Home Business ಮದುವೆಯಾಗಲು ಹುಡುಗಿ ಹುಡುಕಿ ಕೊಡಿ, ‘ ಬ್ಯಾಂಡ್ ‘ ನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೊರಟ...

ಮದುವೆಯಾಗಲು ಹುಡುಗಿ ಹುಡುಕಿ ಕೊಡಿ, ‘ ಬ್ಯಾಂಡ್ ‘ ನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೊರಟ 50 ಬ್ಯಾಚುಲರ್‌ಗಳು !

Hindu neighbor gifts plot of land

Hindu neighbour gifts land to Muslim journalist

ಪುರುಷ- ಮಹಿಳೆಯರ ಅನುಪಾತ ಕುಸಿತ ಸಮಸ್ಯೆಯನ್ನು ಮುಂದಿಟ್ಟು ಕೊಂಡು ನಮಗೆ ವಧು ಹುಡುಕಿ ಕೊಡಿ ಎಂದು 50ಕ್ಕೂ ಹೆಚ್ಚು ಅರ್ಹ ಬ್ಯಾಚುಲರ್ ಗಳು, ಮಧುಮಗನ ಗೆಟಪ್ ನಲ್ಲಿ ಕುದುರೆ ಏರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ‘ಬ್ಯಾ೦ಡ್ ಬಾಜಾ’ ನೊಂದಿಗೆ ಹುಡುಗಿ ಹುಡುಕಲು ಅರ್ಜಿ ಹಿಡಿದು ಹೋರಟ ಹುಡುಗರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ಸಾಗಿದ ಘಟನೆ ನಡೆದಿದೆ.

ಮದುವೆ ವಿಚಾರ ಪ್ರಸ್ತಾಪವಾದಗಲೆಲ್ಲಾ, ಹುಡುಗಿ ಕೇಳುವ ಮೊದಲ ಪ್ರಶ್ನೆ, ನಗರದಲ್ಲಿ ವಾಸಿಸುತ್ತಿದ್ದೀರಾ, ಉದ್ಯೋಗವಿದೆಯೇ ಇಲ್ಲವೇ ಎಂದು ಕೇಳುತ್ತಿರುವುದಾಗಿ 29 ವರ್ಷದ ಶೀಲವಂತ್ ಕ್ಷೀರಸಾಗರ ಹೇಳಿದ್ದಾರೆ. ಇವರು ಕೂಡಾ ವಧು ಹುಡುಕುತ್ತಿರುವ ಬ್ಯಾಚುಲರ್ ಗಳಲ್ಲಿ ಒಬ್ಬರಾಗಿದ್ದಾರೆ. ಟೈಲರಿಂಗ್ ವೃತ್ತಿ ಮಾಡುತ್ತಿರುವ 27 ವರ್ಷದ ಔದುಂಬರ್ ಮಾಲಿ ಅವರ ಸಮಸ್ಯೆಯೂ ಇದೇ ಆಗಿದೆ.

ಇಲ್ಲಿಯವರೆಗೂ 8 ಹುಡುಗಿಯನ್ನು ನೋಡಲಾಗಿದೆ. ಎಲ್ಲಿಯೂ ಮದುವೆ ಸೆಟ್ ಆಗುತ್ತಿಲ್ಲ, ಹುಡುಗಿ ಸಿಗದ್ದು ಮತ್ತು ಇರೋ ಹುಡುಗಿಯರ ಕುಟುಂಬ ಆರ್ಥಿಕ ಕಾರಣಗಳಿಂದ ಒಪ್ಪಿಕೊಳ್ಳದ್ದೇ ಪ್ರಮುಖ ಕಾರಣ ಎಂದಿದ್ದಾರೆ.

ಹುಡುಗಿ ಕುಟುಂಬದವರ ಒಂದೇ ಪ್ರಶ್ನೆ ಏನೆಂದರೆ ಸರಿಯಾದ ಉದ್ಯೋಗವಿದೆಯೇ ಅಥವಾ ಇಲ್ಲವೇ ಎಂಬುದಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಅರ್ಹ ಬ್ಯಾಚುಲರ್ ಗಳಿಗೆ ವಧು ಸಿಗುತ್ತಿಲ್ಲ, ಪಿಸಿಪಿಎನ್ ಡಿಟಿ ಕಾಯ್ದೆ ಸರಿಯಾಗಿ ಅನುಷ್ಟಾನವಾದರೆ ವಧುವಿನ ಸಮಸ್ಯೆ ಸ್ವಲ್ಪ ಸುಧಾರಿಸಬಹುದೇನೂ ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮ ಆಯೋಜಕ ಜ್ಯೋತಿ ಕ್ರಾಂತಿ ಪರಿಷತ್ ಸ್ಥಾಪಕ ರಮೇಶ್ ಭಾರಸ್ಕರ್ ಮಾತನಾಡಿ, ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಸಮಸ್ಯೆಯಿಂದಾಗಿ ಪುರುಷ- ಮಹಿಳೆಯರ ಅನುಪಾತದಲ್ಲಿ ಕುಸಿತವಾಗಿದ್ದು, ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.

ನಂತರ ರಾಜ್ಯದಲ್ಲಿ ಪುರುಷ-ಮಹಿಳಾ ಅನುಪಾತ ಸರಿಪಡಿಸಲು ಗರ್ಭಧಾರಣೆ ಪೂರ್ವ ಮತ್ತು ಪ್ರಸವ ಪೂರ್ವ ವರ್ಗೀಕರಣ ತಂತ್ರಗಳು (ಪಿಸಿಪಿಎನ್ ಡಿಟಿ) ಕಾಯ್ದೆಯನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತರುವಂತೆ ಮನವಿ ಸಲ್ಲಿಸಿದರು. ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ (2019-21) ಪ್ರಕಾರ, ಮಹಾರಾಷ್ಟ್ರದಲ್ಲಿ ಪ್ರತಿ 1,000 ಪುರುಷರಿಗೆ ಕೇವಲ 920 ಮಹಿಳೆಯರಿದ್ದಾರೆ, ಆದುದರಿಂದ ಹುಡುಗರಿಗೆ ಹುಡುಗಿ ಸಿಗ್ತಾ ಇಲ್ಲ ಅಂತೆ.