Home Education ಮೇ 20ರ ಒಳಗೆ ಹೊರಬೀಳಲಿದೆ ಎಸ್.ಎಸ್.ಎಲ್.ಸಿ ರಿಸಲ್ಟ್!! ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ-ಶಿಕ್ಷಣ ಸಚಿವ ಬಿ.ಸಿ...

ಮೇ 20ರ ಒಳಗೆ ಹೊರಬೀಳಲಿದೆ ಎಸ್.ಎಸ್.ಎಲ್.ಸಿ ರಿಸಲ್ಟ್!! ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ-ಶಿಕ್ಷಣ ಸಚಿವ ಬಿ.ಸಿ ನಾಗೇಶ್

Hindu neighbor gifts plot of land

Hindu neighbour gifts land to Muslim journalist

ಈಗಾಗಲೇ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶದ ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮೇ 20ರೊಳಗೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಎಲ್ಲಾ ತಯಾರಿ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಮೊದಲು ಮೇ 15ರ ಒಳಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇತ್ತಾದರೂ, ಕೆಲ ಮಂದಿ ಶಿಕ್ಷಕರು ಮೌಲ್ಯಮಾಪನಕ್ಕೆ ಗೈರಾದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಇದಕ್ಕೆ ಕಾರಣರಾದ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆ ಸೂಚನೆ ನೀಡಲಾಗಿದೆ ಎಂದರು.

ಸದ್ಯ ಮೌಲ್ಯಮಾಪನ ಪ್ರಕ್ರಿಯೆ ಒಂದು ಹಂತಕ್ಕೆ ಮುಗಿದಿದ್ದು,ಅಂಕಗಳ ಕ್ರೋಢಿಕರಣ ಮಾಡಲಾಗುತ್ತಿದೆ. ಮುಂದಿನ ವಾರದಲ್ಲಿ ಫಲಿತಾಂಶ ಹೊರಬೀಳಲಿದ್ದು, ಮೇ 20ರ ಒಳಗೆ ರಿಸಲ್ಟ್ ಪಕ್ಕಾ ಎಂದು ಸಚಿವರು ಹೇಳಿದರು.