Home Breaking Entertainment News Kannada Prakash Raj: ಬಹುಭಾಷಾ ನಟ ಪ್ರಕಾಶ್‌ ರಾಜ್‌ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ; ʼಗೋ ಮೂತ್ರ...

Prakash Raj: ಬಹುಭಾಷಾ ನಟ ಪ್ರಕಾಶ್‌ ರಾಜ್‌ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ; ʼಗೋ ಮೂತ್ರ ಸಿಂಪಡಿಸಿʼ ಅಂದ ನೆಟ್ಟಿಗರು

Prakash Raj

Hindu neighbor gifts plot of land

Hindu neighbour gifts land to Muslim journalist

Prakash Raj: ಬಹುಭಾಷಾ ನಟ ಪ್ರಕಾಶ್‌ ರಾಜ್‌ (Prakash Raj) ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ (Kapu Mariyamma) ಭೇಟಿ ನೀಡಿ, ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ಪಡೆದಿರುವ ಘಟನೆ ನಿನ್ನೆ ನಡೆದಿದೆ. ಇದೀಗ ಪ್ರಕಾಶ್‌ ಅವರು ಈ ಬಗ್ಗೆ ಟೀಕೆಗೆ ಗುರಿಯಾಗುತ್ತಿದ್ದಾರೆ. ” ಹಿಂದೂ ದೇವತೆಗಳಿಗೆ ಮರ್ಯಾದೆ ಕೊಡದವನು ದೇವಸ್ಥಾನಕ್ಕೆ ಭೇಟಿ ಕೊಟ್ಟಿದೇನೆ? ಗೋ ಮೂತ್ರ ಹಾಕಿ ಸಿಂಪಡಿಸಿ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ ನೆಟ್ಟಿಗರು.

ಇದನ್ನೂ ಓದಿ:Shikaripur Crime News: ಅನ್ಯಕೋಮಿನವರಿಂದ ಹಿಂದೂ ಯುವಕನಿಗೆ ಚಾಕು ಇರಿತ

ಲಕ್ಷಾಂತರ ಮಂದಿ ಭೇಟಿ ನೀಡುವ ಕಾಪು ಮಾರಿಯಮ್ಮ ದೇವಾಲಯ ಬಹಳ ಪ್ರಸಿದ್ಧಿಯನ್ನು ಪಡೆದ ದೇವಸ್ಥಾನ. ಇದೀಗ ಆ ದೇವಸ್ಥಾನಕ್ಕೆ ಪ್ರಕಾಶ್‌ ರಾಜ್‌ ಭೇಟಿ ನೀಡಿದ್ದು, ಹೊಸ ಮಾರಿಗುಡಿ ನಿರ್ಮಾಣ ಕಾರ್ಯ ಕೂಡಾ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾಮಗಾರಿ ವೀಕ್ಷಣೆಯನ್ನು ಕೂಡಾ ಪ್ರಕಾಶಧ ರಾಜ್‌ ಮಾಡಿದ್ದಾರೆ. ಇಳಕಲ್ಲಿನ ಕಲಾತ್ಮಕ ಶೈಲಿನ ಕೆತ್ತನೆಗಳ ಕುರಿತು ಮಾಹಿತಿ ಪಡೆದಿದ್ದಾರೆ.

ಹಿಂದೂ ವಿರೋಧಿ ಎಂಬ ಪಟ್ಟ ಪ್ರಕಾಶ್‌ ರಾಜ್‌ಗೆ ಹಲವು ಮಂದಿ ನೀಡಿದ್ದಾರೆ. ಆದರೆ ಅವರನ್ನು ಇದೀಗ ದೇವಾಲಯದಲ್ಲಿ ನೋಡಿ ಅಚ್ಚರಿಪಟ್ಟಿದ್ದು, ಈ ಫೋಟೋಗಳು ವೈರಲ್‌ ಆಗುತ್ತಿದ್ದಂತೆ ” ಹಿಂದೂ ದೇವತೆಗಳಿಗೆ ಮರ್ಯಾದೆ ಕೊಡದವನು ದೇವಸ್ಥಾನಕ್ಕೆ ಭೇಟಿ ನೀಡಿದ್ಯಾಕೆ? ಆಡಳಿತ ಮಂಡಳಿ ಒಳಕ್ಕೆ ಬಿಟ್ಟಿದ್ದು ತಪ್ಪುʼ ಎಂಬ ಕಮೆಂಟ್‌ ಹಾಕಿದ್ದಾರೆ.

ಈ ಹಿಂದೆ ಪ್ರಕಾಶ್‌ ರಾಜ್‌ ಅವರು ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್‌ ಗೆ ತಮ್ಮ ಬೆಂಬಲ ಸೂಚಿಸಿದ್ದರು. ಹಿಂದೂ ವಿರೋಧಿ ಎಂಬ ಆರೋಪದ ಬಗ್ಗೆ ಸ್ವತಃ ಪ್ರಕಾಶ್‌ ರಾಜ್‌ ಅವರೇ ಮಾತನಾಡಿದ್ದರು.

ಸನಾತನ‌ ಧರ್ಮ ಎಂದರೆ ಏನು? ನಾನು ಬದಲಾಗುವುದಿಲ್ಲ ಎನ್ನುವುದು ಪ್ರಕೃತಿಗೆ ವಿರುದ್ಧ, ಕೆಲವರು ನಾನೇ ಶ್ರೇಷ್ಠ ಎನ್ನುತ್ತಾರೆ. ಕಾಗೆಗಳು ಹೆಚ್ಚಾಗಿ ಸೇರಿಕೊಂಡು ಕೋಗಿಲೆ ನಮ್ಮ ಮಾತು ಕೇಳಬೇಕು ಎನ್ನುವ ಮಾತು ಆಡುತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಇವರು ದಾರಿ ತಪ್ಪಿಸುತ್ತಿದ್ದಾರೆ. ಸನಾತನ‌ ಧರ್ಮದ ಬಗ್ಗೆ ಮಾತನಾಡುವವರು ಯಾರೂ ಹಿಂದೂಗಳಲ್ಲಾ, ಇವರೆಲ್ಲಾ ರಾಜಕೀಯ ಲಾಭಕ್ಕಾಗಿ ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ಅಮಾವಾಸ್ಯೆ ಎಂದರೆ ಚೆನ್ನಾಗಿಲ್ವಂತೆ, ಆದರೆ ಚಂದ್ರಯಾನ ಮಾಡುತ್ತಾರಂತೆʼʼ ಎಂಬ ಮಾತನ್ನು ಪ್ರಕಾಶ್‌ ರಾಜ್‌ ಹೇಳಿದ್ದರು.

ನಾನು ರಾಜಕೀಯ ವ್ಯಕ್ತಿ ಅಲ್ಲ. ಜೈ ಶ್ರೀರಾಮ್‌ ಎಂದು ಮೆರವಣಿಗೆಯಲ್ಲಿ ಕೈಯಲ್ಲಿ ಕತ್ತಿ ಹಿಡಿದು ಯುವಕರು ಓಡಾಡುತ್ತಾರೆ ಎಂದರೆ ಏನರ್ಥ? ಧರ್ಮ ನಂಬಿಕೆ ಅವರವರಿಗೆ ಬಿಟ್ಟದ್ದು, ಬಸವಣ್ಣ, ಅಂಬೇಡ್ಕರ್‌ ಹೇಳಿದ್ದು ಭಾಷಣಕ್ಕಾಗಿ ಅಲ್ಲ, ಇದೆಲ್ಲವನ್ನು ಜೀವನದಲ್ಲಿ ಅಳವಡಿಕೊಳ್ಳಬೇಕೆಂದು ಹೇಳಿದ್ದು ಎಂದು ಹೇಳಿದ್ದರು.