Home Breaking Entertainment News Kannada BBK 9 : ಬಿಗ್ ಬಾಸ್ ನಲ್ಲಿ ನಾಮಿನೇಟ್ ಆದ ಸ್ಟ್ರಾಂಗ್ ಸ್ಪರ್ಧಿಗಳು | ಆದರೆ...

BBK 9 : ಬಿಗ್ ಬಾಸ್ ನಲ್ಲಿ ನಾಮಿನೇಟ್ ಆದ ಸ್ಟ್ರಾಂಗ್ ಸ್ಪರ್ಧಿಗಳು | ಆದರೆ ಈ ವಾರ ಎಲಿಮಿನೇಷನ್ ಆಗಲ್ಲ!!

Hindu neighbor gifts plot of land

Hindu neighbour gifts land to Muslim journalist

ಕನ್ನಡಿಗರಲ್ಲಿ ಮನೆ ಮಾಡಿರುವ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಈಗಾಗಲೇ ನಮಗೆ ಗೊತ್ತೇ ಇದೆ. ಹಾಗೆಯೇ ಬಿಗ್ ಬಾಸ್​ನಲ್ಲಿ ಪ್ರತಿ ವಾರದ ನಾಮಿನೇಷನ್ ಹಾಗೂ ಎಲಿಮಿನೇಷನ್ ಪ್ರಕ್ರಿಯೆ ತಪ್ಪುವುದಿಲ್ಲ. ಇಡೀ ಸೀಸನ್​ನಲ್ಲಿ ಎಲ್ಲಾದರೂ ಒಮ್ಮೆ ಎಲಿಮಿನೇಷನ್​ ಇಲ್ಲದೆ ವಾರ ಪೂರ್ಣಗೊಳ್ಳುತ್ತದೆ. ಈ ಬಾರಿಯೂ ಬಿಗ್ ಬಾಸ್​​ನಲ್ಲಿ ಹಾಗೆಯೇ ಆಗುವ ಸೂಚನೆ ಸಿಕ್ಕಿದೆ.

ಈಗಾಗಲೇ ಸ್ಪರ್ಧಿಗಳ ಮೇಲೆ ಎಲಿಮಿನೇಷನ್​ ತೂಗುಗತ್ತಿ ಇದೆ. ಹೀಗಿರುವಾಗಲೇ ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ನಡೆಯೋದು ಅನುಮಾನ ಎನ್ನಲಾಗುತ್ತಿದೆ. ಬಿಗ್ ಬಾಸ್ ನೀಡಿದ ವಿಶೇಷ ಸೂಚನೆ ಹೀಗೊಂದು ಕುತೂಹಲವನ್ನು ಉಂಟು ಮಾಡಿದೆ.

ಬಿಗ್ ಬಾಸ್​ನಲ್ಲಿ ಈ ವಾರ ಎಲಿಮಿನೇಷನ್​ಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಅನುಭವಿ ಪ್ರಶಾಂತ್ ಸಂಬರ್ಗಿ ಅವರು ಕ್ಯಾಪ್ಟನ್ ಆಗಿದ್ದರಿಂದ ಇಮ್ಯುನಿಟಿ ಪಡೆದಿದ್ದು ಅಲ್ಲದೆ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ.

ವಿಶೇಷವಾಗಿ ಕಳೆದ ವಾರದ ಟಾಸ್ಕ್​ನಲ್ಲಿ ಸಿಕ್ಕ ಆಯ್ಕೆಯ ಪ್ರಕಾರ ವಿನೋದ್ ಗೊಬ್ಬರಗಾಲ ಅವರು ತಮ್ಮ ಸ್ವ ಇಚ್ಛೆಯಿಂದ ಕಾವ್ಯಾ ಅವರನ್ನು ನಾಮಿನೇಷನ್​ನಿಂದ ತಪ್ಪಿಸಿದ್ದಾರೆ. ಇದರಿಂದಾಗಿ ಕಾವ್ಯ ಅವರು ಸೇಫ್ ಆಗಿದ್ದಾರೆ.

ಆದರೆ ಇದೀಗ ಈ ವಾರ ಬಿಗ್ ಬಾಸ್​ ಮನೆಯಲ್ಲಿ ಎಲಿಮಿನೇಷನ್ ನಡೆಯೋದು ಅನುಮಾನ ಎನ್ನಲಾಗುತ್ತಿದೆ. ಪ್ರತಿ ವಾರ ಎಲಿಮಿನೇಷನ್​​ಗೆ ನಾಮಿನೇಷನ್ ನಡೆದ ಬಳಿಕ ವೂಟ್ ಆ್ಯಪ್​ನಲ್ಲಿ ವೋಟಿಂಗ್ ಮಾಡಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಅದಕ್ಕೆ ಅವಕಾಶ ಇಲ್ಲ. ‘ವೀಕ್ಷಕರ ಗಮನಕ್ಕೆ, ವೋಟಿಂಗ್ ಲೈನ್ಸ್ ತೆರೆದಿರುವುದಿಲ್ಲ’ ಎಂಬ ಲೈನ್ ತೋರಿಸಲಾಗಿದೆ. ಇದು ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ಎಲಿಮಿನೇಷನ್ ಇಲ್ಲದ ಸಂದರ್ಭದಲ್ಲಿ ಮಾತ್ರ ಬಿಗ್ ಬಾಸ್ ಈ ರೀತಿ ಮಾಡುತ್ತಾರೆ

ಈಗಾಗಲೇ ರೂಪೇಶ್ ರಾಜಣ್ಣ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ವೋಟ್​ಗಳು ಬಿದ್ದಿವೆ . ಅದಲ್ಲದೆ ಅರುಣ್ ಸಾಗರ್ ಅವರನ್ನು ಮನೆಯಲ್ಲಿ ಅನೇಕರು ನಾಮಿನೇಟ್ ಮಾಡಿದ್ದಾರೆ . ಅನುಪಮಾ ಗೌಡ, ದೀಪಿಕಾ ದಾಸ್​, ದಿವ್ಯಾ ಉರುಡುಗ, ಆರ್ಯವರ್ಧನ್ ಗುರೂಜಿ ಅವರನ್ನು ಮನೆ ಮಂದಿ ನಾಮಿನೇಟ್ ಮಾಡಿದರು.

ಜೊತೆಗೆ ಕ್ಯಾಪ್ಟನ್ ಪ್ರಶಾಂತ್ ಅವರು ಮನೆಯಲ್ಲಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ಈ ಆಯ್ಕೆಯಲ್ಲಿ ಅವರು ಅಮೂಲ್ಯ ಗೌಡ ಅವರ ಹೆಸರನ್ನು ತೆಗೆದುಕೊಂಡರು. ಹೀಗಾಗಿ, ಅಮೂಲ್ಯ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಪ್ರಸ್ತುತ ಗುರುವಾರದ ಒಳಗೆ ವೋಟಿಂಗ್ ಆಯ್ಕೆ ತೆರೆಯಲಿದೆಯೇ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ . ಒಂದೊಮ್ಮೆ ವೋಟಿಂಗ್ ಲೈನ್ಸ್ ತೆರೆಯದೇ ಇದ್ದರೆ ಈ ವಾರ ಎಲಿಮಿನೇಷನ್ ಇರುವುದಿಲ್ಲ ಅನ್ನೋದು ಖಚಿತ ಆಗಲಿದೆ. ಒಟ್ಟಿನಲ್ಲಿ ಈ ವಾರ ಎಲಿಮಿನೇಷನ್ ಗೊಂದಲದ ಛಾಯೆ ಉಂಟು ಮಾಡಿದೆ.