Home Breaking Entertainment News Kannada ಟಿವಿಯಲ್ಲಿ ಕಾಂತಾರ | ಯಾವ ಚಾನೆಲ್? ಯಾವಾಗ ಪ್ರಸಾರ? ಇಲ್ಲಿದೆ ವಿವರ

ಟಿವಿಯಲ್ಲಿ ಕಾಂತಾರ | ಯಾವ ಚಾನೆಲ್? ಯಾವಾಗ ಪ್ರಸಾರ? ಇಲ್ಲಿದೆ ವಿವರ

Hindu neighbor gifts plot of land

Hindu neighbour gifts land to Muslim journalist

ಕಾಂತಾರ (Kantara) ಸಿನಿಮಾ ರಿಲೀಸ್ ಆಗಿ ಇಷ್ಟು ದಿನವಾದರೂ ಸಿನಿಮಾದ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ಅಷ್ಟೇ ಅಲ್ಲದೇ, ಕನ್ನಡ ಸಿನಿಮಾರಂಗವನ್ನು (Kannada cinema) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಸಿನಿಮಾ ಕಾಂತಾರದ್ದು ಎಂದರೆ ತಪ್ಪಾಗದು. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ.

ನಾಡಿನ ಜನ ಕೌತುಕದಿಂದ ಎದುರು ನೋಡುತ್ತಿದ್ದ ದಿನ ಸನ್ನಿಹಿತವಾಗಿದ್ದು, ಕಾಂತಾರ ಸಿನೆಮಾದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ಹೌದು!!..ಬಹುನಿರೀಕ್ಷಿತ ಕಾಂತಾರ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು ಗೊತ್ತಿರುವ ವಿಚಾರವೇ!! ಚಿತ್ರಮಂದಿರ ಹಾಗೂ ಒಟಿಟಿ ಎರಡರಲ್ಲೂ ಸೂಪರ್ ಹಿಟ್ ಆಗಿರುವ ಕನ್ನಡ ಸಿನಿಮಾ ‘ಕಾಂತಾರ’ ಇದೀಗ ಟಿವಿಗೆ ಬರಲಿದ್ದು, ಕಾಂತಾರ ಸಿನೆಮಾ ಮತ್ತೊಮ್ಮೆ ನೋಡಬೇಕು ಎಂದು ಬಯಸುವವರು ಮಿಸ್ ಮಾಡದೇ ನಿಮ್ಮ ಟಿವಿಯಲ್ಲಿ ನೋಡಬಹುದಾಗಿದೆ.

ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ದೇಶದಲ್ಲಿ ಸಹ ಕರಾವಳಿಯ ಕಲೆಯನ್ನು ಬಿಂಬಿಸಿ , ದೈವಿಕ ಶಕ್ತಿ, ಆಚರಣೆಯ ಬಗ್ಗೆ ನಂಬಿಕೆಯನ್ನು ಎಲ್ಲೆಡೆ ಪಸರಿಸಿದೆ. ‘ಕಾಂತಾರ’ ಸಿನಿಮಾವು ಚಿತ್ರಮಂದಿರಗಳಲ್ಲಿ ಸುಮಾರು 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅಮೆಜಾನ್ ಹಾಗೂ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು ಅಲ್ಲಿಯೂ ಒಳ್ಳೆಯ ಪ್ರದರ್ಶನ ಕಂಡಿದೆ.

ಈ ಸಿನಿಮಾವನ್ನು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್‌ನವರು ನಿರ್ಮಾಣ ಮಾಡಿದ್ದಾರೆ. ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಈಗಲೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾ ಇದೀಗ ಟಿವಿಯಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ‘ಕಾಂತಾರ’ ಟಿವಿಯಲ್ಲಿ ಪ್ರಸಾರವಾಗಲಿದ್ದು, ಆ ಕುರಿತಾಗಿ ಪ್ರೋಮೋಗಳು ಪ್ರಸಾರವಾಗುತ್ತಿವೆ.

ಈ ಹಿಂದೆ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ‘ಕೆಜಿಎಫ್’, ‘777 ಚಾರ್ಲಿ’, ‘ವಿಕ್ರಾಂತ್ ರೋಣ’ ಸಿನಿಮಾಗಳು ಟಿವಿಯಲ್ಲಿ ಪ್ರಸಾರವಾದ ಸಂದರ್ಭ ನಿರೀಕ್ಷೆಗೂ ಮೀರಿದ ಟಿಆರ್‌ಪಿಯನ್ನು ಪಡೆದಿದ್ದವು. ಈಗ ‘ಕಾಂತಾರ’ ಸಹ ಇದೇ ಹಾದಿಯಲ್ಲಿ ಸಾಗುವ ಲಕ್ಷಣಗಳು ದಟ್ಟವಾಗಿ ಕಂಡುಬರುತ್ತಿದೆ. ಸಂಕ್ರಾಂತಿ ಹಬ್ಬದ ಸಡಗರಕ್ಕೆ ಇಲ್ಲವೇ ಮುಂದಿನ ಯಾವುದಾದರೂ ವಿಶೇಷ ಸಂದರ್ಭದಲ್ಲಿ ‘ಕಾಂತಾರ’ ಸಿನಿಮಾವನ್ನು ಸ್ಟಾರ್ ಸುವರ್ಣ ವಾಹಿನಿಯು ಪ್ರಸಾರ ಮಾಡಬಹುದು ಎನ್ನಲಾಗುತ್ತಿದೆ.

‘ಕಾಂತಾರ’ ಸಿನಿಮಾವು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಎಲ್ಲರ ಮನದಲ್ಲಿ ಅಚ್ಚಳಿಯದೆ ಸ್ಥಾನ ಪಡೆದಿರುವ ದೈವದ ಪಾತ್ರ ಜೊತೆಗೆ ಅನೇಕ ಸೂಕ್ಷ್ಮ ವಿಚಾರಗಳ ಸುತ್ತ ಹೆಣೆದಿರುವ ಕಥೆ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ನೋಡಿದವರ ಮನದಲ್ಲಿ ಭಕ್ತಿ ಭಾವ ಮೂಡುವಂತೆ ಮಾಡಿದೆ. ಕನ್ನಡದ ಹಿಟ್ ಸಿನಿಮಾ ” ಅತೀ ಶೀಘ್ರದಲ್ಲಿ ನಿಮ್ಮ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ” ಎಂದು ಸುವರ್ಣ ವಾಹಿನಿಯು ತನ್ನ ಫೇಸ್‌ಬುಕ್‌ ಪುಟದಲ್ಲಿ ‘ಕಾಂತಾರ’ದ ವಿಡಿಯೋದೊಂದಿಗೆ ಪ್ರಕಟಿಸಿದ್ದು, ಆದರೆ ಸಿನಿಮಾ ಯಾವ ದಿನ ಪ್ರಸಾರವಾಗಲಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.