Home Breaking Entertainment News Kannada Actress Oviya : ನಟಿ ಓವಿಯಾ ಸಲಿಂಗಕಾಮಿ!!! ನಟಿಯಿಂದ ಬಂತು ಶಾಕಿಂಗ್‌ ರಿಪ್ಲೈ!

Actress Oviya : ನಟಿ ಓವಿಯಾ ಸಲಿಂಗಕಾಮಿ!!! ನಟಿಯಿಂದ ಬಂತು ಶಾಕಿಂಗ್‌ ರಿಪ್ಲೈ!

Actress Oviya

Hindu neighbor gifts plot of land

Hindu neighbour gifts land to Muslim journalist

Actress Oviya : ರಾಕಿಂಗ್ ಸ್ಟಾರ್ ಯಶ್ (Actor Yash) ಜತೆಗೆ ಕಿರಾತಕ ಸಿನಿಮಾ (kirataka movie) ಮೂಲಕ ಚಂದನವನ ಪ್ರವೇಶಿಸಿದ್ದ ಓವಿಯಾ (Actress Oviya) ಈ ಸಿನಿಮಾದಿಂದ ಸಾಕಷ್ಟು ಹೆಸರು ಗಳಿಸಿದರು. ಕನ್ನಡಿಗರ ಮನದಲ್ಲಿ ಸ್ಥಾನ ಪಡೆದರು.

ಸದ್ಯ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ ಓವಿಯಾ ಹೆಲೆನ್‌, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ತಮಿಳು ಬಿಗ್‌ಬಾಸ್‌ (biggboss) ಮೂಲಕ ಹೆಚ್ಚು ಮುನ್ನೆಲೆಗೆ ಬಂದ ಈ ನಟಿ, ಸೋಷಿಯಲ್‌ ಮೀಡಿಯಾದಲ್ಲೂ ಸದಾ ಸಕ್ರಿಯರು.

ಈ ಮಧ್ಯೆ ನಟಿಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳಾಗುತ್ತಿವೆ. ಇದೀಗ ಸಿನಿಮಾಗಳಿಂದ ಅಂತರ ಕಾಯ್ದುಕೊಂಡು, ತಮ್ಮ ಬೋಲ್ಡ್‌ ಹೇಳಿಕೆಗಳು ಮತ್ತು ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕವೇ ಹೆಚ್ಚು ಚರ್ಚೆಯಲ್ಲಿರುವ ನಟಿ ಇದೀಗ ಪ್ರಶ್ನೆಯೊಂದಕ್ಕೆ ಶಾಕಿಂಗ್‌ ರಿಪ್ಲೈ ನೀಡಿದ್ದಾರೆ.

ಹೌದು, ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ ಸುದ್ದಿಯೊಂದಕ್ಕೆ ಬಹುಭಾಷಾ ನಟಿ ಓವಿಯಾ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ 2020ರಲ್ಲಿ ನಟಿ ಓವಿಯಾ ಸಂದರ್ಶನವೊಂದರಲ್ಲಿ ನಾನು ಮದುವೆಯಾಗುವುದಿಲ್ಲ. ನನಗೆ ಗಂಡನ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು. ನಟಿಯ ಈ ಹೇಳಿಕೆಗೆ ಭಾರೀ ನೆಗೆಟಿವ್ ಕಾಮೆಂಟ್ ಬಂದಿದ್ದವು.

ಇದೀಗ ಆವತ್ತು ಎದುರಾದ ಹಲವು ಪ್ರಶ್ನೆಗಳಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. “ನಾನು ಮದುವೆ ಆಗಿಲ್ಲ ಅನ್ನೋ ಕಾರಣಕ್ಕೆ ಹೀಗೆ ಕಾಮೆಂಟ್‌ಗಳು ಬರುವುದು ಸಹಜ. ಈ ರೀತಿಯ ಪ್ರಶ್ನೆಗಳು ನನಗೆ ಎದುರಾಗುತ್ತಿರುವುದು ಇದೇ ಮೊದಲಲ್ಲ. ಒಬ್ಬ ನಟಿಯಾಗಿ ಈ ರೀತಿಯ ಗಾಸಿಪ್‌ಗಳು, ಕೆಟ್ಟ ಮಾತುಗಳು ಬರುವುದು ಸರ್ವೇ ಸಾಮಾನ್ಯ. ಆದರೆ ನಾನು ಅದ್ಯಾವುದಕ್ಕೂ ತಲೆ ಕೆಡಸಿಕೊಳ್ಳಲ್ಲ. ಅವರು ಹಾಗೇ ಹೇಳಿದ ಮಾತ್ರಕ್ಕೆ ನಾನು ಸಲಿಂಗಕಾಮಿಯಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Bengaluru: ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿ ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ತೋರಿದ ಶಿಕ್ಷಕ!!!