Home Education ಫಿಸಿಕ್ಸ್ ಟೀಚರ್ನ ಅರೆಬೆತ್ತಲೆ ಫೋಟೋ ಪೋರ್ನ್ ವೆಬ್ಸೈಟ್ನಲ್ಲಿ | ವಿದ್ಯಾರ್ಥಿಯೋರ್ವನಿಗೆ ಸಿಕ್ಕಿ ಬಿದ್ದ ಟೀಚರ್|...

ಫಿಸಿಕ್ಸ್ ಟೀಚರ್ನ ಅರೆಬೆತ್ತಲೆ ಫೋಟೋ ಪೋರ್ನ್ ವೆಬ್ಸೈಟ್ನಲ್ಲಿ | ವಿದ್ಯಾರ್ಥಿಯೋರ್ವನಿಗೆ ಸಿಕ್ಕಿ ಬಿದ್ದ ಟೀಚರ್| ಮುಂದೇನಾಯ್ತು?

Hindu neighbor gifts plot of land

Hindu neighbour gifts land to Muslim journalist

ಎಡಿನ್ಬರ್ಗ್ ಭೌತ ಶಾಸ್ತ್ರ ಶಿಕ್ಷಕಿಯೊಬ್ಬರು ತಮ್ಮ ಅವಾಂತರ ದ ಮುಖೇನ ಸಿಕ್ಕಿ ಬಿದ್ದು ಅಮಾನತು ಆಗಿರುವ ಘಟನೆ ಸ್ಕಾಟ್‌ಲ್ಯಾಂಡ್‌ನ ಎಡಿನ್ಬರ್ಗ್​ನಲ್ಲಿ ನಡೆದಿದೆ.

ಮಕ್ಕಳಿಗೆ ಉತ್ತಮ ವಿಚಾರಗಳನ್ನು ನೀಡಬೇಕಾದ ಶಿಕ್ಷಕಿ ತನ್ನ ಎಡವಟ್ಟಿನಿಂದ ಎಲ್ಲರ ಮುಂದೆ ಮಾನ ಹರಾಜು ಮಾಡಿಕೊಂಡು ಅಮಾನತು ಆಗಿದ್ದಾರೆ. ಈ ಘಟನೆ ಸ್ಕಾಟ್‌ಲ್ಯಾಂಡ್‌ನ ಎಡಿನ್ಬರ್ಗ್​ನಲ್ಲಿ ನಡೆದಿದ್ದು, ಕಿರ್ಸ್ಟಿ ಬುಕಾನ್ ಎಂಬ ಶಿಕ್ಷಕಿಯೊಬ್ಬರು (Teacher) ಅರೆಬೆತ್ತಲೆ ಫೋಟೋವನ್ನು ವೆಬ್‌ಸೈಟ್‌ನಲ್ಲಿ (Website) ಅಪ್ಲೋಡ್ ಮಾಡುವ ಮೂಲಕ ತನ್ನ ವಿದ್ಯಾರ್ಥಿಯೊಬ್ಬನಿಗೆ ಸಿಕ್ಕಿ ಬಿದ್ದಿದ್ದಾರೆ.

ಆ ಬಳಿಕ ವಿದ್ಯಾರ್ಥಿ ಅರೆಬೆತ್ತಲೆಯ ಅಶ್ಲೀಲ ಫೋಟೋ ವಿಚಾರವನ್ನು ಶಾಲೆಯಲ್ಲಿ ಗೆಳೆಯರ ಬಳಿ ಹೇಳಿಕೊಂಡಿದ್ದು, ಈ ವಿಚಾರ ಎಲ್ಲೆಡೆ ಹಬ್ಬಿ ಆಡಳಿತ ಮಂಡಳಿಯ ವರೆಗೂ ಸಂಗತಿ ತಿಳಿದು ಹೀಗಾಗಿ, ಶಿಕ್ಷಕಿಯನ್ನು ಅಮಾನತುಗೊಳಿಸಿದ್ದಾರೆ.ಕಿರ್ಸ್ಟಿ ಬುಕಾನ್ ಸ್ಕಾಟ್‌ಲ್ಯಾಂಡ್‌ನ ಬ್ಯಾನರ್ಮನ್ ಹೈಸ್ಕೂಲ್‌ನಲ್ಲಿ ಫಿಸಿಕ್ಸ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಪ್ರತಿದಿನ ರಾತ್ರಿ ತನ್ನ ಬೆತ್ತಲೆಯ ಫೋಟೋ, ಅಶ್ಲೀಲ ಚಿತ್ರ ಗಳನ್ನೂ ವಿವಿಧ ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಳು ಎನ್ನಲಾಗಿದೆ.

ವಿವಿಧ ವೆಬ್‌ಸೈಟ್‌ಗಳಿಗಾಗಿ ಅರೆಬೆತ್ತಲೆ ಅವತಾರದಲ್ಲಿ ಫೋಟೋಶೂಟ್ ಕೂಡ ಮಾಡಿಸಿದ್ದು, ಈ ಮೂಲಕ ಆಕೆ ಒಳ್ಳೆಯ ಆದಾಯ ಕೂಡ ಗಳಿಕೆ ಮಾಡುತ್ತಿದ್ದಳು. ಇದೇ ರೀತಿ ಎಂದಿನಂತೆ ಶಿಕ್ಷಕಿ ತನ್ನ ಅರೆಬೆತ್ತಲೆ ಫೋಟೋವನ್ನು ಅಪ್‌ಲೋಡ್ ಮಾಡುತ್ತಿರುವಾಗ, ವಿದ್ಯಾರ್ಥಿಯೊಬ್ಬ ಶಿಕ್ಷಕಿಯ ಫೋಟೋ ನೋಡಿದ್ದಾನೆ. ಇದನ್ನು ಉಳಿದವರಿಗೂ ತಿಳಿಸಿದ್ದು, ಇದರಿಂದ ಮುಜುಗರಕ್ಕೊಳಗಾದ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯ ಮೇಲೆ ಶಿಸ್ತಿನ ಕ್ರಮ ಕೈಗೊಂಡಿದ್ದು, ಶಿಕ್ಷಕಿಯನ್ನು ಅಮಾನತು ಮಾಡಿದ್ದಾರೆ.

ಕೆಲಸ ಕಳೆದುಕೊಂಡ ಬಳಿಕ ಶಿಕ್ಷಕಿ, ನನಗೆ 11 ವರ್ಷ ವಯಸ್ಸಿನ ಮಗನಿದ್ದು, ಆತ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅವನ ಚಿಕಿತ್ಸೆಗಾಗಿ ಹೆಚ್ಚಿನ ಹಣ ಬೇಕಾಗಿರುವ ಸಲುವಾಗಿ ತಾನು ಖಾಸಗಿ ಫೋಟೋಗಳನ್ನು ಮಾರಿಕೊಳ್ಳುತ್ತಿದ್ದುದ್ದಾಗಿ ಹೇಳಿಕೊಂಡಿದ್ದಾರೆ. ಏನೇ ಆಗಲಿ..ತನ್ನ ನಡೆಯಿಂದ ಶಿಕ್ಷಕಿ ತನ್ನ ಹೆಸರಿಗೆ ಮಸಿ ಬಳಿದುಕೊಂಡಿದ್ದು, ಕೆಲಸ ಕಳೆದುಕೊಂಡಿದ್ದಾರೆ.