Home Breaking Entertainment News Kannada Actress Prema : ನಟಿ ಪ್ರೇಮಾ ಎರಡನೇ ಮದುವೆ ವಿಷಯ : ಕೊರಗಜ್ಜನ ಮೊರೆ ಹೋದ...

Actress Prema : ನಟಿ ಪ್ರೇಮಾ ಎರಡನೇ ಮದುವೆ ವಿಷಯ : ಕೊರಗಜ್ಜನ ಮೊರೆ ಹೋದ ಪ್ರೇಮಾ, ದೈವ ನೀಡಿದ ಅಭಯ ಏನು ?

Hindu neighbor gifts plot of land

Hindu neighbour gifts land to Muslim journalist

ಸ್ಯಾಂಡಲ್​ವುಡ್​ನ ಜನಪ್ರಿಯ ನಟಿ ಪ್ರೇಮಾ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಲು ಮುಂದಾಗಿದ್ದಾರೆ. 1995 ರಲ್ಲಿ ಶಿವರಾಜಕುಮಾರ್ ‘ಸವ್ಯಸಾಚಿ’ ಮತ್ತು ರಾಘವೇಂದ್ರ ರಾಜ್ ಕುಮಾರ್ ರವರ ‘ಆಟ ಹುಡುಗಾಟ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ಚೆಲುವೆ ಮತ್ತೊಮ್ಮೆ ಹಸೆ ಮಣೆ ಏರುವ ತೀರ್ಮಾನ ಮಾಡಿದ್ದಾರೆ.

ನಟನೆಯ ಮೂಲಕ ಸೈ ಎನಿಸಿಕೊಂಡಿರುವ ನಟಿ ಪ್ರೇಮಾ ಶಿವಣ್ಣರವರ ಓಂ ಚಿತ್ರದ ಅದ್ಭುತ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. 1996 ರಲ್ಲಿ ತೆರೆಕಂಡ ‘ಮಂದಾರ ಹೂವೇ’ ಈ ಬಳಿಕ ತೆಲುಗು ಮತ್ತು ಮಲಯಾಳಂ ಚಿತ್ರದಲ್ಲಿಯೂ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅದ್ಭುತ ನಟನೆ ಮೂಲಕ ಜನಪ್ರಿಯತೆ ಗಳಿಸಿ ಮನೆಮಾತಾದ ನಟಿ ಪ್ರೇಮಾ ನಾನು ನನ್ನ ಹೆಂಡ್ತೀರು, ಯಜಮಾನ , ಕನಸುಗಾರ,ಆಪ್ತಮಿತ್ರ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಮದುವೆಯಾದ ಬಳಿಕ ನಟಿ ಪ್ರೇಮಾ (Actress Prema) ಅವರು ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದರು. ಪ್ರೇಮಾ ಅವರ ಮೊದಲ ಮದುವೆ ಮುರಿದು ಬಿದ್ದ ಬಳಿಕ ಮತ್ತೆ ಸ್ಯಾಂಡಲ್​ವುಡ್​ಗೆ ರಿ ಎಂಟ್ರಿ ಕೊಟ್ಟರು ಕೂಡ ನಟಿ ಪ್ರೇಮಾ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಮಿಂಚದ ಹಿನ್ನೆಲೆ ಮತ್ತೆ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ , ಪ್ರೇಮರವರು ಮತ್ತೆ ಮರುಮದುವೆಗೆ ಸಜ್ಜಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸದ್ಯ, ಸ್ಯಾಂಡಲ್​ವುಡ್​ನ ಜನಪ್ರಿಯ ನಟಿ ಪ್ರೇಮಾ 2ನೇ ಮದುವೆಗೆ ಅಣಿಯಾಗಿದ್ದು, ಹಸೆಮಣೆ ಏರುವ ಕುರಿತು ಕೊರಗಜ್ಜನ ಮೊರೆ ಹೋಗಿದ್ದಾರೆ ಎನ್ನಲಾಗಿದೆ. 2016 ರಲ್ಲಿ ತಮ್ಮ 10 ವರ್ಷದ ದಾಂಪತ್ಯಕ್ಕೆ ಪ್ರೇಮ ರವರು ಕೊನೆ ಹಾಡಿ ಪರಸ್ಪರ ಒಪ್ಪಿಗೆ ಮೇರೆಗೆ ಪ್ರೇಮಾ ದಂಪತಿ ಬೆಂಗಳೂರಿನ ಕೌಟಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದಿದ್ದಾರೆ.

ವಿಚ್ಛೇದನದ ಬಳಿಕ ಏಕಾಂಗಿಯಾಗಿ ಜೀವನ ಸಾಗಿಸುತ್ತಿರುವ ನಟಿ ಪ್ರೇಮಾ ಇದೀಗ ಎರಡನೇ ಮದುವೆಯಾಗಲು ತೀರ್ಮಾನಿಸಿದ್ದು ಹೀಗಾಗಿ ಕಂಕಣ ಭಾಗ್ಯ ಕರುಣಿಸುವಂತೆ ದೈವದ ಮೋರೆ ಹೋಗಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ನಟಿ ಪ್ರೇಮಾ ಉಡುಪಿ ಜಿಲ್ಲೆಯ ಕಾಪು ಕೊರಗಜ್ಜ ಸನ್ನಿಧಿಯಲ್ಲಿ ಮದುವೆಗಾಗಿ ಪ್ರಾರ್ಥನೆ ಮಾಡಿದ್ದು ಇವರ ಜೊತೆ ತಮ್ಮ ಅಯ್ಯಪ್ಪ ಪತ್ನಿ ನಟಿ ಅನು ಅಯ್ಯಪ್ಪ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.