸೃಷ್ಟಿಯಾಗಿದ್ದು, ಸಾಲು ಸಾಲು ರಾಷ್ಟ್ರೀಯ ಮಾಧ್ಯಮಗಳ ಸಂದರ್ಶನಗಳಲ್ಲಿ ರಿಷಬ್ ಶೆಟ್ಟಿ ಭಾಗವಹಿಸುವ ಅವಕಾಶ ಬಾಚಿಕೊಂಡಿದ್ದಾರೆ.

ಇತ್ತೀಚೆಗೆ ಎಲ್ಲ ಕಾರ್ಯ ಕ್ರಮಗಳಲ್ಲಿ ಕೂಡ ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಬಿಟ್ಟಿದ್ದಾರೆ. ಆಜ್‌ ತಜ್ ವಾಹಿನಿಯ ‘ಅಜೆಂಡಾ ಆಜ್ ತಕ್ 2022’ ಸಂವಾದ ಕಾರ್ಯಕ್ರಮ ವೇದಿಕೆಗೆ ಮುಖ್ಯ ಅತಿಥಿಯಾಗಿ ಹೋಗುವ ಅವಕಾಶ ಒದಗಿ ಬಂದಿದ್ದು, ಈ ವೇಳೆ ಅವರು ಕೇಳಿದ ಕೂತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದು, ಅಲ್ಲಿಯೂ ಕೂಡ ತನ್ನ ನಾಡಿನ , ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವ ಪ್ರಯತ್ನ ನಡೆಸಿದ್ದಾರೆ.

‘ಕಾಂತಾರ’ ಭರ್ಜರಿ ಗೆಲುವಿನ ಬಳಿಕ, ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆ ರಿಷಬ್ ಶೆಟ್ಟಿಗೆ ಎದುರಾಗಿದ್ದು, ಶೆಟ್ರು ಎಲ್ಲೆ ಹೋದರೂ ಅಭಿಮಾನಿಗಳಿಂದ ಕೇಳಿ ಬರುತ್ತಿರುವ ಪ್ರಶ್ನೆ ಒಂದೇ!!! ಇನ್ನು ಮುಂದಿನ ಅಜೆಂಡಾ ಏನು?? ‘ಅಜೆಂಡಾ ಆಜ್ ತಕ್ 2022’ ವೇದಿಕೆಯಲ್ಲೂ ಇದೇ ಪ್ರಶ್ನೆ ಕೇಳಿದ್ದಾರೆ. ಸಂವಾದ ಕಾರ್ಯಕ್ರಮದ ಕೊನೆಯಲ್ಲಿ ನಿರೂಪಕಿ ನಿಮ್ಮ ಮುಂದಿನ ಅಜೆಂಡಾ ಏನು ಎನ್ನುವುದನ್ನು ಡಿಜಿಟಲ್ ಸ್ಕ್ರೀನ್ ಮೇಲೆ ಬರೆದು ತೋರಿಸಿ ಎಂದು ಕೇಳಿಕೊಂಡಿದ್ದಾರೆ.

ಇದಕ್ಕೆ ರಿಷಬ್ ಶೆಟ್ರು ಕನ್ನಡದಲ್ಲೇ ಬರೆಯುತ್ತೇನೆ ಎಂದು ಕೇಳಿಕೊಂಡಿದ್ದು, ಆಗ ನಿರೂಪಕಿ ಖಂಡಿತ ಬರೆಯಿರಿ, ಅದನ್ನು ತರ್ಜುಮೆ ಮಾಡೋಣ ಎಂದಿದ್ದಾರೆ.. ರಿಷಬ್ ಶೆಟ್ಟಿ ಏನು ಬರೆಯಲಿದ್ದಾರೆ ಎಂಬ ಕುತೂಹಲ ಸಹಜವಾಗಿ ಎಲ್ಲರೂ ಮನೆ ಮಾಡಿತ್ತು .ಅದಕ್ಕೆ ಶೆಟ್ರು ತಮ್ಮದೇ ಶೈಲಿಯಲ್ಲಿ ‘ಕಾಯಕವೇ ಕೈಲಾಸ’ ಎಂದು ಬರೆದು ಎಲ್ಲರನ್ನು ಬೆರಗುಗೊಳಿಸಿದ್ದರು.

2023ರ ಅಜೆಂಡಾ ಏನು ಎಂದಾಗ ಸಹಜವಾಗಿ ಕಾಂತಾರ ಸಿನೆಮಾದ ನೆಕ್ಸ್ಟ್ ಪಾರ್ಟ್ ಬಗ್ಗೆಯೋ ಇಲ್ಲವೇ ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾ ಬಗ್ಗೆ ಬರೆಯಬಹುದು ಎಂದು ಊಹಿಸಲಾಗಿತ್ತು. ಇದಲ್ಲದೇ ಇದ್ದರೆ ಯಾವುದಾದರೂ ಪ್ರಶಸ್ತಿ ಬಗ್ಗೆ ಬರೆಯಲಿದ್ದಾರೆ ಎಂದುಕೊಂಡವರ ಯೋಚನಾ ಲಹರಿ ಗೆ ವಿರುದ್ಧವಾಗಿ ರಿಷಬ್ ಶೆಟ್ಟಿ ‘ಕಾಯಕವೇ ಕೈಲಾಸ’ ಎಂದು ಬಸವಣ್ಣನವರ ಮಂತ್ರವನ್ನು ಬರೆದು ಹಿಂದಿ ವೇದಿಕೆಯಲ್ಲಿ ಕೂಡ ಕನ್ನಡದ ಮಂತ್ರ ಜಪಿಸಿದ್ದಾರೆ. ಇದನ್ನು ರಿಷಬ್ ಕನ್ನಡದಲ್ಲೇ ಬರೆದು ಹೇಳಿದು ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದ್ದು, ಕನ್ನಡ ಪ್ರೀತಿಗೆ ಕನ್ನಡಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

‘ಕಾಂತಾರ’ ಸಿನಿಮಾ ಹಿಂದಿ ಬೆಲ್ಟ್‌ನಲ್ಲೂ ಸೂಪರ್ ಹಿಟ್ ಆಗಿ ಹೆಸರು ಪಡೆದಿದ್ದು, ಕೆಲ ದಿನಗಳ ಹಿಂದೆಯೇ ನೀವು ಬಾಲಿವುಡ್‌ಗೆ ಬರ್ತೀರಾ ಎಂದು ಹಲವರು ಪ್ರಶ್ನಿಸಿದ್ದು, ಅದಕ್ಕೆ ಉತ್ತರ ನೀಡುವಾಗ ಕೂಡ ಕನ್ನಡ ಚಿತ್ರರಂಗದ ಮೇಲೆ ತನಗಿರುವ ಅಭಿಮಾನ ಗೌರವವನ್ನೂ ಹೊರ ಹಾಕಿದ್ದಾರೆ. ರಿಷಬ್ ‘ನಾನು ಇವತ್ತು ಇಲ್ಲಿ ಇರಲು ಕಾರಣ ಕನ್ನಡ ಸಿನಿಮಾ, ಕನ್ನಡ ಪ್ರೇಕ್ಷಕರಾಗಿದ್ದು, ನನ್ನ ಆದ್ಯತೆ ಏನಿದ್ದರೂ ಕನ್ನಡಕ್ಕೆ ಮಾತ್ರ. ಸ್ಯಾಂಡಲ್‌ವುಡ್‌ ಬಿಟ್ಟು ಬೇರೆ ಕಡೆ ಬರುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಈ ನಡುವೆ ಅಭಿಮಾನಿಗಳು ‘ಕಾಂತಾರ’- 2 ಸಿನಿಮಾ ಮಾಡುವಂತೆ ಪಟ್ಟುಹಿಡಿದ್ದು, ಸದ್ಯಕ್ಕೆ ರಿಷಬ್ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ‘ಕಾಂತಾರ 2’ ಸಿನಿಮಾ ಮಾಡಬಹುದೇ ಎಂದು ಸ್ವತಃ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಚಿತ್ರತಂಡದವರು ದೈವದ ಅನುಮತಿಯನ್ನು ಕೇಳಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ದೈವವು ಕೆಲವು ಎಚ್ಚರಿಕೆಯ ಸೂಚನೆಗಳನ್ನು ನೀಡಿದೆ ಎನ್ನಲಾಗಿದ್ದು ಚಿತ್ರತಂಡಕ್ಕೆ ಸಿನಿಮಾ ಮಾಡಲು ಅನುಮತಿ ಕೂಡ ಸಿಕ್ಕಿದೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿವೆ.