Home daily horoscope ಕೊಲೆ ಬೆದರಿಕೆ ಹಾಕಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ, ಹೆಣ್ಣು ಮಗುವಿಗೆ ಜನ್ಮ‌ ನೀಡಿದ 10...

ಕೊಲೆ ಬೆದರಿಕೆ ಹಾಕಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ, ಹೆಣ್ಣು ಮಗುವಿಗೆ ಜನ್ಮ‌ ನೀಡಿದ 10 ನೇ ತರಗತಿ ಬಾಲಕಿ

Hindu neighbor gifts plot of land

Hindu neighbour gifts land to Muslim journalist

ಚಿಕ್ಕಬಳ್ಳಾಪುರ : ಯುವಕನೊಬ್ಬ ಕೊಲೆ ಬೆದರಿಕೆ ಹಾಕಿ ಅಪ್ರಾಪ್ತ ವಯಸ್ಸಿನ ಹುಡಿಗಿಯ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಲ್ಲದೇ ಅವಳಿಗೆ ಮಗುವನ್ನು ಕೂಡಾ ಕರುಣಿಸಿದ ಘಟನೆ ಚಿಂತಾಮಣಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

ಚಿಂತಾಮಣಿ ತಾಲೂಕಿನ ಖಾಸಗಿ ಶಾಲೆಯಲ್ಲಿ 10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳನ್ನು ಯುವಕ ನವೀನ್ ಎಂಬಾತ ಪ್ರಾಣ ಬೆದರಿಕೆ ಹಾಕಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ನಿನ್ನೆಯಷ್ಟೇ ಬಾಲಕಿಯು ಹೊಟ್ಟೆ ನೋವು ಎಂದು ಪೋಷಕರಿಗೆ ತಿಳಿಸಿದಾಗ ಈ ವಿಷಯ ತಿಳಿದು ಬಂದಿದೆ‌

ಬಳಿಕ ಆಸ್ಪತ್ರೆಯಲ್ಲಿ ದಾಖಲಿಸಿ ಪರಿಶೀಲಿಸಿದಾಗ ಬಾಲಕಿ ಗರ್ಭಿಣಿಯಾಗಿದ್ದು ಗೊತ್ತಾಗಿದೆ‌ ಪ್ರಸವ ವೇದನೆಯಿಂದ ಬಳಲುತ್ತಿದ್ದ ಬಾಲಕಿ ಇಂದು ಸರಕಾರಿ ಮಕ್ಕಳ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ‌ ಬಾಲಕಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಬಾಲಕಿಯ ವಿಚಾರಣೆಯ ವೇಳೆ ನವೀನ್ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಬಳಿಕ ತನಗೆ ಜೀವ ಬೆದರಿಕೆ ಕೂಡ ಹಾಕುತ್ತಿದ್ದ. ಇದರಿಂದ ಹೆದರಿ ವಿಷಯ ಮುಚ್ಚಿಟ್ಟಿದ್ದೆ ಎಂದು ಹೇಳಿದ್ದಾಳೆ.

ಬಾಲಕಿಯ ಹೇಳಿಕೆ ಆಧರಿಸಿ ಕೇಸು ದಾಖಲಿಸಿಕೊಂಡ ಪೊಲೀಸರು ನವೀನ್ ನನ್ನು ಬಂಧಿಸಿದ್ದಾರೆ.