Home Business ದೆಹಲಿ ವಿದ್ಯಾರ್ಥಿನಿಗೆ ಆ್ಯಸಿಡ್ ದಾಳಿ ಪ್ರಕರಣ : Flipkart, Amazon ಗೆ ನೋಟಿಸ್!

ದೆಹಲಿ ವಿದ್ಯಾರ್ಥಿನಿಗೆ ಆ್ಯಸಿಡ್ ದಾಳಿ ಪ್ರಕರಣ : Flipkart, Amazon ಗೆ ನೋಟಿಸ್!

Hindu neighbor gifts plot of land

Hindu neighbour gifts land to Muslim journalist

ರಾಷ್ಟ್ರ ರಾಜಧಾನಿ ದೆಹಲಿ ಮತ್ತೊಂದು ಪೈಶಾಚಿಕ ಕೃತ್ಯ ಎಸಗಿದ್ದು ವರದಿಯಾಗಿದ್ದು, ನೆನ್ನೆ ಮುಂಜಾನೆ ಸುಮಾರು 9 ಗಂಟೆ ಹೊತ್ತಿಗೆ ಶಾಲಾ ಬಾಲಕಿ ಮೇಲೆ ಯುವಕರು ಆಸಿಡ್ ದಾಳಿ ನಡೆಸಿದ್ದರು. ದೆಹಲಿಯ ದ್ವಾರಕಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಬಾಲಕಿ ಶಾಲೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು,ಆಸಿಡ್ ದಾಳಿಯಿಂದ ಗಂಭೀರ ಗಾಯಗೊಂಡಿರುವ ಬಾಲಕಿಯನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಿನ್ನೆ ದೆಹಲಿಯಲ್ಲಿ 17 ವರ್ಷದ ಶಾಲಾ ಬಾಲಕಿಯ ಮೇಲೆ ಮೂವರು ಆಸಿಡ್ ದಾಳಿ ನಡೆಸಿದ್ದು, ಈ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಆರೋಪಿಗಳು ಕೃತ್ಯವೆಸಗಿದ ಬಳಿಕ, ತನಿಖಾಧಿಕಾರಿಗಳ ದಾರಿತಪ್ಪಿಸಲು ಸೂಕ್ಷ್ಮವಾಗಿ ದಾಳಿಯನ್ನು ಯೋಜನೆ ರೂಪಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನಾಧರಿಸಿ ಘಟನೆ ನಡೆದ 12 ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಈ ಮೂವರು ಆರೋಪಿಗಳನ್ನು ಸಚಿನ್ ಅರೋರಾ (20), ಹರ್ಷಿತ್ ಅಗರ್ವಾಲ್(19), ವೀರೇಂದ್ರ ಸಿಂಗ್(22) ಎಂದು ಗುರುತಿಸಲಾಗಿದೆ.

ಆಸಿಡ್ ದಾಳಿ ನಡೆಸುವ ಹುನ್ನಾರ ನಡೆಸಿದ್ದ ಆರೋಪಿಗಳು ಫ್ಲಿಪ್‌ಕಾರ್ಟ್‌ನಿಂದ(Flipkart) ಆಸಿಡ್‌ ಅನ್ನು ಆರ್ಡರ್‌ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಾಗರ್ ಪ್ರೀತ್ ಹೂಡಾ ಮಾಹಿತಿ ನೀಡಿದ್ದಾರೆ . ಈ ಹಿನ್ನೆಲೆಯಲ್ಲಿ ದೆಹಲಿ ಮಹಿಳಾ ಆಯೋಗವು ಆಸಿಡ್ ಸುಲಭವಾಗಿ ಲಭ್ಯವಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದು, ಈ ಕುರಿತು ಫ್ಲಿಪ್‌ಕಾರ್ಟ್‌, ಅಮೇಜಾನ್(Amazon) ಗೆ ನೋಟಿಸ್ ಕಳುಹಿಸಿದೆ ಎನ್ನಲಾಗುತ್ತಿದೆ.

ಆಸಿಡ್ ದಾಳಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2013 ರಲ್ಲಿ ಸುಪ್ರೀಂ ಕೋರ್ಟ್ ಕೌಂಟರ್‌ನಲ್ಲಿ ಆಸಿಡ್ ಮಾರಾಟವನ್ನು ನಿಷೇಧ ಹೇರಲಾಗಿದೆ. ನ್ಯಾಯಾಲಯವು ಆಸಿಡ್ ಮಾರಾಟ ಮಾಡುವವರಿಗೆ ನಿರ್ಬಂಧಗಳನ್ನು ವಿಧಿಸಿದ್ದು, ಪರವಾನಗಿ ಪಡೆದ ಅಂಗಡಿ ಮಾಲೀಕರು ಮಾತ್ರ ಆಸಿಡ್ ಮಾರಾಟ ಮಾಡಬಹುದಾಗಿದ್ದು ಆದರೆ ಮಾರಾಟಗಾರರು ಹೆಸರನ್ನು ನೋಂದಾಯಿಸಿಕೊಳ್ಳಬೇಕು ಜೊತೆಗೆ ಅವರಿಂದ ಆಸಿಡ್ ಖರೀದಿಸುವವರ ರಿಜಿಸ್ಟರ್ ಅನ್ನು ಅವರು ಇಟ್ಟುಕೊಳ್ಳಬೇಕು. ಆಸಿಡ್ ಖರೀದಿಸುವವರು ಕಾರಣ ಮತ್ತು ಗುರುತಿನ ಪುರಾವೆಯನ್ನೂ ನೀಡಬೇಕಾಗುತ್ತದೆ.

ಆಯೋಗದ ಪುನರಾವರ್ತಿತ ಶಿಫಾರಸುಗಳ ನಡುವೆಯೂ ಆಸಿಡ್ ಚಿಲ್ಲರೆ ಮಾರಾಟವನ್ನು ನಿಷೇಧ ಹೇರದೆ ಇರುವುದು ವಿಪರ್ಯಾಸ. ಆಸಿಡ್ ಅನ್ನು ಮಾರುಕಟ್ಟೆಗಳಲ್ಲಿ ಬಹಿರಂಗವಾಗಿ ,ಅನಿಯಂತ್ರಿತವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿವೆ.

ವಾಸ್ತವದಲ್ಲಿ ಆಸಿಡ್ ಪಡೆಯುವುದು ತರಕಾರಿಗಳನ್ನು ಖರೀದಿ ಮಾಡುವಷ್ಟೇ ಸರಳವಾಗಿದೆ. ಸರ್ಕಾರ ಆಸಿಡ್ ಚಿಲ್ಲರೆ ಮಾರಾಟವನ್ನು ನಿಷೇಧಿಸಬೇಕು ಎಂದು ದೆಹಲಿ ಮಹಿಳಾ ಸಮಿತಿಯ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ. ಆಸಿಡ್ ಬಹಿರಂಗ ಮಾರಾಟ ತಡೆಗೆ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಹೀಗೆ ಅನೇಕ ಪ್ರಕರಣಗಳೂ ವರದಿ ಯಾವುದರಲ್ಲಿ ಸಂದೇಹವಿಲ್ಲ.