Home Entertainment ದಾರಿಯಲ್ಲೇ ಮುತ್ತಿನ ಮಳೆಗೆರೆದ ಪ್ರೇಮಿ | ಗಾಡಿಯಲ್ಲಿ ಪ್ರೇಮಿಕಾ ನಾಚಿ ನೀರು | ಅನಂತರ…

ದಾರಿಯಲ್ಲೇ ಮುತ್ತಿನ ಮಳೆಗೆರೆದ ಪ್ರೇಮಿ | ಗಾಡಿಯಲ್ಲಿ ಪ್ರೇಮಿಕಾ ನಾಚಿ ನೀರು | ಅನಂತರ…

Hindu neighbor gifts plot of land

Hindu neighbour gifts land to Muslim journalist

ಹದಿ ಹರೆಯದ ವಯೋಸಹಜ ಆಕರ್ಷಣೆ ಪ್ರೀತಿಗೆ ತಿರುಗಿ ಪ್ರೇಮದ ನಶೆಯಲ್ಲಿ ಜಗವನ್ನೇ ಮರೆಯುವ ಪ್ರಣಯ ಜೋಡಿಗಳ ರಾಸಲೀಲೆಗಳ ಫೋಟೊ ಆಗಾಗ ವೈರಲ್ ಆಗುವುದು ಕಾಮನ್.. ಪ್ರೀತಿ ಮಾಡಬಾರದು.. ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಸಿನೆಮಾ ಸ್ಟೈಲ್ ನಲ್ಲಿ ರೋಡ್ ರೋಮಿಯೋ ಒಬ್ಬ ಹಾಡಹಗಲೇ ಮುತ್ತಿನ ಮತ್ತೆ ಗಮ್ಮತ್ತು ಎಂದು ವಾಹನ ಚಾಲನೆ ವೇಳೆ ನಡೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಸ್ಕೂಟಿ ಚಲಾಯಿಸುತ್ತಿದ್ದ ಯುವತಿಗೆ ಹಿಂದೆ ಕೂತಿದ್ದ ಯುವಕನೊಬ್ಬ ಮುತ್ತು ಕೊಟ್ಟಿರುವ ಘಟನೆ ಮೈಸೂರು ರಸ್ತೆಯಲ್ಲಿ ನಡೆದಿದ್ದು ಸದ್ಯ ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ನಡು ರಸ್ತೆಯಲ್ಲಿ ಸಿನಿಮೀಯ ಮಾದರಿಯಲ್ಲಿ ಯುವತಿಗೆ ಮುತ್ತಿನ ಸುರಿಮಳೆಗೈದ ದೃಶ್ಯ ಹಿಂಬದಿ ಸವಾರರ ಮೊಬೈಲ್ ನಲ್ಲಿ ಸೆರೆಯಾಗಿದೆ. ರೂಲ್ಸ್ ಇರೋದೇ ಬ್ರೇಕ್ ಮಾಡೋದಕ್ಕೆ ಎನ್ನುವ ಸ್ಟೈಲ್ ನಲ್ಲಿ ನಗರದಲ್ಲಿ ಸಂಚಾರಿ ಪೊಲೀಸರ ಭಯವಿಲ್ಲದೇ ನಡು ರಸ್ತೆಯಲ್ಲೇ ಸ್ಕೂಟಿ ಮೇಲಿದ್ದ ಪ್ರೇಮಿಗಳಿಬ್ಬರು ರೊಮ್ಯಾನ್ಸ್ ಮಾಡಿರುವ ಘಟನೆ ಮೈಸೂರು ರಸ್ತೆಯಲ್ಲಿ ಬೆಳಕಿಗೆ ಬಂದಿದೆ.

ಹೆಲ್ಮೆಟ್ ಧರಿಸದೇ, ಸಂಚಾರಿ ನಿಯಮಗಳನ್ನು ಕೂಡ ಪಾಲಿಸದೆ ಎಲ್ಲ ರೂಲ್ಸ್ ಗಳಿಗು ಡೊಂಟ್ ಕೇರ್ ಎಂಬಂತೆ ಸುತ್ತಮುತ್ತಲಿನ ಜನರ ಭಯವೂ ಕೂಡ ಇಲ್ಲದೆ ಸ್ಕೂಟರ್ ಚಲಾಯಿಸುತ್ತಿದ್ದ ಯುವಕ ಪ್ರಿಯತಮೆಗೆ ಮುತ್ತಿನ ಸುರಿಮಳೆಗೈದಿದ್ದು ಸದ್ಯ ಈ ದೃಶ್ಯ ಎಲ್ಲೆಡೆ ವೈರಲ್ ಆಗಿ ಸಂಚಲನ ಮೂಡಿಸಿದೆ.

ಎರಡು ದಿನಗಳ ಹಿಂದೆ ಮೈಸೂರು ರಸ್ತೆಯ ನಾಯಂಡಹಳ್ಳಿ ಮೇಲ್ಸೇತುವೆ ಮೇಲೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರೇಮಿಗಳ ಹುಚ್ಚಾಟ ಸ್ಕೂಟರ್ ಹಿಂಬದಿ ಸಾಗುತ್ತಿದ್ದ ಕಾರಿನಲ್ಲಿದ್ದ ಪ್ರಯಾಣಿಕರ‌ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಈ ಬಳಿಕ ಪೊಲೀಸರು ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆಯಡಿ‌ ಪ್ರಕರಣ ದಾಖಲಿಸಿಕೊಂಡು, ಇಬ್ಬರ ಪೋಷಕರನ್ನೂ ಕರೆಯಿಸಿ ಕೌನ್ಸೆಲಿಂಗ್ ಮಾಡಿದ್ದಾರೆ ಎನ್ನಲಾಗಿದೆ.