Home Entertainment ಬಿಗ್ ಬಾಸ್ ವೈಷ್ಣವಿ ಗೌಡ ತಾಯಿಯಿಂದ ಬಂತು ಅಚ್ಚರಿಯ ಹೇಳಿಕೆ !

ಬಿಗ್ ಬಾಸ್ ವೈಷ್ಣವಿ ಗೌಡ ತಾಯಿಯಿಂದ ಬಂತು ಅಚ್ಚರಿಯ ಹೇಳಿಕೆ !

Hindu neighbor gifts plot of land

Hindu neighbour gifts land to Muslim journalist

ಕೆಲವೊಂದು ದಿನದಿಂದ ಅಗ್ನಿಸಾಕ್ಷಿ ನಟಿ ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಎಂಗೇಜ್‌ಮೆಂಟ್‌ಗೆ ಸಂಬಂಧ ಹಲವಾರು ಅಂತೆ ಕಂತೆಗಳ ಸುದ್ದಿ ಬರ್ತಾ ಇದೆ. ಈ ವಿಷಯವನ್ನು ಇಲ್ಲಿಗೆ ಬಿಟ್ಟು, ಬಿಡಿ ಎಂದು ವೈಷ್ಣವಿ ಮತ್ತು ವಿದ್ಯಾಭರಣ್ ಹೇಳಿಕೊಂಡಿದ್ದರು. ರಹಸ್ಯ ಆಡಿಯೋ ಬಗ್ಗೆ ವಿದ್ಯಾಭರಣ್ ಕಂಪ್ಲೇಂಟ್ ಕೂಡಾ ಕೊಟ್ಟಿದ್ದಾರೆ. ಇದಾದ ನಂತರ ಈಗ ವೈಷ್ಣವಿ ತಾಯಿ ಹಾಗೂ ಅವರ ತಂದೆ ಒಂದು ಪ್ರೆಸ್ ಮೀಟ್ ಮಾಡಿದ್ದಾರೆ. ಇಲ್ಲಿ ವೈಷ್ಣವಿ ಅವರ ತಾಯಿ ಹೇಳೋ ಮಾತು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.

ಎಂಗೇಜ್‌ಮೆಂಟ್‌ಗೆ ವಿಚಾರವನ್ನು ಇನ್ನೂ ಜೀವಂತವಾಗಿ ಇಡುವ ಪ್ರಯತ್ನ ನಡೆಯುತ್ತಿದೆ. ” ‘ಮೊನ್ನೆ ನಡೆದಿರುವುದು ನಿಶ್ಚಿತಾರ್ಥವಲ್ಲ. ಗಂಡಿನ ಕಡೆಯವರು ನಮ್ಮ ಮನೆಗೆ ಬಂದಿದ್ದರೂ, ಇನ್ನೂ ನಾವು ಅವರ ಮನೆಗೆ ಹೋಗಿಲ್ಲ. ಹೋಗಬೇಕು ಎನ್ನುವಷ್ಟರಲ್ಲಿ ಈ ರಾದ್ಧಾಂತ ಆಯಿತು. ವಿದ್ಯಾಭರಣ್ ತಾಯಿ ಕೂಡ ನಮ್ಮ ಜೊತೆ ಮಾತನಾಡಿದ್ದಾರೆ. ನನ್ನ ಮಗ ಅಂಥವನಲ್ಲ ಎಂದು ವಾಯ್ಸ್ ನೋಟ್ ಕಳುಹಿಸಿದ್ದಾರೆ. ನಮಗೂ ಆ ಹುಡುಗ ಒಳ್ಳೆಯವನು ಅನಿಸಿದ್ದಾನೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

‘ನಮ್ಮ ಮೇಲೆ ಆ ಹುಡುಗಿಗೆ ಕಾಳಜಿ ಇದ್ದರೆ, ನೇರವಾಗಿ ನಮ್ಮ ಜೊತೆಯೇ ಮಾತನಾಡಬೇಕಿತ್ತು. ಆ ಹುಡುಗಿ ಮಾತನಾಡುತ್ತಿಲ್ಲ ಅಂದರೆ, ಅದರ ಹಿಂದೆ ಬೇರೆ ಏನೋ ಇರಬಹುದು. ನಾವು ಹುಡುಗಿಯ ಮಾತನ್ನು ನಂಬುವುದಿಲ್ಲ’ ಎಂದು ಹೇಳಿದ್ದಾರೆ. ಹಾಗಾದರೆ ನಟಿ ವೈಷ್ಣವಿ ಮತ್ತು ವಿದ್ಯಾಭರಣ್ ಎಂಗೇಜ್‌ಮೆಂಟ್‌ ವಿಷಯ ಇನ್ನೂ ಜೀವಂತವಾಗಿದೆ ಎನ್ನಬಹುದು.

ಕೆಲವೊಂದು ದಿನಗಳಿಂದ ನಡೆದ ಘಟನೆಯಿಂದಾಗಿ ವೈಷ್ಣವಿ ನೊಂದುಕೊಂಡಿದ್ದು ನಿಜ. ಮೊದಲಿನಿಂದಲೂ ಅವರು ವಿದ್ಯಾಭರಣ್ ಬಗ್ಗೆ ಅಂತರ ಕಾಪಾಡಿಕೊಳ್ಳುತ್ತಲೇ ಬಂದಿದ್ದರು. ‘ನಾನು ಎಂಗೇಜ್ ಮೆಂಟ್ ಮಾಡಿಕೊಂಡಿಲ್ಲ. ಅದಕ್ಕೆ ಅನುಮತಿಯನ್ನೂ ಕೊಟ್ಟಿಲ್ಲ. ಆ ಹುಡುಗ ಹೇಗೆ, ಏನು ಅಂತ ಅರ್ಥ ಮಾಡಿಕೊಳ್ಳಬೇಕು. ಆನಂತರವೇ ಹೇಳುತ್ತೇನೆ’ ಎಂದು ಮಾಧ್ಯಮವೊಂದಕ್ಕೆ ಹೇಳಿದ್ದರು.