Home Breaking Entertainment News Kannada Kantara : ಕಾಂತಾರ 2 ಸಿನಿಮಾ ಬಗ್ಗೆ ನಿರ್ಮಾಪಕರು ನೀಡಿದ್ರು ಬಿಗ್ ಬಿಗ್ ಮಾಹಿತಿ!!!

Kantara : ಕಾಂತಾರ 2 ಸಿನಿಮಾ ಬಗ್ಗೆ ನಿರ್ಮಾಪಕರು ನೀಡಿದ್ರು ಬಿಗ್ ಬಿಗ್ ಮಾಹಿತಿ!!!

Hindu neighbor gifts plot of land

Hindu neighbour gifts land to Muslim journalist

ಕಾಂತಾರ ಸಿನೆಮಾದ ಭರ್ಜರಿ ಗೆಲುವಿನ ಬಳಿಕ ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕೌತುಕ ಎಲ್ಲರಲ್ಲಿ ಮನೆ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ಸ್ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಇದಷ್ಟೇ ಅಲ್ಲದೆ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ದಾಖಲೆ ಸೃಷ್ಟಿ ಮಾಡಿದೆ.

ಇದೀಗ ಕಾಂತಾರ ಸಿನಿಮಾ ಗೆಲುವಿನ ನಗೆ ಬೀರಿ ಮುನ್ನಡೆ ಸಾಧಿಸಿದ್ದು, ಸಿನೆಮಾದ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಈ ನಡುವೆ ಕಾಂತಾರ 2 ಸಿನಿಮಾ ಬಗ್ಗೆ ನಿರ್ಮಾಪಕರು ಸುಳಿವು ನೀಡಿದ್ದಾರೆ.

ಇಂಡಿಯಾ ಟುಡೆ ಜೊತೆಗೆ ಸಂದರ್ಶನದಲ್ಲಿ ಮಾತಾಡಿದ ವಿಜಯ್ ಕಿರಗಂದೂರು, ಕಾಂತಾರ ಸೀಕ್ವೆಲ್ ಮಾಡುವ ಬಗ್ಗೆ ಪ್ಲಾನ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಜಯ್ ಕಿರಗಂದೂರು ಕೆಜಿಎಫ್ ಮತ್ತು ಕಾಂತಾರ ಭರ್ಜರಿ ಯಶಸ್ಸಿನ ಗುಟ್ಟು ಬಿಟ್ಟು ಕೊಟ್ಟಿದ್ದು, ನಾವು ಸಿನಿಮಾ ಮಾಡುವಾಗ ಕಥೆ ಮತ್ತು ಚಿತ್ರಕಥೆಯ ಕುರಿತು ಹೆಚ್ಚು ಗಮನವಹಿಸುವ ಬಗ್ಗೆ ತಿಳಿಸಿದ್ದಾರೆ.

ನಮಗೆ, ಒಳ್ಳೆಯ ಸ್ಕ್ರಿಪ್ಟ್ ಬರೆಯಲು ಸಮಯ ಬೇಕಾಗಿದ್ದು, ಬರಹಗಾರರು ಮತ್ತು ನಿರ್ದೇಶಕರಿಗೆ ನಾವು ಯಾವಾಗಲೂ ಪ್ರಾಮುಖ್ಯತೆಯನ್ನು ನೀಡುತ್ತೇವೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದು ಜೊತೆಗೆ ನಮ್ಮ ಯಾವುದೇ ಸ್ಕ್ರಿಪ್ಟ್ಗಳನ್ನು ಗಮನಿಸಿದರೂ ಕೂಡ ಅಂದರೆ, ಕೆಜಿಎಫ್ 1, ನಾವು ಸ್ಕ್ರಿಪ್ಟ್ಗಾಗಿ 3 ವರ್ಷ ಸಮಯ ನೀಡಿದ್ದೇವೆ ಜೊತೆಗೆ ಕಾಂತಾರಕ್ಕಾಗಿ ನಾವು ಸ್ಕ್ರಿಪ್ಟ್ ಮಟ್ಟದಲ್ಲಿ 6-8 ತಿಂಗಳುಗಳ ಕಾಲ ಅದರಲ್ಲಿ ತೊಡಗಿಸಿಕೊಂಡ ಬಗ್ಗೆ ಮಾಹಿತಿ ಹಚ್ಚಿಕೊಂಡಿದ್ದಾರೆ.

ಎಸ್ಎಸ್ ರಾಜಮೌಳಿಯವರ RRR ಸಿನಿಮಾದ ಬಳಿಕ ರಿಷಬ್ ಶೆಟ್ಟಿ ಅವರ ಆಕ್ಷನ್ ಥ್ರಿಲ್ಲರ್ ಕಾಂತಾರ ಸಿನಿಮಾವನ್ನು 2023 ರ ಆಸ್ಕರ್ ನಾಮಿನೇಷನ್​ ಕಳುಹಿಸಲಾಗಿದ್ದು ಈ ಬಗ್ಗೆ ವಿಜಯ್ ಕಿರಗಂದೂರು ಇತ್ತೀಚೆಗಷ್ಟೇ ಮಾಹಿತಿ ನೀಡಿದ್ದರು. ಈ ಸಂದರ್ಭದಲ್ಲಿ ವಿಜಯ್ ಕಿರಗಂದೂರು ಕಾಂತಾರ 2 ಪ್ರಾಜೆಕ್ಟ್ ಬಗ್ಗೆಯು ಚಿಂತನೆ ನಡೆಸುತ್ತಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕಾಂತಾರ 2 ಗಾಗಿ ಯೋಜನೆ ರೂಪಿಸಲಾಗುತ್ತಿದ್ದು, ಆದರೆ ಯಾವುದೇ ಟೈಮ್ ಲೈನ್ ಇಲ್ಲ ಎಂಬ ಮಾಹಿತಿಯನ್ನು ಕಿರಗಂದೂರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.