Home Business ಉತ್ತಮ ಗುಣಮಟ್ಟ ಹೊಂದಿರೋ ಅತ್ಯಂತ ಕಡಿಮೆ ಬೆಲೆಯ ಗೀಸರ್‌ ಮಾರುಕಟ್ಟೆಯಲ್ಲಿ | ನೀರು ಬಿಸಿಯಾಗಲು ನಿಮಿಷ...

ಉತ್ತಮ ಗುಣಮಟ್ಟ ಹೊಂದಿರೋ ಅತ್ಯಂತ ಕಡಿಮೆ ಬೆಲೆಯ ಗೀಸರ್‌ ಮಾರುಕಟ್ಟೆಯಲ್ಲಿ | ನೀರು ಬಿಸಿಯಾಗಲು ನಿಮಿಷ ಸಾಕು

Hindu neighbor gifts plot of land

Hindu neighbour gifts land to Muslim journalist

ದಿನನಿತ್ಯದ ಪ್ರತಿ ವಸ್ತುಗಳ ಬೆಲೆ ದುಬಾರಿ ಎಂದು ಚಿಂತಿತರಾಗಿದ್ದರೆ, ನಿಮಗಾಗಿ ಮಾರುಕಟ್ಟೆಗೆ ಅಗ್ಗದ ಬೆಲೆಯ ಗೀಸರ್ ಕಾಲಿಟ್ಟಿದ್ದು, ಕೊತ ಕೊತ ಕುದಿಯುವ ನೀರು ನಿಮಿಷಗಳಲ್ಲಿ ದೊರೆಯಲಿದೆ.

ಭಾರತದಲ್ಲಿ ಗೀಸರ್ ಬಳಕೆ ಸಾಮಾನ್ಯ. ಇದೀಗ ಅತಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಗೀಸರ್ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಗೀಸರ್ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಸಿದ್ಧಿ ಕೂಡ ಪಡೆಯುತ್ತಿದೆ. ಇದು ಮಿತವ್ಯಯಕಾರಿಯಾಗಿದೆ. ಇಷ್ಟೇ ಅಲ್ಲದೆ, ಇದರ ಬಳಕೆಯಿಂದ ತಗಲುವ ವಿದ್ಯುತ್ ವೆಚ್ಚ ಕೂಡಾ ಕಡಿಮೆ ಎಂದರೆ ತಪ್ಪಾಗದು.

ಚುಮು ಚುಮು ಚಳಿಯ ನಡುವೆ ಬೆಚ್ಚಗಿನ ಬಿಸಿ ನೀರಲ್ಲಿ ಮಿಂದರೆ ಮೈ ಮನವೆಲ್ಲ ಪುಳಕ. ಹೇಳಿ ಕೇಳಿ ಈ ಚಳಿಗಾಲದಲ್ಲಿ ಬೆಚ್ಚಗಿನ ನೀರನ್ನೇ ಬಯಸುವವರು ಹೆಚ್ಚು. ಸಾಮಾನ್ಯವಾಗಿ ಮನೆಗಳಲ್ಲಿ ಬಿಸಿ ನೀರಿಗಾಗಿ ಗೀಸರ್ ಬಳಕೆ ಮಾಡಲಾಗುತ್ತದೆ. ಆದರೆ ಉತ್ತಮ ಗುಣಮಟ್ಟದ ಗೀಸರ್ ಬೇಕು ಎಂದಾದರೆ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.

ಆದರೆ ಇದೀಗ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ಗೀಸರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಗೀಸರ್ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಸಿದ್ದಿ ಪಡೆಯುತ್ತಿದೆ. ಕೈಗೆಟುಕುವ ಬೆಲೆಯ ಜೊತೆಗೆ ಅದರ ವೈಶಿಷ್ಟ್ಯಗಳ ಮೂಲಕ ಈ ಗೀಸರ್ ಗ್ರಾಹಕರ ಮನಸೆಳೆಯುತ್ತಿದೆ.

ಹಾವೆಲ್ಸ್ ಕಂಪನಿಯ ಈ ಗೀಸರ್‌ 3 ಲೀಟರ್ ಸಾಮರ್ಥ್ಯವನ್ನು ಹೊಂದಿದ್ದು, ಈ ಗೀಸರ್ ವಿನ್ಯಾಸ ಕೂಡ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗೀಸರ್ ಸ್ಟೈಲಿಶ್ ಆಗಿದ್ದು, ಆಪರೇಟ್ ಮಾಡುವುದು ಕೂಡ ಸರಳ ಹಾಗೂ ಸುಲಭ. ಸ್ನಾನಗೃಹದಲ್ಲಿ ಹೆಚ್ಚು ಸ್ಥಳವನ್ನು ಆಕ್ರಮಣ ಕೂಡ ಮಾಡಿಕೊಳ್ಳುವುದಿಲ್ಲ. ಈ ಗೀಸರ್‌ನಲ್ಲಿ ನೀರನ್ನು ಒಮ್ಮೆ ಬಿಸಿ ಮಾಡಿದರೆ, ಗಂಟೆಗಳವರೆಗೆ ಅದು ಬಿಸಿಯಾಗಿರುತ್ತದೆ. ಆದ್ದರಿಂದ ಗೀಸರ್ ಅನ್ನು ಮತ್ತೆ ಮತ್ತೆ ಆನ್ ಮಾಡುವ ಅವಶ್ಯಕತೆ ಇಲ್ಲ.

ಈ ಗೀಸರ್ ಅನ್ನು ಭಾರತೀಯ ಸ್ನಾನಗೃಹವನ್ನು ಕೇಂದ್ರೀಕರಿಸಿ ವಿನ್ಯಾಸಗೊಳಿಸಲಾಗಿದೆ. ಗೀಸರ್ ನ ವಿಶೇಷತೆಯ ಬಗ್ಗೆ ಗಮನಿಸಿದರೆ, ಇದು ಇನ್ಸ್ಟಂಟ್ ವಾಟರ್ ಗೀಸರ್ ಆಗಿದ್ದು, ಅಂದರೆ ಬಿಸಿ ನೀರಿಗಾಗಿ ಸ್ವಿಚ್ ಆನ್ ಮಾಡಿ ಗಂಟೆಗಳವರೆಗೆ ಕಾಯುವ ಅವಶ್ಯಕತೆ ಇಲ್ಲ. ಸ್ವಿಚ್ ಆನ್ ಮಾಡಿದ ಕೆಲವೇ ಕ್ಷಣಗಳಲ್ಲಿ ಬಿಸಿ ನೀರು ಲಭ್ಯವಾಗುತ್ತದೆ.

ಇದನ್ನು ಅಡುಗೆಮನೆಯಲ್ಲಿ ಕೂಡ ಬಳಕೆ ಮಾಡಬಹುದಾಗಿದೆ.ಈ ಗೀಸರ್ ನ ಬೆಲೆ ಕೇವಲ 3,599 ರೂಪಾಯಿಯಾಗಿದ್ದು, ಗ್ರಾಹಕರು ಕ್ರೋಮಾದ ವೆಬ್‌ಸೈಟ್‌ ಮೂಲಕ ಈ ಗೀಸರ್ ಅನ್ನು ಖರೀದಿಸಬಹುದಾಗಿದೆ.ಇದು ಸಂಪೂರ್ಣವಾಗಿ ಅಟೋಮ್ಯಾಟಿಕ್ ಗೀಸರ್ ಆಗಿದ್ದು, ಈ ಗೀಸರ್ ಶಾಕ್ ಪ್ರೂಫ್ ಆಗಿರುವುದರಿಂದ ಇದನ್ನು ಮುಟ್ಟಿದರೆ ಯಾವುದೇ ರೀತಿಯ ಅಪಾಯ ಎದುರಾಗದು.

ಮನೆಯಲ್ಲಿ ಕಡಿಮೆ ಸದಸ್ಯರಿದ್ದರೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದು ಮಿತವ್ಯಯಕಾರಿಯಾಗಿದ್ದು,ಇದು ಕಡಿಮೆ ವಿದ್ಯುತ್ ಬಳಕೆ ಮಾಡುವುದರಿಂದ ಇದನ್ನು ಬಳಸಿದರೆ ತಗಲುವ ವಿದ್ಯುತ್ ವೆಚ್ಚ ಕೂಡಾ ಕಡಿಮೆ ತಗಲುತ್ತದೆ.