Browsing Category

News

ನಾಳೆ ಎಸ್ಎಸ್ಎಲ್ ಸಿ ಫಲಿತಾಂಶ | ನೂತನ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಂದ ಸೋಮವಾರ ಸಂಜೆ ಪ್ರಕಟ

ಕೊರೋನಾ ಆತಂಕದ ನಡುವೆಯೇ ನಡೆದ ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸುದ್ದಿಗೋಷ್ಠಿಯಲ್ಲಿ ಸೋಮವಾರ ಸಂಜೆ 3.30 ಕ್ಕೆ ಫಲಿತಾಂಶ ಪ್ರಕಟಿಸಲಿದ್ದಾರೆ. ಬೆಂಗಳೂರಿನಲ್ಲಿರುವ ಪ್ರೌಢ ಶಿಕ್ಷಣ

ಮಹಿಳೆ ಚಲಾಯಿಸುತ್ತಿದ್ದ ಕಾರು ಹೇರೂರು ಸೇತುವೆ ಮೇಲೆ ಕಂಟೈನರ್ ಗೆ ಡಿಕ್ಕಿ | ಶೂಟಿಂಗಿಗೆ ತೆರಳುವಾಗ ನಡೆದ ಅವಘಡದಲ್ಲಿ…

ಬ್ರಹ್ಮಾವರ ಬಳಿಯ ಹೇರೂರು ಸೇತುವೆ ಮೇಲೆ ಕಂಟೈನರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಮಂದಿ ಗಾಯಗೊಂಡ ಘಟನೆ ಇಂದು ನಡೆದಿದೆ. ಇಂದು ಬೆಳಗ್ಗೆ 7.15 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಕಡಬ : ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದ ಮೃತದೇಹ ಪತ್ತೆ

ಕಡಬದ ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತದೇಹವೊಂದು ಶನಿವಾರ ರಾತ್ರಿ ಕಂಡುಬಂದಿದೆ. ಕಡಬ ಸಮೀಪದ ಗೋಳಿಯಡ್ಕ ನಿವಾಸಿಯೋರ್ವರು ಶನಿವಾರದಂದು ಮೃತಪಟ್ಟಿದ್ದು, ಕಡಬದ ಹಿಂದೂ ರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಮೃತದೇಹಕ್ಕೆ ಬೆಂಕಿ

ಎಡಮಂಗಲ : ರೈಲಿನಡಿಗೆ ಬಿದ್ದು ಯುವಕನೋರ್ವ ಸಾವು

ಕಡಬ : ಯುವಕನೋರ್ವ ರೈಲಿನ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಎಡಮಂಗಲದಲ್ಲಿ ಸಂಭವಿಸಿದೆ. ಕಡಬ ತಾಲೂಕಿನ ಎಡಮಂಗಲದ ಪಟ್ಲ ದಡ್ಡು ಕುಶಾಲಪ್ಪ ಯಾನೆ ಪೂವಪ್ಪ ನಾಯ್ಕರ ಪುತ್ರ ಭರತ್(24) ಮೃತ ಯುವಕ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಎಡಮಂಗಲದ ಟೈಲರ್ ಅಂಗಡಿಗೆ ಹೋಗಿ

ಸವಣೂರು :ವೀಕೆಂಡ್ ಕರ್ಫ್ಯೂ,ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಿಸಿದ ಪೊಲೀಸರು

ಕಡಬ : ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಸರಕಾರ ಜಾರಿಗೊಳಿಸಿದ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಕಡಬ ತಾಲೂಕಿನ ಸವಣೂರಿನಲ್ಲಿ ಪೊಲೀಸರು ದಂಡ ವಿಧಿಸಿದರು. ಅಲ್ಲದೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿ,ಮಾಸ್ಕ್ ವಿತರಿಸುವ ಮೂಲಕ ಪೊಲೀಸರು ಗಮನ ಸೆಳೆದರು.

ಕಣಿಯೂರು | ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

ವಿದ್ಯುತ್ ಶಾಕ್ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಕಣಿಯೂರಿನಲ್ಲಿ ನಡೆದಿದೆ. ಕಣಿಯೂರು ಗ್ರಾಮದ ಪೋಯ್ಯ ಮನೆ ನಿವಾಸಿ ನಾಣ್ಯಪ್ಪ ಪೂಜಾರಿ ಮೃತಪಟ್ಟವರು ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ, ವಿದ್ಯುತ್ ತಂತಿ ತುಂಡಾಗಿ

ಬ್ಲೂಟೂತ್ ಇಯರ್ ಫೋನ್ ಸ್ಫೋಟ, ಯುವಕ ಸಾವು

ಬ್ಲೂಟೂತ್ ಇಯರ್ ಫೋನ್ ಸ್ಫೋಟಗೊಂಡು ಯುವಕನೋರ್ವ ಮೃತಪಟ್ಟ ಘಟನೆ ರಾಜಸ್ಥಾನದ ಜೈಪುರ್ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವಕನನ್ನು ರಾಕೇಶ್ ನಗರ್ ಎಂದು ಗುರುತಿಸಲಾಗಿದೆ. ಈತ ಉದಯ್‍ಪುರ ನಿವಾಸಿಯಾಗಿದ್ದಾನೆ. ಯುವಕ ಬ್ಲೂಟೂತ್ ಇಯರ್ ಫೋನ್ ಕಿವಿಗೆ ಹಾಕಿಕೊಂಡು ಮಾತನಾಡುತ್ತಿದ್ದನು.

ಬೆಳ್ತಂಗಡಿ | ವಿದ್ಯಾರ್ಥಿನಿ ನಾಪತ್ತೆ, ತಾಯಿಯಿಂದ ದೂರು ದಾಖಲು

ಬೆಳ್ತಂಗಡಿಯ ಚರ್ಚ್ ರೋಡ್ ಬಳಿ ಮನೆಯಿಂದ ನಿನ್ನೆ ಸಂಜೆ ಹೊರಹೋದ ವಿದ್ಯಾರ್ಥಿನಿ ಮನೆಗೆ ವಾಪಸ್ಸಾಗದೆ ನಾಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳ್ತಂಗಡಿ ಕಸಬಾ ಗ್ರಾಮದ ಸೋಬಿನ್ ಮತ್ತು ಮೊಳಿ ಸೋಬಿನ್ ದಂಪತಿ ಪುತ್ರಿ ಕುಮಾರಿ ಆಸೀನಾ ಎಂಬವರು