Home Entertainment ರೂಪೇಶ್ ಭಾವುಕ ನುಡಿ, ತಂದೆ ಪ್ರೀತಿ ಗುರೂಜಿ‌ ಕೊಟ್ಟಿದ್ದಾರೆ | ಭಾವುಕ ಕ್ಷಣಕ್ಕೆ ಕಣ್ಣೀರಾದ ದೊಡ್ಮನೆ

ರೂಪೇಶ್ ಭಾವುಕ ನುಡಿ, ತಂದೆ ಪ್ರೀತಿ ಗುರೂಜಿ‌ ಕೊಟ್ಟಿದ್ದಾರೆ | ಭಾವುಕ ಕ್ಷಣಕ್ಕೆ ಕಣ್ಣೀರಾದ ದೊಡ್ಮನೆ

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಒಟಿಟಿ ಕನ್ನಡ ಶೋ ಈಗಾಗಲೇ ಮೂರು ವಾರಗಳನ್ನು ಕಳೆದು ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಒಬ್ಬರೊಬ್ಬರನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಆಟವಾಡುತ್ತಿದ್ದಾರೆ. ಒಮ್ಮೊಮ್ಮೆ ಎಡವುತ್ತಾರೆ. ಒಮ್ಮೊಮ್ಮೆ ಗೆಲ್ಲುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಒಬ್ಬೊಬ್ಬರೇ ಸ್ಪರ್ಧಿಗಳು ಕಡಿಮೆಯಾಗುತ್ತಿದ್ದಾರೆ. ಹಾಗಾಗಿ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ.

ಈ ವಾರ 3ನೇ ವಾರ ಬಿಗ್ ಬಾಸ್ ಮನೆಯಿಂದ ಉದಯ್ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಇದೀಗ ಮತ್ತೊಂದು ಟಾಸ್ಕ್ ನೀಡಿದೆ. ಇಷ್ಟ-ಕಷ್ಟ ಹೆಸರಿನಲ್ಲಿ ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮ್ಮ ಇಷ್ಟ ಕಷ್ಟಗಳ ಬಗ್ಗೆ ಹೇಳಿಕೊಳ್ಳಬೇಕು. ಈ ವೇಳೆ ಗುರೂಜಿ ಮತ್ತು ರೂಪೇಶ್ ಇಬ್ಬರೂ ಭಾವುಕರಾಗಿದ್ದಾರೆ.

ರೂಪೇಶ್ ಶೆಟ್ಟಿ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿರುವ ವಿಚಾರ ಮಾತನಾಡಿದ್ದಾರೆ. 13ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ರೂಪೇಶ್ ತಂದೆಯ ಪ್ರೀತಿಗಾಗಿ ಹಂಬಲಿಸುತ್ತಿದ್ದೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನನ್ನ ತಂದೆಯ ಸ್ಥಾನವನ್ನು ಆರ್ಯವರ್ಧನ್ ಗುರೂಜಿ ತುಂಬಿದ್ದಾರೆ ಎಂದು ರೂಪೇಶ್ ಭಾವುಕರಾಗಿದ್ದಾರೆ.

ಅನಂತರ ಬೊಂಬೆಯನ್ನು ಹಿಡಿದು ಆರ್ಯವರ್ಧನ್ ಗುರೂಜಿ ರೂಪೇಶ್‌ಗೆ ನೀಡಿದರು. ಮಗ ಎಂದುಕೊಂಡು ಇದನ್ನು (ಬೊಂಬೆ) ರೂಪೇಶ್ ಗೆ ನೀಡುತ್ತಿದ್ದೀನಿ ಎಂದು ಗುರೂಜಿ ಹೇಳಿದರು. ಬಳಿಕ ರೂಪೇಶ್ ಗುರೂಜಿ ಕಾಲು ಮುಟ್ಟಿ ನಮಸ್ಕರಿಸಿ ಬೊಂಬೆ ಸ್ವೀಕರಿಸಿದರು. ಬಳಿಕ ತನ್ನ ನೋವಿನ ಕಥೆ ಬಿಚ್ಚಿಟ್ಟರು. ’13 ವರ್ಷ ಇರ್ತಾ ತಾಯಿ ತೀರಿ ಕೊಂಡ್ರು. ತಂದೆ ಪ್ರೀತಿ ತುಂಬಾ ಬೇಕಿತ್ತು. ತಂದೆ ಸ್ಥಾನವನ್ನು ಗುರೂಜಿ ತುಂಬಿಸಿದ್ದಾರೆ. ಅವರು ಕಂದ, ಮಗ ಎಂದು ಕರೆಯುವಾಗ ಅಪ್ಪನ ನೆನಪು ಬರ್ತಿತ್ತು’ ಎಂದು ತಬ್ಬಿ ಭಾವುಕರಾಗಿ ಮಾತುಗಳನ್ನಾಡಿದ್ದಾರೆ.

ಬಿಗ್ ಬಾಸ್ ಮನೆಗೆ 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಈಗಾಗಲೇ ಮೂರು ವಾರ ಕಳೆದಿದ್ದು 3 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರ ಹೋದ ಮೊದಲ ಸ್ಪರ್ಧಿ ಮಾಡೆಲ್ ಕಿರಣ್, ಎರಡನೇ ಸ್ಪರ್ಧಿ ಸ್ಫೂರ್ತಿ ಗೌಡ ಮೂರನೇ ಸ್ಪರ್ಧಿ ಉದಯ್, ಇನ್ನು ನಟ ಅರ್ಜುನ್ ಮತ್ತು ಲೋಕೇಶ್ ಏಟು ಮಾಡಿಕೊಂಡು ಮನೆಯಿಂದ ಹೊರಹೋಗಿದ್ದಾರೆ.