Home Entertainment BBK OTT : ಸೋಮಣ್ಣ ಮಾಚಿಮಾಡ ಅವರಿಗೆ ಮಾಜಿ ಪತ್ನಿ ಮಾಡಿರುವ ಮೆಸೇಜ್ ಏನು ಗೊತ್ತಾ.?

BBK OTT : ಸೋಮಣ್ಣ ಮಾಚಿಮಾಡ ಅವರಿಗೆ ಮಾಜಿ ಪತ್ನಿ ಮಾಡಿರುವ ಮೆಸೇಜ್ ಏನು ಗೊತ್ತಾ.?

Hindu neighbor gifts plot of land

Hindu neighbour gifts land to Muslim journalist

ಕನ್ನಡ ಬಿಗ್ ಬಾಸ್ ಓಟಿಟಿಯ ಮೊದಲ ಆವೃತ್ತಿ ಮುಗಿದಿದೆ. ಒಟ್ಟು 16 ಸ್ಪರ್ಧಿಗಳು ಬಿಗ್ ಬಾಸ್ ಓಟಿಟಿ ಮನೆಗೆ ಪ್ರವೇಶ ಪಡೆದಿದ್ದು, 42 ದಿನಗಳ ಬಿಗ್ ಬಾಸ್ ಓಟಿಟಿ ಪ್ರಯಾಣದಲ್ಲಿ 8 ಜನ ಸ್ಪರ್ಧಿಗಳು ಫೈನಲಿಸ್ಟ್ ಗಳಾದರು. ಇದರಲ್ಲಿ 4 ಜನ ಟಿವಿ ಬಿಗ್ ಬಾಸ್ ಶೋಗೆ ಕಾಲಿಟ್ಟಿದ್ದಾರೆ. ಕುಡ್ಲದ ಕುವರ ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ರ್ಯಾಪರ್, ನಟ ರಾಕೇಶ್ ಅಡಿಗ, ಪುಟ್ಟ ಗೌರಿ ಸಾನಿಯಾ ಅಯ್ಯರ್ ಇವರೇ ಟಿವಿ ಬಿಗ್ ಬಾಸ್ ಶೋಗೆ ಹೋಗಲಿರುವವರು.

ಇವರೆಲ್ಲರ ಮಧ್ಯೆ ಎಲ್ಲರಿಗೂ ಗೊತ್ತಿರುವ ಹಾಗೇ, ಕಿರುತೆರೆ ನಿರೂಪಕ ಸೋಮಣ್ಣ ಮಾಚಿಮಾಡ ಕೂಡ ಒಬ್ಬರು. ಕಿರುತೆರೆಯಲ್ಲಿ ತಮ್ಮ ಏರು ಧ್ವನಿ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ಸೋಮಣ್ಣ ಬಿಗ್ ಬಾಸ್ ಓಟಿಟಿ ಸೀಜನ್ ಮೂಲಕ ಭಾವನಾತ್ಮವಾಗಿ ಜನರಿಗೆ ಬಹಳ ಹತ್ತಿರವಾದರು.

ಬಿಗ್ ಬಾಸ್ ( Bigg Boss) ಮನೆಯೊಳಗೆ ಬಂದಾಗಲೇ ಮೊದಲ ದಿನದಂದೇ, ಸೋಮಣ್ಣ ತಮ್ಮ ಮಾಜಿ ಪತ್ನಿಯನ್ನು ನೆನೆದು ಕಣ್ಣೀರು ಹಾಕಿದ್ದರು, ಹಾಗೂ ಅವರ ಬಗ್ಗೆ ತಮ್ಮ ಪ್ರೀತಿಯನ್ನು ಕೂಡಾ ವ್ಯಕ್ತಪಡಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಾಗೂ ತಮ್ಮ ಮನಸ್ಸಿನಲ್ಲಿದ್ದ ನೋವುಗಳ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದ ಸೋಮಣ್ಣ ಆಗಾಗ ತುಂಬಾ ಭಾವುಕರಾಗುತ್ತಿದ್ದದ್ದು ಎಲ್ಲರೂ ನೋಡಿರಬಹುದು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸೋಮಣ್ಣ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಮಾಜಿ ಪತ್ನಿಯ ಬಗ್ಗೆ ಈ ರೀತಿಯ ಮಾತನ್ನು ಹೇಳಿದ್ದಾರೆ.

ನನ್ನ ಪತ್ನಿ ಡ್ಯಾನ್ಸ್, ಬಿಗ್ ಬಾಸ್‌ನಂತಹ ಕಾರ್ಯಕ್ರಮವನ್ನು ತುಂಬಾ ಇಷ್ಟ ಪಡ್ತಾರೆ. ಈ ಹಿಂದೆ ಕೂಡ ನಾನು ಬಿಗ್ ಬಾಸ್ ಹೋಗುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಆಗ ನಾನು ಆಕೆಯನ್ನು ಕೇಳಿದ್ದೆ ನಾನು ಬಿಗ್ ಬಾಸ್‌ಗೆ ಹೋದರೆ ಅಂತಾ, ಆಗ ಆಕೆ ನನ್ನನ್ನು ರೇಗಿಸುತ್ತಿದ್ದರು. ಈ ಬಾರಿ ಬಿಗ್ ಬಾಸ್ ಗೆ ಹೋದಾಗ ಮೆಸೇಜ್ ಮಾಡಿದ್ದೆ. ಚೆನ್ನಾಗಿ ಆಡಬೇಕು ಅಂತಾ ಬರೆದಿದ್ದರು. ಶಕ್ತಿ ತುಂಬಿದ್ದೇ ಆ ಒಂದು ಮೆಸೇಜ್ ಎಂದು ಹೇಳಿದ್ದಾರೆ.

ಈ ಬಾರಿ ನಾನು ಬಿಗ್‌ಬಾಸ್‌ಗೆ ಸೆಲೆಕ್ಟ್ ಆದಾಗ ನನ್ನ ಆತ್ಮೀಯರಿಗೆ ಹೇಳಿದ್ದೆ, ಆಕೆಗೂ ಕೂಡ ಹೇಳಬೇಕೆಂದುಕೊಳ್ಳುತ್ತಿದೆ. ಅವರಿಗೆ ಹೇಳದೇ ಹೋಗಿದ್ದರೆ ಈ ವಿಚಾರ ನನ್ನನ್ನು ಇನ್ನಷ್ಟು ಚುಚ್ಚುತಿತ್ತು.
ಹೋಗುವ ಹಿಂದಿನ ದಿನ ಆಕೆಗೆ ಕರೆ ಮಾಡಿ ಬಿಗ್ ಬಾಸ್‌ಗೆ ಹೋಗುವ ವಿಷಯ ಹೇಳಿದೆ. ಅವರು ಕೂಡ ಖುಷಿಯಾದ್ರು, ನೀವು ತುಂಬಾ ಚೆನ್ನಾಗಿ ಆಡ್ತೀರ ಅನ್ನೋ ನಂಬಿಕೆ ನನಗಿದೆ ಎಂದಿದ್ದರು. ಬಿಗ್ ಬಾಸ್‌ನಲ್ಲಿ ನಾನು ಇನ್ನೂ ಚೆನ್ನಾಗಿ ಆಡಬೇಕು ಅಂತಾ ಶಕ್ತಿ ತುಂಬಿದ್ದೇ ಆ ಒಂದು ಮೆಸೇಜ್, ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಡಿ, ದೇವರ ಆಶೀರ್ವಾದ ಇದೆ ಎಂದು ಕಳುಹಿಸಿದ್ದರು. ಅದನ್ನು ನೋಡಿ ನನಗೆ ಖುಷಿ ಆಯ್ತು. ಆದ್ದರಿಂದಲೇ ಫೈನಲ್‌ವರೆಗೂ ಚೆನ್ನಾಗಿ ಆಡಿದ್ದೇನೆ ಎಂದು ಹೇಳಿದ್ದಾರೆ.

ನಾನು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಮಾಜಿ ಪತ್ನಿಗೆ ಮೆಸೇಜ್ ಮಾಡಿಲ್ಲ ಮಾತನಾಡಿಲ್ಲ. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿರುವಾಗ, ನಾನು ನನ್ನ ವೈಯಕ್ತಿಕ ಭಾವನೆಗಳನ್ನು ಹಂಚಿಕೊಂಡಿದ್ದೆ. ನನ್ನ ಜೀವನ ಹೀಗಾಯಿತು ಅಂತ ಹೇಳಿರುವುದು ಅವರಿಗೆ ಬೇಜಾರಾಗಿರಬಹುದಾ ಎಂಬ ಸಣ್ಣ ಅಳುಕಿದೆ. ಹಾಗಾಗಿ ಅವರ ಕರೆಗಾಗಿ ನಾನು ಕಾಯುತ್ತಾ ಇದ್ದೀನಿ. ಕರೆ ಬರುತ್ತೆ ಎಂಬ ಭರವಸೆ ಇದೆ. ಆದರೆ ಬರಲ್ಲ ಎಂದೂ ಗೊತ್ತಿರುವುದರಿಂದ, ನಾನೇ ಅವರಿಗೆ ಕರೆ ಮಾಡಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.