Home Entertainment OSCAR 2022 : ತನ್ನ ಹೆಂಡತಿ ವಿರುದ್ಧ ಅವಹೇಳನದ ಮಾತನ್ನಾಡಿದ ಕ್ರಿಸ್ ರಾಕ್ ಗೆ ವೇದಿಕೆಯಲ್ಲೇ...

OSCAR 2022 : ತನ್ನ ಹೆಂಡತಿ ವಿರುದ್ಧ ಅವಹೇಳನದ ಮಾತನ್ನಾಡಿದ ಕ್ರಿಸ್ ರಾಕ್ ಗೆ ವೇದಿಕೆಯಲ್ಲೇ ಕಪಾಳಮೋಕ್ಷ ಮಾಡಿದ ಹಾಲಿವುಡ್ ನಟ ವಿಲ್ ಸ್ಮಿತ್ !

Hindu neighbor gifts plot of land

Hindu neighbour gifts land to Muslim journalist

ಲಾಸ್ ಏಂಜಲೀಸ್ ನ ಡಾಲ್ಟಿ ಥಿಯೇಟರ್ ನಲ್ಲಿ ನಡೆದ 94 ನೇ ಆಸ್ಕರ್ ಅವಾರ್ಡ್ ಕಾರ್ಯಕ್ರಮಕ್ಕೆ ಅದ್ದೂರಿ ತೆರೆಬಿದ್ದಿದೆ.

ಗಂಭೀರತೆ, ಹಾಸ್ಯ, ನಗುವಿನ ಜೊತೆ ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ಒಂದು ಕಹಿ ಘಟನೆ ನಡೆದಿದೆ. ಇಬ್ಬರು ಸೆಲೆಬ್ರಿಟಿಗಳ ಕಿತ್ತಾಟ ಆಸ್ಕರ್ ಈವೆಂಟ್ ನ ಖುಷಿಯನ್ನೇ ಕಿತ್ತುಕೊಂಡಿದೆ.

ನಡೆದಿದ್ದಾರೂ ಏನು ?
ಡಾಕ್ಯುಮೆಂಟರಿ ಫೀಚರ್ ವಿಭಾಗದಲ್ಲಿ ಪ್ರಶಸ್ತಿಯನ್ನು ಘೋಷಿಸಲು ಬಂದ ಕ್ರಿಸ್ ರಾಕ್ ಸಮಾರಂಭದಲ್ಲಿ ಭಾಗಿಯಾಗಿದ್ದ ಕೆಲವು ನಟರ ಬಗ್ಗೆ ತಮಾಷೆ ಮಾಡಿದ್ದಾರೆ. ಹಾಲಿವುಡ್ ನಟ ವಿಲ್ ಸ್ಮಿತ್ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಬಗ್ಗೆಯೂ ತಮಾಷೆಯ ಮಾತನ್ನಾಡಿದ್ದಾರೆ. ರಾಕ್ ಅವರು ವಿಲ್ ಸ್ಮಿತ್ ಅವರ ಪತ್ನಿ ಜಡಾ ತಮ್ಮ ತಲೆ ಬೋಳಿಸಿಕೊಂಡಿರುವ ಬಗ್ಗೆ ತಮಾಷೆ ಮಾಡಿ ನಕ್ಕಿದ್ದಾರೆ. ಆದರೆ ಈ ಮಾತನ್ನು ಕೇಳಿದ ತಕ್ಷಣವೇ ವಿಲ್ ಸ್ಮಿತ್ ವೇದಿಕೆ ಮೇಲೆ ಹೋಗಿ ಕ್ರಿಸ್ ರಾಕ್ ಅವರ ಕೆನ್ನೆಗೆ ಛಟೀರನೆಂದು ಬಾರಿಸಿದ್ದಾರೆ.

ಒಂದು ಕ್ಷಣ ಕೆಳಗಿದ್ದವರೆಲ್ಲಾ ಇದು ತಮಾಷೆಯೇನೋ ಅಂದುಕೊಂಡಿದ್ದರು. ಆದರೆ ಅನಂತರ ವಿಲ್ ಸ್ಮಿತ್ ನನ್ನ ಹೆಂಡತಿ ಹೆಸರನ್ನು ನಿನ್ನ ಕೆಟ್ಟ ಬಾಯಿಯಿಂದ ಹೇಳಬೇಡ ಎಂದು ಕಿರುಚಾಡಿದ್ದಾರೆ. ಇದನ್ನು ನೋಡಿದ ಎಲ್ಲರೂ ಆ ಕ್ಷಣ ಭಯಭೀತಗೊಂಡಿದ್ದಾರೆ. ಅನಂತರ ಕಾರ್ಯಕ್ರಮ ಮುಂದುವರಿದಿದೆ.

ವಿಲ್ ಸ್ಮಿತ್ ಕಿಂಗ್ ರಿಚರ್ಡ್ಸ್ ಸಿನಿಮಾದ ನಟನೆಗೆ ಅತ್ಯುತ್ತಮ ನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದರು. ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಹ ವಿಲ್ ಸ್ಮಿತ್ ಪಡೆದುಕೊಂಡರು. ಬಳಿಕ ಸ್ಮಿತ್ ಅಕಾಡೆಮಿಗೆ ಕ್ಷಮೆ ಕೇಳಿದರು. ಅಲ್ಲದೆ ಸಹ ಕಲಾವಿದರಿಗೂ ಕ್ಷಮೆಯಾಚಿಸಿದರು. ಆದರೆ ನೇರವಾಗಿ ರಾಕ್ ಅವರಿಗೆ ನೇರವಾಗಿ ಕ್ಷಮೆ ಕೇಳಿಲ್ಲ.