Home Business Karnataka Petrol Price Today: ವಿವಿಧ ಜಿಲ್ಲೆಗಳ ತೈಲದರ ಹೀಗಿದೆ

Karnataka Petrol Price Today: ವಿವಿಧ ಜಿಲ್ಲೆಗಳ ತೈಲದರ ಹೀಗಿದೆ

Hindu neighbor gifts plot of land

Hindu neighbour gifts land to Muslim journalist

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಆಗುವ ವ್ಯತ್ಯಾಸಗಳು ಭಾರತದ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಬೆಲೆ ಪರಿಣಾಮ ಬೀರುತ್ತವೆ. ಹಾಗಾಗಿ, ಕಚ್ಚಾತೈಲದ ಬೆಲೆಯಲ್ಲಿನ ವ್ಯತ್ಯಯದಿಂದ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಏರಿಳಿತ ಕಂಡುಬರುವುದಲ್ಲದೆ ಸಾಮಾನ್ಯ ಜನತೆಯ ಜೇಬಿಗೂ ಕತ್ತರಿ ಬೀಳುತ್ತದೆ.

ಭಾರತೀಯರ ದಿನನಿತ್ಯದ ವಾಹನ ಸಂಚಾರಕ್ಕೆ ಅತ್ಯಗತ್ಯವಾದ ಪೆಟ್ರೋಲ್‌ ಹಾಗೂ ಡೀಸೆಲ್‌ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಇಂಧನ ದರ ಬೆಲೆ ಏರಿಕೆಯಾದಾಗ ಸಾಮಾನ್ಯ ಜನತೆಯ ಮೇಲೆ ಹೆಚ್ಚು ಪ್ರಭಾವ ಬೀರುವ ಜೊತೆಗೆ ಸರ್ಕಾರದ ಬೊಕ್ಕಸದ ಮೇಲೂ ಕೂಡ ಪರಿಣಾಮ ಬೀರುತ್ತವೆ. ಇದರ ಹೊರತಾಗಿ, ರಷ್ಯಾ ಮತ್ತು ಉಕ್ರೇನ್‌ ಯುದ್ಧದ ಪರಿಣಾಮ ದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಅಲ್ಲದೇ ಕಚ್ಚಾತೈಲದ ರಫ್ತಿನ ಮೇಲೂ ರಷ್ಯಾ-ಉಕ್ರೇನ್‌ ಯುದ್ಧ ಪರಿಣಾಮ ಬೀರಿದೆ.

ಕಚ್ಚಾತೈಲದ ರಫ್ತಿನ ಬೆಲೆ ಏರಿಕೆಯಾಗಿದ್ದು, ಇದು ಸಹಜವಾಗಿ ದೇಶದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಏರಿಕೆ ಕಂಡು ಬರಲು ಕಾರಣವಾಗಿದೆ.

ದಿನಂಪ್ರತಿ ಬೆಲೆ ಇಳಿಕೆಯಾಗಲಿ ಎಂಬ ಆಶಾಭಾವನೆಯಲ್ಲಿ ಎದುರು ನೋಡುವ ಜನತೆಗೆ ನಿರಾಸೆ ಮಾತ್ರ ಕಟ್ಟಿಟ್ಟ ಬುತ್ತಿ ಎಂದರೆ ತಪ್ಪಾಗದು!!! ಏಕೆಂದರೆ, ಪ್ರತಿ ನಿತ್ಯ ಪೈಸೆಗಳ ಲೆಕ್ಕದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ವ್ಯತ್ಯಯವಾಗುತ್ತವೆ. ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯಲ್ಲಿ ತಟಸ್ಥ ಸ್ಥಿತಿ ಇದ್ದರೂ ಕೂಡ ಒಟ್ಟಾರೆಯಾಗಿ ಹೇಳುವುದಾದರೆ, ದರ ತುಸು ಹೆಚ್ಚೆಂದರು ತಪ್ಪಾಗದು!!

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸೇರಿದಂತೆ ಸಾರ್ವಜನಿಕ ವಲಯದ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾನದಂಡದ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪ್ರತಿದಿನ ಇಂಧನ ಬೆಲೆಗಳನ್ನು ಪರಿಷ್ಕರಣೆ ಮಾಡುತ್ತವೆ. ವ್ಯಾಟ್ ಅಥವಾ ಸರಕು ಸಾಗಣೆ ಶುಲ್ಕಗಳಂತಹ ಸ್ಥಳೀಯ ತೆರಿಗೆಗಳಿಂದಾಗಿ ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಆಯಾ ರಾಜ್ಯದಲ್ಲಿ ಬಿನ್ನವಾಗಿರು ವುದನ್ನು ಗಮನಿಸಬೇಕು.

ಅದೇ ರೀತಿ ದೇಶದ ಮಹಾನಗರಗಳಲ್ಲಿ ಇಂದಿನ (ನ.28-ಸೋಮವಾರ) ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ನೋಡುವುದಾದರೆ;

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್: 96.72 ರೂ. ಆಗಿದ್ದು, ಡೀಸೆಲ್: 89.62 ರೂ. ಆಗಿದೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್: 101.94 ರೂ. ಆಗಿದ್ದು, ಡೀಸೆಲ್: 87.89 ರೂ. ಆಗಿದೆ.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತ್ತಾದಲ್ಲಿ ಪೆಟ್ರೋಲ್: 106.03 ರೂ. ಆಗಿದ್ದು, ಡೀಸೆಲ್: 92.76 ರೂ. ಆಗಿದೆ.

ಇನ್ನೂ ಮಹಾರಾಷ್ಟ್ರ ರಾಜಧಾನಿ ಮುಂಬೈಯಲ್ಲಿ ಪೆಟ್ರೋಲ್: 106.31 ರೂ. ಆಗಿದ್ದರೆ, ಡೀಸೆಲ್: 94.27 ರೂ. ಆಗಿದೆ. ಚೆನ್ನೈ ಯಲ್ಲಿ ಪೆಟ್ರೋಲ್: 102.63 ರೂ. ಆಗಿದ್ದು, ಅದೆ ರೀತಿ,ಡೀಸೆಲ್: 94.24 ರೂ. ಆಗಿದೆ.

ಇನ್ನು ದೇಶದ ಮಹಾನಗರಗಳಲ್ಲಿ ಗೃಹ ಬಳಕೆಯ ಸಿಲಿಂಡರ್‌ (ಎಲ್‌ಪಿಜಿ) ದರ ಹೀಗಿವೆ:

ರಾಷ್ಟ್ರ ರಾಜಧಾನಿ ನವದೆಹಲಿ: 1,053 ರೂ. ಆಗಿದ್ದು, ಕೋಲ್ಕೊತ್ತಾ: 1,079 ರೂ. ಆಗಿದೆ. ಮುಂಬೈ ನಲ್ಲಿ 1,052.50 ರೂ. ಆಗಿದ್ದು, ಚೆನ್ನೈ ನಲ್ಲಿ 1,068.50 ರೂ. ಆಗಿದೆ .

ಅದೇ ರೀತಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1,055.50 ರೂ. ಆಗಿದೆ. ಸದ್ಯ ದೇಶದಲ್ಲಿ ತೈಲ ಬೆಲೆಗಳನ್ನು ಕಡಿಮೆ ಮಾಡಬೇಕೆಂಬ ಬೇಡಿಕೆ ಇದ್ದರೂ ಕೂಡ ತೈಲ ಬೆಲೆಗಳ ಸ್ಥಿತ್ಯಂತರಕ್ಕೆ ಕೇಂದ್ರ ಸರ್ಕಾರ ಕೂಡ ಹಲವು ಕ್ರಮಗಳನ್ನು ಕೈಗೊಂಡಿದೆ.