Home Breaking Entertainment News Kannada ನೀವೂ ಕೂಡ ರಮೇಶ್ ಅರವಿಂದ್ ಅಭಿಮಾನಿಗಳ? ಹಾಗಿದ್ರೆ ಬರ್ತ್ ಡೇ ವಿಶ್ ಮಾಡಲು ಇಲ್ಲಿದೆ ಅವರ...

ನೀವೂ ಕೂಡ ರಮೇಶ್ ಅರವಿಂದ್ ಅಭಿಮಾನಿಗಳ? ಹಾಗಿದ್ರೆ ಬರ್ತ್ ಡೇ ವಿಶ್ ಮಾಡಲು ಇಲ್ಲಿದೆ ಅವರ ಫೋನ್ ನಂಬರ್

Hindu neighbor gifts plot of land

Hindu neighbour gifts land to Muslim journalist

ನಟ-ನಟಿಯರು ಅಂದ್ರೆ ಸಾಮಾನ್ಯ ಜನರಿಗೆ ಸಿಗೋದೇ ಕಡಿಮೆ. ಅವರ ಅಭಿಮಾನಿಗಳ ಪ್ರೀತಿ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಇರುತ್ತದೆ. ಅದರಲ್ಲೂ ಸೆಲೆಬ್ರೇಟಿಗಳ ಹುಟ್ಟು ಹಬ್ಬ ಬಂತೆಂದರೆ ಸಾಕು ಹುಡುಕಿಕೊಂಡು ಹೋಗಿ ಕೇಕ್ ಕಟ್ ಮಾಡಿಸುತ್ತಾರೆ. ಆದ್ರೆ ಕೆಲವೊಂದು ನಟರು ಅಭಿಮಾನಿಗಳಿಗೆ ಸಮಯ ನೀಡಿದರೆ ಇನ್ನೂ ಕೆಲವರು ಕ್ಯಾರೇ ಅನ್ನೋದಿಲ್ಲ. ಅಂತದರಲ್ಲಿ ಇಲ್ಲೊಬ್ಬ ನಟ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಫೋನ್ ನಂಬರ್ ಅನ್ನೇ ನೀಡಿದ್ದಾರೆ.

ಹೌದು. ಅವರು ಬೇರೆ ಯಾರು ಅಲ್ಲ. ಅಭಿಮಾನಿಗಳ ಮನ ಗೆದ್ದಿರುವ ಎಲ್ಲರ ನೆಚ್ಚಿನ ನಟ, ನಿರ್ದೇಶಕ, ನಿರೂಪಕ ರಮೇಶ್​ ಅರವಿಂದ್. ಆದರೆ ರಮೇಶ್ ಅರವಿಂದ್ ಅವರು ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಎಂದು ಫೋನ್ ನಂಬರ್ ಶೇರ್ ಮಾಡಿದ್ದಾರೆ. ಅಂದಹಾಗೆ ಸೆಪ್ಟೆಂಬರ್​ 10ರಂದು ರಮೇಶ್​ ಅರವಿಂದ್​ ಅವರ ಜನ್ಮದಿನ. ಈ ವಿಶೇಷ ದಿನದಂದು ಅವರಿಗೆ ಶುಭಾಶಯ ತಿಳಿಸಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ನೇರವಾಗಿ ವಿಶ್​ ಮಾಡುವುದು ಕಷ್ಟ. ಅದಕ್ಕಾಗಿ ಸ್ವತಃ ರಮೇಶ್​ ಅರವಿಂದ್​ ಕಡೆಯಿಂದ ಒಂದು ದೊಡ್ಡ ಆಫರ್​ ನೀಡಲಾಗಿದೆ.

ಅಭಿಮಾನಿಗಳಿಗಾಗಿ ರಮೇಶ್ ಅರವಿಂದ್ ಫೋನ್​ ನಂಬರ್ ನೀಡಿದ್ದಾರೆ. ಆ ನಂಬರ್​ಗೆ ವಾಟ್ಸಾಪ್​ ಸಂದೇಶ ಕಳಿಸುವ ಮೂಲಕ ನೆಚ್ಚಿನ ನಟನಿಗೆ ನೀವು ವಿಶ್​ ಮಾಡಬಹುದು. ರಮೇಶ್ ಅರವಿಂದ್ ಸದ್ಯ ಮೋಟಿವೇಶನ್ ವಿಡಿಯೋ ಮೂಲಕ ಯುವಕರನ್ನು ಸೆಳೆಯುತ್ತಿದ್ದಾರೆ. ಅನೇಕ ಶಾಲೆ ಮತ್ತು ಕಾಲೇಜುಗಳಲ್ಲಿ ಮೋಟಿವೇಶನ್ ಸ್ಪೀಚ್ ನೀಡಿದ್ದಾರೆ. ಅಪಾರ ಸಂಖ್ಯೆಯ ಯುವ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಅವರಿಗೆ ಶುಭಹಾರೈಸಲು ಅಭಿಮಾನಿಗಳಿಗೆ ಬಂಪರ್ ಆಫರ್ ನೀಡಿದ್ದಾರೆ. ನೇರವಾಗಿ ರಮೇಶ್ ಅವರವಿಂದ್ ಅವರಿಗೆ ಫೋನ್ ಮಾಡಿ ವಿಶ್ ಮಾಡಬಹುದು. ಹೌದು, ಅಭಿಮಾನಿಗಳು 8951599009 ಮತ್ತು 8951699009 ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸುವ ಮೂಲಕ ರಮೇಶ್​ ಅರವಿಂದ್​ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು.

ಕೇವಲವಿಶ್​ ಮಾಡುವುದು ಮಾತ್ರವಲ್ಲದೇ ರಮೇಶ್​ ಅರವಿಂದ್​ ಅವರಿಗೆ ಏನಾದರೂ ಪ್ರಶ್ನೆಗಳನ್ನೂ ಕೇಳಬಹುದು. ಹೀಗೆ ಮೆಸೇಜ್ ಮಾಡುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೇ ನಮೂದಿಸಿರಬೇಕು. ಮೆಸೇಜ್​ ಮಾಡಿದ ಪ್ರತಿಯೊಬ್ಬರಿಗೂ ರಮೇಶ್​ ಅರವಿಂದ್​ ಅವರೇ ಸ್ವತಃ ಪ್ರತಿಕ್ರಿಯೆ ನೀಡಲಿದ್ದಾರೆ. ಎಲ್ಲರಿಗಿಂತ ವಿಭಿನ್ನವಾಗಿ ಶುಭಾಶಯ ತಿಳಿಸಿದವರಿಗೆ ಖುದ್ದಾಗಿ ರಮೇಶ್ ಅರವಿಂದ್ ಕರೆ ಮಾಡಿ ಮಾತನಾಡಲಿದ್ದಾರೆ ಎನ್ನುವುದು ವಿಶೇಷ.