Home Breaking Entertainment News Kannada ರೋಹನ್ ಬೋಪಣ್ಣ ‘ನಿಮ್ಮ ಪತ್ನಿ ಮೋಸ್ಟ್ ಬ್ಯೂಟಿಫುಲ್ ವುಮನ್’ ಎಂದ ಅಭಿಮಾನಿ! ಮಡದಿಯ ಹೊಗಳಿಕೆಗೆ ಬೋಪಣ್ಣ...

ರೋಹನ್ ಬೋಪಣ್ಣ ‘ನಿಮ್ಮ ಪತ್ನಿ ಮೋಸ್ಟ್ ಬ್ಯೂಟಿಫುಲ್ ವುಮನ್’ ಎಂದ ಅಭಿಮಾನಿ! ಮಡದಿಯ ಹೊಗಳಿಕೆಗೆ ಬೋಪಣ್ಣ ಫುಲ್ ಖುಷ್ : ಪ್ರತಿಕ್ರಿಯಿಸಿದ್ದು ಹೀಗೆ!!

Hindu neighbor gifts plot of land

Hindu neighbour gifts land to Muslim journalist

ಅಭಿಮಾನಿ ದೇವರುಗಳಿಗೆ ತಮ್ಮ ಹೀರೋ ಗಳನ್ನ ನೆಚ್ಚಿನ ಆಟಗಾರರನ್ನು ಅಥವಾ ಇನ್ನಾವುದೇ ಸೆಲೆಬ್ರಿಟಿಗಳನ್ನು ಅವರವರ ಸಂಗಾತಿಯೊಂದಿಗೆ ನೋಡಲು ಬಯಸುತ್ತಾರೆ. ಎಷ್ಟೋ ಜನರು ತಮ್ಮ ನೆಚ್ಚಿನ ಆಟಗಾರರ ಮತ್ತು ನಟರ ಪತ್ನಿಯರು ಹೇಗೆ ಕಾಣಿಸುತ್ತಾರೆ, ಜೋಡಿ ಹೇಗಿದೆ ಅಂತ ತಿಳಿದುಕೊಳ್ಳಲು ತುಂಬಾನೇ ಕಾತುರರಾಗಿರುತ್ತಾರೆ. ಜೊತೆಗೆ ಇವರಲ್ಲೂ ಸುಂದರವಾದ ಹೆಂಡತಿಯರನ್ನೇ ಹೊಂದಿರುತ್ತಾರೆ ಎನ್ನಬಹುದು.

ಅರೇ! ಈಗೇಕೆ ಇದರ ಬಗ್ಗೆ ಮಾತು ಅಂತೀರಾ? ಇಲ್ಲೊಬ್ಬ ಅಭಿಮಾನಿ ಓಪನ್ ಆಗಿ ತನ್ನ ನೆಚ್ಚಿನ ಆಟಗಾರನಿಗೆ, ನಿಮ್ಮ ಹೆಂಡತಿ ತುಂಬಾನೇ ಸುಂದರವಾಗಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಆ ಆಟಗಾರ ಏನೆಂದು ರಿಪ್ಲೇ ಮಾಡಿದ್ದಾರೆ ಗೊತ್ತಾ? ಇದನ್ನು ಕೇಳಿ ನಿಮಗೆ ಸ್ವಲ್ಪ ಆಶ್ಚರ್ಯ ಆಗೋದಂತೂ ಗ್ಯಾರೆಂಟಿ. ಭಾರತದ ಟೆನಿಸ್ ತಾರೆಗಳಾದ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ವಿಭಾಗದ ಫೈನಲ್ ಮ್ಯಾಚಿನಲ್ಲಿ ಭಾರತದ ಪರವಾಗಿ ಕೋರ್ಟ್ ಗೆ ಇಳಿದಿದ್ದರು. ಮುಖ್ಯವಾಗಿ ಗ್ರ್ಯಾಂಡ್ ಸ್ಲ್ಯಾಮ್ ನಲ್ಲಿ ಆಡುವ ಈ ಆಟವೇ ತಮ್ಮ ಕೊನೆಯ ಪಂದ್ಯವೆಂದು ಸಾನಿಯಾ ಮೊದಲೇ ಹೀಳಿದ್ದರಿಂದ ಇದೊಂದು ಮಹತ್ವದ ಪಂದ್ಯವಾಗಿತ್ತು. ಈ ಮ್ಯಾಚ್ ನೋಡಲು ಸಾನಿಯಾ ಅವರ ಮಗ ಇಜಾನ್ ಸೇರಿದಂತೆ ಅವರ ಕುಟುಂಬವು ಮೆಲ್ಬೋರ್ನ್ ಪಾರ್ಕ್ ನಲ್ಲಿ ಹಾಜರಿದ್ದರೆ, ಇತ್ತ ರೋಹನ್ ಬೋಪಣ್ಣ ಅವರ ಪತ್ನಿ ಮತ್ತು ಮಕ್ಕಳು ಸಹ ಭಾರತೀಯ ಜೋಡಿಯನ್ನು ಹುರಿದುಂಬಿಸುತ್ತಿರುವುದು ಕಂಡು ಬಂದಿತ್ತು.

ಪಂದ್ಯದ ನಂತರ ಅಭಿಮಾನಿಯೊಬ್ಬರು ಬೋಪಣ್ಣ ಅವರ ಪತ್ನಿಯನ್ನು ‘ಮೋಸ್ಟ್ ಬ್ಯೂಟಿಫುಲ್ ವುಮನ್’ ಎಂದು ಬಣ್ಣಿಸಿದ್ದಾರೆ. ಈ ಟ್ವೀಟ್​ ಇದೀಗ ಸಖತ್ ವೈರಲ್ ಆಗಿದೆ.ವೈರಲ್ ಆಗಿರುವ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಬೋಪಣ್ಣ ಏನೆಂದು ಪ್ರತಿಕ್ರಿಯಿಸಿದ್ದಾರೆ ಗೊತ್ತಾ? ‘ಹೌದು, ನಾನೂ ಅದನ್ನ ಒಪ್ಪುತ್ತೇನೆ’ ಎಂದು ಬರೆದುಕೊಂಡು ಕಣ್ಣು ಹೊಡೆಯುವ ಇಮೋಜಿಯೊಂದಿಗೆ ಹಾರ್ಟ್ ಇರೋ ಇಮೋಜಿ ಹಾಕಿ ಸಂತೋಷ ವ್ಯಕ್ತಪಡಿಸಿದ್ದಾರೆ.ಅಲ್ಲದೆ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ವಿಭಾಗದ ಫೈನಲ್ ನಲ್ಲಿ ಸೋತಿದ್ದಾರೆ ಎಂಬುದು ನಾನಿಲ್ಲಿ ಗಮನಿಸಬೇಕು. ಏಕೆಂದರೆ ಮೊದಲೇ ಹೇಳಿದಂತೆ, ಸಾನಿಯಾ ಅವರು ಕೆಲವು ವಾರಗಳ ಹಿಂದೆ ಮುಂದಿನ ತಿಂಗಳು ದುಬೈನಲ್ಲಿ ನಡೆಯಲಿರುವ ಡಬ್ಲ್ಯುಟಿಎ ಈವೆಂಟ್ ತನ್ನ ಕೊನೆಯ ಟೂರ್ನಮೆಂಟ್ ಆಗಲಿದೆ ಎಂದು ಘೋಷಿಸಿದ್ದರು.

ಮೂರು ಮಿಶ್ರ ಡಬಲ್ಸ್ ಟ್ರೋಫಿಗಳು ಸೇರಿದಂತೆ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಭಾರತದ ಅತ್ಯಂತ ನಿಪುಣ ಮಹಿಳಾ ಟೆನಿಸ್ ಆಟಗಾರ್ತಿಯಾದ ಸಾನಿಯಾ ಮಿರ್ಜಾ ಈ ಕೊನೆಯ ಮ್ಯಾಚ್ ನಲ್ಲಿ ಜಯ ಸಾಧಿಸುತ್ತಾರೆ ಎಂದು ಅಭಿಮಾನಿಗಳೆಲ್ಲ ಕಾದಿದ್ದರು. ಆದರೀಗ ಎಲ್ಲರಿಗೂ ನಿರಾಶೆಯಾಗಿದೆ. ಜೊತೆಗೆ ರೋಹನ್ ಬೋಪಣ್ಣ ಅವರ ಕುರಿತು ಮಾತನಾಡಿದ ಸಾನಿಯಾ ಅವರು,ನಾನು 14 ವರ್ಷದವಳಾಗಿದ್ದಾಗ ರೋಹನ್ ನನ್ನ ಮೊದಲ ಮಿಶ್ರ ಡಬಲ್ಸ್ ನ ಜೋಡಿದಾರರಾಗಿದ್ದರು ಮತ್ತು ನಾವು ಇದುವರೆಗೂ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದೇವೆ. ಅವರು ನನ್ನ ಉತ್ತಮ ಸ್ನೇಹಿತ ಮತ್ತು ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವ ಪಂದ್ಯದಲ್ಲಿ ಆಡಿದ ಅತ್ಯುತ್ತಮ ಜೋಡಿದಾರರಲ್ಲಿ ಒಬ್ಬರು ಎಂದು ಹೇಳಿಕೊಂಡಿದ್ದಾರೆ.