Home Breaking Entertainment News Kannada 49 ರ ಚಿರಯೌವ್ವನೆ ಬಾಲಿವುಡ್ ಬ್ಯೂಟಿ ಮಲೈಕಾ ಗರ್ಭಿಣಿ!? ಬಿಟೌನ್ ನಲ್ಲಿ ಜೋರಾಗಿ ಹರಿದಾಡ್ತಿದೆ ಈ...

49 ರ ಚಿರಯೌವ್ವನೆ ಬಾಲಿವುಡ್ ಬ್ಯೂಟಿ ಮಲೈಕಾ ಗರ್ಭಿಣಿ!? ಬಿಟೌನ್ ನಲ್ಲಿ ಜೋರಾಗಿ ಹರಿದಾಡ್ತಿದೆ ಈ ಸುದ್ದಿ!!!

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ನಟಿ ಮಲೈಕಾ ಅರೋರಾ ತಮ್ಮ 49ನೇ ವಯಸ್ಸಿನಲ್ಲಿ ಮದುವೆಯಾಗದೆ ಅರ್ಜುನ್ ಕಪೂರ್ ಮಗುವಿಗೆ ತಾಯಿಯಾಗ್ತಿದ್ದಾರೆ. ಇದೀಗ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ನಟಿ ಮಲೈಕಾ ಅರೋರಾ ಅವರು ಅರ್ಜುನ್ ಕಪೂರ್ ಅವರ ಮಗುವಿಗೆ ತಾಯಿಯಾಗಲಿದ್ದಾರೆ ಎಂದು ಲಂಡನ್‌ನಿಂದ ಲಿಲ್ ಬರ್ಡಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಅವರು ಅಕ್ಟೋಬರ್‌ನಲ್ಲಿ ಲಂಡನ್‌ಗೆ ತೆರಳಿದ್ದರು. ಅಲ್ಲಿ ಮಲೈಕಾ ಅವರು ಗರ್ಭಿಣಿ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

ಅರ್ಜುನ್ ಕಪೂರ್ ಮತ್ತು ಮಲೈಕಾ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಮಲೈಕಾ ಅರೋರಾ ಮೊದಲು ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಹಾಗೂ ಇವರಿಬ್ಬರಿಗೂ ಅರ್ಹಾನ್ ಖಾನ್‌ ಎಂಬ ಒಬ್ಬ ಮಗನಿದ್ದಾನೆ.

ಇದೀಗ ಇವರು ‘ಮೂವಿಂಗ್ ಇನ್ ವಿತ್ ಮಲೈಕಾ’ ಕಾರ್ಯಕ್ರಮದ ಭಾಗವಾಗಲಿದ್ದಾರೆ ಎನ್ನಲಾಗಿದೆ. ಮಲೈಕಾ ಈ ಸಿಹಿ ಸುದ್ದಿಯನ್ನು ತನ್ನ ಶೋನಲ್ಲಿ ಹಂಚಿಕೊಳ್ಳುವರೇ ಎನ್ನುವುದು ಅಭಿಮಾನಿಗಳ ಕುತೂಹಲವಾಗಿದೆ. ಹಾಗೇ ಕಾತುರದಿಂದ ಕಾದು ಕುಳಿತಿದ್ದಾರೆ.

ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಅವರು ಮದುವೆಯಾಗುತ್ತಾರೆ ಎಂದು ನಟಿಯ ಇತ್ತೀಚಿನ ಫೋಟೋ ನೋಡಿ ಅಭಿಮಾನಿಗಳಲ್ಲಿ ಚರ್ಚೆಯಾಗಿತ್ತು. ಆ ಫೋಟೋದಲ್ಲಿ ನಟಿಯ ಕೈಯಲ್ಲಿದ್ದ ರಿಂಗ್ ಬಗ್ಗೆ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿತ್ತು.

ಕೊನೆಗೂ ರಿಲೇಷನ್​​ಶಿಪ್​ನಲ್ಲಿದ್ದ ಈ ಜೋಡಿ ಇದೀಗ ಪೋಷಕರಾಗುತ್ತಿದ್ದಾರೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರು ತಾತ ಆಗಲಿದ್ದಾರೆ ಹಾಗೂ ನಟಿ ಜಾನ್ವಿ ಕಪೂರ್ ಅತ್ತೆಯಾಗಲಿದ್ದಾರೆ. ಇನ್ನೂ ಈ ಪ್ರಣಯ ಪಕ್ಷಿಗಳ ವಿವಾಹ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಿಂದ ವ್ಯಕ್ತವಾಗುತ್ತಿದೆ.