Home Business ಟೈಟಾಗಿ ರಾತ್ರಿ ಬಂದು ಹಾಸ್ಟೆಲ್‌ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಮಾಡಿದ ಮುಖ್ಯ ಶಿಕ್ಷಕ...

ಟೈಟಾಗಿ ರಾತ್ರಿ ಬಂದು ಹಾಸ್ಟೆಲ್‌ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಮಾಡಿದ ಮುಖ್ಯ ಶಿಕ್ಷಕ | ಮೈ ಚಳಿ ಬಿಡಿಸಿದ ಶಾಲಾ ಬಾಲಕಿಯರು

Hindu neighbor gifts plot of land

Hindu neighbour gifts land to Muslim journalist

ಹಾಸ್ಟೆಲ್ ವಿದ್ಯಾರ್ಥಿನಿಯರ ಜತೆ ಅಸಭ್ಯ ವರ್ತನೆ ತೋರಿದ ಹಿನ್ನೆಲೆ ವಿದ್ಯಾರ್ಥಿನಿಯರು ಗುಂಪಾಗಿ ಕಾಮುಕ, ಮುಖ್ಯ ಶಿಕ್ಷಕನಿಗೆ ಹಿಗ್ಗಾ ಮುಗ್ಗಾ ಥಳಿಸಿ ಹಣ್ಣುಗಾಯಿ ನೀರುಗಾಯಿ ಮಾಡಿರುವ ಘಟನೆ ಮಂಡ್ಯದಲ್ಲಿ ವರದಿಯಾಗಿದೆ.

ಹೆಣ್ಣು ಮಕ್ಕಳೆಂದರೆ ಸಾಕು.. ಜೊಲ್ಲು ಸುರಿಸಿಕೊಂಡು ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಹರಸಾಹಸ ಪಡುವವರೆ ಹೆಚ್ಚು. ಕೆಲವೊಮ್ಮೆ ಹೆಂಗೆಳೆಯರು ಪುರುಷರ ದೌರ್ಜನ್ಯವನ್ನು ಮನೆಯ ಮರ್ಯಾದೆಗೆ ಅಂಜಿ ಸಹಿಸಿಕೊಂಡರೆ ಮತ್ತೆ ಕೆಲ ಮಹಿಳೆಯರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ. ಇದೆ ರೀತಿಯ ಪ್ರಕರಣವೊಂದು ಸಕ್ಕರೆ ನಾಡಲ್ಲಿ ಬೆಳಕಿಗೆ ಬಂದಿದೆ.

ಮಕ್ಕಳಿಗೆ ಸರಿ ದಾರಿ ತೋರಿಸಬೇಕಿದ್ದ ಶಿಕ್ಷಕ ಗುರುವಿನ ಸ್ಥಾನಕ್ಕೆ ಮಸಿ ಬಳಿಯುವ ಕೆಲಸಕ್ಕೆ ಮುಂದಾಗಿದ್ದು ಈ ರೀತಿಯ ಕಾಮ ಕ್ರಿಮಿಗಳು ಇನ್ನುಳಿದ ಶಿಕ್ಷಕರ ವೃತ್ತಿಗೆ ಧಕ್ಕೆ ತರುತ್ತಿದ್ದಾರೆ. ಮಂಡ್ಯದಲ್ಲಿ ವಿದ್ಯಾರ್ಥಿನಿಯರ(Students)ಜೊತೆಗೆ ಅಸಭ್ಯ ವರ್ತನೆ ತೋರಿದ ಶಿಕ್ಷನಿಗೆ ವಿದ್ಯಾರ್ಥಿನಿಯರು ಕೈಯಲ್ಲಿ ಕೋಲು, ದೊಣ್ಣೆ ಹಿಡಿದು ಶಿಕ್ಷಕನ ಚಳಿ ಬಿಡಿಸಿದ್ದಾರೆ. ವಿದ್ಯಾರ್ಥಿನಿಯರ ಏಟಿಗೆ ಮುಖ್ಯ ಶಿಕ್ಷಕ ಬೆಳಲಿ ಬೆಂಡಾಗಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರ ಜತೆ ಅಸಭ್ಯ ವರ್ತನೆ ತೋರಿದ ಹಿನ್ನೆಲೆ ವಿದ್ಯಾರ್ಥಿನಿಯರು ಗುಂಪಾಗಿ ಕಾಮುಕ, ಮುಖ್ಯ ಶಿಕ್ಷಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಎಣ್ಣೆ ಏಟಲ್ಲಿ ರಾತ್ರಿ ವಿದ್ಯಾರ್ಥಿನಿಯರ ಜತೆ ಶಿಕ್ಷಕ ಆನಂದ ಚಿನ್ಮಯ ಮೂರ್ತಿ ಅಸಭ್ಯ ವರ್ತನೆ ತೋರಿದ್ದ ಎನ್ನಲಾಗಿದ್ದು, ಹಾಗಾಗಿ, ವಿದ್ಯಾರ್ಥಿನಿಯರು ತಮ್ಮೊಡನೆ ಅನುಚಿತವಾಗಿ ನಡೆದುಕೊಂಡ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಕೆ.ಆರ್.ಎಸ್ ಠಾಣಾ ಪೊಲೀಸರು ಕಾಮುಕ ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ.