Home Breaking Entertainment News Kannada Rashmika Mandanna : ಬಾಯ್ಕಾಟ್‌ ರಶ್ಮಿಕಾ ಮಂದಣ್ಣ | ಜೋರಾಯ್ತು ನಟಿಯ ವಿರುದ್ಧ ಅಸಮಾಧಾನ

Rashmika Mandanna : ಬಾಯ್ಕಾಟ್‌ ರಶ್ಮಿಕಾ ಮಂದಣ್ಣ | ಜೋರಾಯ್ತು ನಟಿಯ ವಿರುದ್ಧ ಅಸಮಾಧಾನ

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿವಾದದ ಮೂಲಕ ಟ್ರೋಲ್ ಆಗುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ದೊಡ್ಡ ಹೆಸರು ಗಳಿಸಿದ ಬಳಿಕ ತಾನು ನಡೆದು ಬಂದ ಹಾದಿಯ ಜೊತೆಗೆ ರಶ್ಮಿಕಾ ತಾನು ಏರಿದ ಮೆಟ್ಟಿಲನ್ನೇ ಕಾಲಲ್ಲಿ ತಳ್ಳಿದ್ದು ಮಾತ್ರವಲ್ಲ, ಆ ಬಗ್ಗೆ ವ್ಯಂಗ್ಯದಲ್ಲಿ ಉತ್ತರಿಸುತ್ತಿರುವ ನಟಿ ಅನೇಕ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ.

ಹಾಗಾಗಿ, ಕಿರಿಕ್ ಚೆಲುವೆಗೆ ಸಂಕಷ್ಟ ಎದುರಾಗಲಿವೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಜೊತೆಗೆ ರಶ್ಮಿಕಾ ಅವರ ಸಿನಿಮಾಗಳು ಕರ್ನಾಟಕದಲ್ಲಿ ಪರ್ಮನೆಂಟಾಗಿ ಬ್ಯಾನ್ ಆಗಲಿದೆ ಎಂಬ ಸುದ್ದಿಗಳು ಕೂಡ ಜೋರಾಗಿ ಹರಿದಾಡುತ್ತಿದೆ.

ರಶ್ಮಿಕಾಗೆ ಅವರದ್ದೆ ಶೈಲಿಯಲ್ಲಿ ಮುಟ್ಟಿ ನೋಡಿ ಕೊಳ್ಳುವ ರೀತಿಯಲ್ಲಿ ರಿಷಬ್‌ ಟಾಂಗ್ ಕೊಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಇದಕ್ಕೆ ದೊಡ್ದ ಮಟ್ಟದಲ್ಲಿ ಬೆಂಬಲ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಇತ್ತೀಚೆಗೆ ಭಾರೀ ಸುದ್ದಿಯಾಗುತ್ತಲೇ ಇದ್ದು, ಗುಡ್ ಬೈ ಮೂಲಕ ಬಾಲಿವುಡ್​​ಗೆ ಪಾದಾರ್ಪಣೆ ಮಾಡಿ ಸಿನಿಮಾ ಸೋತು ಹೋದರೂ ಕೂಡ ರಶ್ಮಿಕಾ ನೇಮ್, ಫೇಮ್ ಹಾಗೆ ಉಳಿದಿದೆ.

ಆದರೆ ಕರ್ನಾಟಕದಲ್ಲಿ ಮಾತ್ರ ನಟಿಯ ವಿರುದ್ದ ಟ್ರೊಲ್ ಗಳು ಜೋರಾಗಿ ನಡೆಯುತ್ತಿದ್ದು, ಕಿರಿಕ್ ನಟಿಯ ಹೇಳಿಕೆ, ಇಂಟರ್​​ವ್ಯೂಗಳನ್ನು ಶೇರ್ ಮಾಡಿದ್ದನ್ನು ನೋಡಿದ ನೆಟ್ಟಿಗರು ರಶ್ಮಿಕಾ ಮೇಲೆ ಗರಂ ಆಗಿದ್ದು, ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ.

ಕೆಲವು ಊಹಾಪೋಹಗಳ ಪ್ರಕಾರ ನಟಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕಲ್ಪಿಸಿದ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಕಂಪನಿಗೆ ಕೃತಜ್ಞತೆಯಿಲ್ಲದೆ ಕಾಮೆಂಟ್ ಮಾಡಿದ ಕಾರಣಕ್ಕಾಗಿ ರಶ್ಮಿಕಾ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ನಿಷೇಧ ಹೇರುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.

ಕರ್ಲಿ ಟೇಲ್ಸ್ ಶೋನಲ್ಲಿ ಭಾಗವಹಿಸಿದ ರಶ್ಮಿಕಾ ಕೊಟ್ಟ ಹೇಳಿಕೆಯಿಂದ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದು ಅಲ್ಲದೆ, ಟೀಕೆಗೂ ಕೂಡ ಒಳಗಾಗಿದ್ದಾರೆ.ತಾವು ನಟಿಯಾದ ಬಗ್ಗೆ ರಶ್ಮಿಕಾ ಈ ಶೋನಲ್ಲಿ ವಿವರವಾಗಿ ಮಾತನಾಡಿದ್ದು, ತಾನು ಎಂದಿಗೂ ನಟಿಯಾಗಲು ಬಯಸಲಿಲ್ಲ ಆದರೆ, ತನ್ನ ಮೊದಲ ಪಾತ್ರವನ್ನು ಹೇಗೆ ಪಡೆದುಕೊಂಡೆ ಎಂದು ಚರ್ಚಿಸುವಾಗ, ನಟಿ ರಕ್ಷಿತ್ ಶೆಟ್ಟಿ ಅವರ ಪ್ರೊಡಕ್ಷನ್ ಹೌಸ್ ಪರಂವಾಹ್ ಸ್ಟುಡಿಯೋಸ್ ಹೆಸರನ್ನು ಉಲ್ಲೇಖಿಸಲು ಕೂಡ ಹಿಂದು ಮುಂದು ನೋಡಿದ್ದಾರೆ.

ಇದರ ಜೊತೆಗೆ ರಕ್ಷಿತ್ ಶೆಟ್ಟಿ ಪ್ರೊಡಕ್ಷನ್ ಹೌಸ್ ಹೆಸರು ಬಳಸದೆ ವುಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಿಂದ ದೊಡ್ಡ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ನಟಿಗೆ ಕಿರಿಕ್ ಪಾರ್ಟಿ ರಾತ್ರೋ ರಾತ್ರಿ ದೊಡ್ಡ ನೇಮ್ ತಂಡಿಕೊಂಡಿತ್ತು ಸುಳ್ಳಲ್ಲ. ಹೀಗಿದ್ದರೂ ಪ್ರೊಡಕ್ಷನ್ ಹೌಸ್ ಹೆಸರಿಗೆ ವ್ಯಂಗ್ಯ ಮಾಡಿದ್ದು ನೆಟ್ಟಿಗರನ್ನು ಕೆರಳಿಸಿದ್ದು, ವಿಶೇಷವಾಗಿ ಕನ್ನಡಿಗರು ಇದನ್ನು ವ್ಯಾಪಕವಾಗಿ ಶೇರ್ ಮಾಡಿ ನಟಿಯ ನಡೆಗೆ ಆಕ್ರೋಶ ಹೊರಹಾಕುತ್ತಿದ್ದಾರೆ.

ಇವೆಲ್ಲದರ ನಡುವೆ ಕಿರಿಕ್ ಪಾರ್ಟಿ ಹೀರೋ ಕಂ ಪ್ರೊಡ್ಯೂಸರ್ ರಕ್ಷಿತ್ ಶೆಟ್ಟಿ ಜೊತೆ ಪ್ರೇಮದ ಅನುರಾಗ ಅರಳಿ ಎಂಗೇಜ್‌ಮೆಂಟ್ ಕೂಡ ನಡೆದು, ಆಮೇಲೆ ದಿಡಿರ್ ಎಂದು ಬ್ರೇಕ್ ಅಪ್ ಕೂಡ ಆಗಿ ಬಿಟ್ಟಿತ್ತು. ಹಾ!!.ಇದೆಲ್ಲ ವೈಯಕ್ತಿಕ ಬದುಕಿನ ವಿಚಾರ!. ಅವರ ಖಾಸಗಿ ವಿಚಾರದಲ್ಲಿ ನಾವು ಇಣುಕೋದು ಬೇಡ !!

ಆದರೆ, ಸಾಮಾನ್ಯವಾಗಿ ತಮ್ಮ ಮೊದಲ ಸಿನಿಮಾದ ಬಗ್ಗೆ ಜೊತೆಗೆ ಏನೇ ಮನಸ್ತಾಪ ಇದ್ದರೂ ಕೂಡ ಹೆಚ್ಚಿನವರು ತಮಗೆ ಅವಕಾಶ ಕೊಟ್ಟವರನ್ನು ಕೃತಜ್ಞತೆಯಿಂದಲೇ ನೆನೆಯುತ್ತಾರೆ. ಆದರೆ ಇತ್ತೀಚೆಗೆ ರಶ್ಮಿಕಾ ಮಾತ್ರ ‘ಕರ್ಲಿ ಟೇಲ್ಸ್’ ಯೂಟ್ಯೂಬ್ ಚಾನೆಲ್‌ಗೆ (YouTube Channel) ನೀಡಿದ ಸಂದರ್ಶನದಲ್ಲಿ ತನ್ನ ಮೊದಲ ಸಿನಿಮಾದ ಹೆಸರು ಹೇಳಲು ಕೂಡ ಹಿಂದು ಮುಂದು ನೋಡುತ್ತಿದ್ದರು. ಅಷ್ಟೇ ಅಲ್ಲ!!!. ಕೋಟ್ ಅನ್ನುವ ಸನ್ನೆಯ ಮೂಲಕ ಸಿನಿಮಾ ಹೆಸರು ಹೇಳದೇ ವ್ಯಂಗ್ಯ ಕೂಡ ಮಾಡಿದ್ದಾರೆ.

ಇದೀಗ ಕರ್ಲಿ ಟೇಲ್ಸ್ ಸಂದರ್ಶನದ ನಂತರ ರಶ್ಮಿಕಾ ಮಂದಣ್ಣ ಅವರ ವರ್ತನೆಯಿಂದ ಕನ್ನಡ ಥಿಯೇಟರ್ ಮಾಲೀಕರು, ಸಂಘಟನೆಗಳು ಮತ್ತು ಚಿತ್ರರಂಗ ಅಸಮಾಧಾನಗೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹಾಗಾಗಿ, ನಟಿಯ ಮುಂದಿನ ಚಿತ್ರಗಳಾದ ಪುಷ್ಪ 2 ಮತ್ತು ವಾರಿಸುವನ್ನು ಕರ್ನಾಟಕದ ಥಿಯೇಟರ್‌ಗಳಿಂದ ತೆಗೆದುಹಾಕುವ ಮೂಲಕ ನಟಿಯ ವಿರುದ್ಧ ಕ್ರಮ ಕೈಗೊಳ್ಳಲು ಯೋಚಿಸಲಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ.