Home Breaking Entertainment News Kannada Kantara : ಕಾಂತಾರ ಸಿನಿಮಾದಲ್ಲಿ ನಟಿಸಿದವರ ಸಂಭಾವನೆ ಪಟ್ಟಿ ಇಲ್ಲಿದೆ| ಒಮ್ಮೆ‌ ಶಾಕ್ ಆಗೋದಂತು ಖಂಡಿತ!!!

Kantara : ಕಾಂತಾರ ಸಿನಿಮಾದಲ್ಲಿ ನಟಿಸಿದವರ ಸಂಭಾವನೆ ಪಟ್ಟಿ ಇಲ್ಲಿದೆ| ಒಮ್ಮೆ‌ ಶಾಕ್ ಆಗೋದಂತು ಖಂಡಿತ!!!

Hindu neighbor gifts plot of land

Hindu neighbour gifts land to Muslim journalist

ಕಾಂತಾರ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ವಿವರಿಸಬೇಕಾಗಿಲ್ಲ!! ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ಗಮನ ಹರಿಸುವಂತೆ ಮಾಡಿದ ಕಾಂತಾರ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲ, ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಸಿನಿಮಾ  ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಇಂದಿಗೂ ಕನ್ನಡದ ಕಾಂತಾರ ಅರ್ಭಟ ಕಮ್ಮಿ ಆಗಿಲ್ಲ.

ಕಾಂತಾರ ಈ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್‌ ಹಿಟ್ ಆದ ಸಿನಿಮಾ ಗಳಲ್ಲಿ  ಒಂದಾಗಿದ್ದು, ಕಾಂತಾರವು ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್‌ ಮಾಡಿದ ವರ್ಷದ ಎರಡನೇ ಕನ್ನಡ ಚಲನಚಿತ್ರವಾಗಿದೆ. ಇದರಲ್ಲಿ ರಿಷಬ್ ಶೆಟ್ಟಿ ಅವರು ಅನೇಕ  ಜನಪ್ರಿಯ ತಾರಾಗಣದ ಜೊತೆ ನಾಯಕರಾಗಿ ನಟಿಸಿದ್ದಾರೆ. ಕಾಂತಾರ ಚಿತ್ರ ಬಿಡುಗಡೆಯಾದ ಮೇಲೆ ವಿಶ್ವಾದ್ಯಂತ 400 ಕೋಟಿ ರೂಪಾಯಿ ಭರ್ಜರಿ ಕಮಾಯಿ ಮಾಡಿದೆ.

ರಿಷಬ್ ಶೆಟ್ಟಿ ನಾಯಕ ನಟನಾಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. tollywood.net ನಲ್ಲಿ ವರದಿಯ ಪ್ರಕಾರ, ರಿಷಬ್ ಶೆಟ್ಟಿ ಚಿತ್ರಕ್ಕಾಗಿ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರದಲ್ಲಿ ಸುಧಾಕರ ಪಾತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟಿಸಿದ್ದಕ್ಕೆ ಅವರು 60 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ಜೊತೆಗೆ ನಾಯಕಿಯಾಗಿ ನಟಿಸಿದ ಸಪ್ತಮಿ ಗೌಡ ಅವರು ಲೀಲಾ ಪಾತ್ರಕ್ಕಾಗಿ 1 ರಿಂದ 1.25 ಕೋಟಿ ರೂಪಾಯಿಗಳಷ್ಟು ಸಂಭಾವನೆಯನ್ನು ಪಡೆದಿದ್ದಾರೆ.

ಯಶ್ ಅಭಿನಯದ ಕೆಜಿಎಫ್ ಚಿತ್ರದ ಯಶಸ್ಸಿಗೆ ಹೆಸರಾದ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದು, ಆಕ್ಷನ್ ಥ್ರಿಲ್ಲರ್ ಚಲನಚಿತ್ರವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹಿಟ್ ಆಗಿ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ಈ ಚಿತ್ರದಲ್ಲಿ ಮೂಡಿ ಬಂದ ತುಳುನಾಡಿನ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿ ದೈವಾರಾಧನೆಯ ಬಗ್ಗೆ ಜನರಲ್ಲಿ ಭಕ್ತಿ ಭಾವ ಮೂಡಿಸಿದೆ. ಇದೆಲ್ಲದರ ಜೊತೆಗೆ ಕನ್ನಡ ಭಾಷೆಯಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಖ್ಯಾತಿ ಕಾಂತಾರ ತನ್ನ ತೆಕ್ಕೆಗೆ ಬಾಚಿಕೊಂಡಿದೆ.

ಕಾಂತಾರ ಚಿತ್ರದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮುರಳೀಧರ್ ಪಾತ್ರವನ್ನು ಕಿಶೋರ್ ನಟಿಸಿದ್ದು,  tollywood.net ಪ್ರಕಾರ, ಅವರು ಚಿತ್ರಕ್ಕಾಗಿ 1 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ.   ನಟ ಅಚ್ಯುತ್ ಕುಮಾರ್ ಅವರು ದೇವೇಂದ್ರ ಸುತ್ತೂರು ಪಾತ್ರವನ್ನು ನಿಭಾಯಿಸಿದ್ದು, ಕಾಂತಾರ ಚಿತ್ರದಲ್ಲಿ ಅವರ ಈ ಪ್ರಮುಖ ಪಾತ್ರಕ್ಕಾಗಿ 40 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.