Home Entertainment BBK 9 : ಅಮೂಲ್ಯ ತುಟಿ ನೋಡಿ ಜಾತಕ ಹೇಳಿದ ಆರ್ಯವರ್ಧನ್ ಗುರೂಜಿ

BBK 9 : ಅಮೂಲ್ಯ ತುಟಿ ನೋಡಿ ಜಾತಕ ಹೇಳಿದ ಆರ್ಯವರ್ಧನ್ ಗುರೂಜಿ

Hindu neighbor gifts plot of land

Hindu neighbour gifts land to Muslim journalist

ನಮ್ಮ ದೇಶದಲ್ಲಿ ವೈಜ್ಞಾನಿಕ ಬದಲಾವಣೆಗಳನ್ನು ನಂಬದೇ ಇದ್ರೂ ಜಾತಕ ಹೇಳೋದನ್ನು ನಂಬೋದು ಹೆಚ್ಚು. ನೀವು ಹೆಸರು, ಸಮಯ, ಸ್ಥಳ, ಕೈ ರೇಖೆ, ಎಲ್ಲಾ ನೋಡಿ ಭವಿಷ್ಯ ಹೇಳಿದ್ದವರನ್ನ ನೋಡಿರಬಹುದು. ಆದ್ರೆ ಎಲ್ಲಾದ್ರೂ ತುಟಿ ನೋಡಿ ಭವಿಷ್ಯ ಹೇಳಿದ್ದನ್ನು ಕೇಳಿದ್ದಿರಾ.. ಹೌದು ಬಿಗ್‌ಬಾಸ್ ನಲ್ಲಿ ಆರ್ಯವರ್ಧನ ಗುರೂಜಿ ಹೀಗೊಂದು ಪ್ರಯತ್ನ ಮಾಡಿರುತ್ತಾರೆ.

ಆರ್ಯವರ್ಧನ ಗುರೂಜಿಯು ಬಿಗ್‌ಬಾಸ್ ಹೊರಗೆ ಇದ್ದಾಗಲೂ ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿ ಇರುತ್ತಿದ್ದರು. ಅಲ್ಲದೆ ಜ್ಯೋತಿಷ್ಯ ಪ್ರವೀಣನಾಗಿರುವ ಗುರೂಜಿ ದೊಡ್ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ್ದ ನೋಡುಗರ ನಗುವಿಗೆ ಕಾರಣವಾಗಿದೆ. ಅಲ್ಲದೆ ಎಲ್ಲಾದ್ರೂ ತುಟಿ ನೋಡಿ ಭವಿಷ್ಯ ಹೇಳ್ತಾರಾ?. ಹೀಗೂ ಆಟ ಇದೆಯಾ?. ಅಂತ ವೀಕ್ಷಕರು ಗೊಣಗಳು ಆರಂಭಿಸಿದ್ದಾರೆ.

ಎಲ್ಲರೂ ಎರಡೆರಡು ತಂಡಗಳಾಗಿ ಜಟಾಪಟಿ ನಡೆಸುತ್ತಿದ್ದಾಗ ಗುರೂಜಿ ಮತ್ತು ನಟಿ ಅಮೂಲ್ಯ ನಡುವೆ ನಡೆದ ಮಾತುಕತೆ ಎಲ್ಲರ ನಗುವಿಗೆ ಕಾರಣವಾಗಿದೆ. ಜೊತೆಗೆ ಅಮೂಲ್ಯ ತುಟಿ ನೋಡಿ ಭವಿಷ್ಯ ಹೇಳಿದ್ದನ್ನು ಕಂಡ ಮನೆ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ ಟಾಸ್ಕ್‌ ಮಧ್ಯ ಗುರೂಜಿ ತುಟಿ ನೋಡಿ ಭವಿಷ್ಯ ಹೇಳಿ ವೈರಲ್‌ ಆಗಿದ್ದಾರೆ.

ನಿಮ್ಮ ತುಟಿ ಬಹಳ ಸುಂದರವಾಗಿದೆ. ಹೀಗಿದ್ರೆ ಒಳ್ಳೆಯದು, ಶ್ರೇಯಸ್ಸು ಮತ್ತು ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಗುರೂಜಿ ಹೇಳಿದ್ದಾರೆ. ಅವರ ಮಾತಿಗೆ ಅಮೂಲ್ಯ ನಗು ಮುಖ ತೋರಿದ್ದಾರೆ. ಇವರ ಮಾತುಕತೆಯನ್ನು ನೋಡುತ್ತಿದ್ದ ರಾಕೇಶ್ ಅಡಿಗ ಸುಮ್ಮನಿರದೆ ಗುರೂಜಿ ನನ್ನ ತುಟಿ ನೋಡಿ ಭವಿಷ್ಯ ಹೇಳಿ ಎಂದಿದ್ದಾನೆ. ಆಗ ಗುರೂಜಿ, ನಿನ್ನ ಹಿಂದೆ ಯಾರು ಬೀಳುವುದಿಲ್ಲ. ಬದಲಾಗಿ ನೀನೇ ಎಲ್ಲರ ಹಿಂದೆ ಬೀಳ್ತಿಯಾ ಎಂದರು. ಆಗ ಮನೆಮಂದಿಯೆಲ್ಲಾ ನಕ್ಕಿದ್ದಾರೆ. ಇನ್ನು ಅರುಣ್ ಸಾಗರ್ ಅವರು ಸಹ ತುಟಿ ನೋಡಿ ಭವಿಷ್ಯ ಹೇಳುವಂತೆ ಗುರೂಜಿಗೆ ಕೇಳಿದ್ದಾರೆ. ಆಗ ಆರ್ಯವರ್ಧನ್‌ ಗುರೂಜಿಯವರು, ಮೊದಲು ನೀವು ಮೀಸೆ ಬೊಳಿಸಿಕೊಂಡು ಬನ್ನಿ ಎಂದು ಟಾಂಗ್‌ ಕೊಟ್ಟಿದ್ದಾರೆ.

ಕೊನೆಗೂ ತಮ್ಮ ತಮ್ಮ ಭವಿಷ್ಯ ಕೇಳಿ ಗುರೂಜಿಯನ್ನು ನಗೆ ಪಾಠಳಿಯನ್ನಾಗಿ ಮಾಡಿ ಆ ಕ್ಷಣವನ್ನು ಕಳೆದಿದ್ದಾರೆ.