ಬಿಜೆಪಿ ಕಾರ್ಯಕರ್ತನನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ : ಘಟನೆ ಸಿಸಿಟಿವಿಯಲ್ಲಿ ಸೆರೆ

ಬಳ್ಳಾರಿ: ಇಲ್ಲಿನ ರೇಡಿಯೊ ಪಾರ್ಕ್ ಬಳಿ ದುಷ್ಕರ್ಮಿಗಳು ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮಂಜುನಾಥ (35) ಎಂದು ಗುರುತಿಸಲಾಗಿದೆ. ಅಕ್ಕಿ ವ್ಯಾಪಾರಿಯಾಗಿದ್ದ ಮಂಜುನಾಥ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು

ಪ್ರವೀಣ್ ನೆಟ್ಟಾರು ಹತ್ಯೆ : ಪಿಎಫ್‌ಐ ನಡೆಸಿದ ಕೊಲೆ !

ಬೆಂಗಳೂರು: ಪಿಎಫ್ಐ ನಿಷೇಧದ ಆದೇಶ ಪತ್ರದಲ್ಲಿ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಸ್ಪಷ್ಟವಾಗಿ ಉಲ್ಲೇಖವಾಗಿದ್ದು, ಇದು ಪಿಎಫ್ಐ ನಡೆಸಿದ ಕೊಲೆ ಎಂದು ಉಲ್ಲೇಖಿಸಲಾಗಿದೆ. ಪಿಎಫ್ಐ ನಿಷೇಧಕ್ಕೆ ಅಗತ್ಯವಾದ ಕಾರಣಗಳನ್ನು ಗೆಜೆಟ್ ನಲ್ಲಿ ಉಲ್ಲೇಖಿಸಿರುವ ಕೇಂದ್ರ ಗೃಹ

ಸವಣೂರು : ವಿ.ಎ.ಕಛೇರಿ ನುಗ್ಗಿ ದಾಂಧಲೆ,ಕೊಲೆ ಯತ್ನ
ಬೇಕರಿಗೆ ನುಗ್ಗಿ ದಾಂಧಲೆ

ಸವಣೂರು : ಸವಣೂರಿನಲ್ಲಿ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ ,ಕಲ್ಲು ಎತ್ತುಹಾಕಿ ಕೊಲೆಗೆ ಯತ್ನಿಸಿದ ಘಟನೆ ಸವಣೂರು ಜಂಕ್ಷನ್ ನಲ್ಲಿ ಬುಧವಾರ ನಡೆದಿದೆ. ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪ್ರಸಾದ್ ಎಂಬಾತ

ಪಿಎಫ್‌ಐ ಬ್ಯಾನ್ ಹಿನ್ನೆಲೆ : ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರಕ್ಕೆ ಪ್ರವೀಣ್ ಸೂದ್ ಸೂಚನೆ

ಪಿಎಫ್‌ಐ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ದೇಶದಲ್ಲಿ ಐದು ವರ್ಷಗಳವರೆಗೆ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸೂಚನೆ ಕೊಟ್ಟಿದ್ದಾರೆ. ಎಲ್ಲಿಯೂ ಶಾಂತಿ ಭಂಗ

ಪಿಎಫ್‌ಐ ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ ಪೊಲೀಸ್ ವಶಕ್ಕೆ | ತಹಶೀಲ್ದಾರ್ ಮುಂದೆ ಹಾಜರು

ಪುತ್ತೂರು: ಪಿಎಫ್‌ಐ ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕರವರನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದು ಕೊಂಡು ಪುತ್ತೂರು ತಹಸೀಲ್ದಾರ್ ಅವರ ಮುಂದೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಶಾಂತಿ ಭಂಗ ಯತ್ನದ ಪ್ರಕರಣಕ್ಕೆ ಸಂಬಂಧಿಸಿ ಜಾಬೀರ್ ರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು

ಇರಾನ್‌ನಲ್ಲಿ ಹಿಜಾಬ್ ವಿರುದ್ಧದ ಕೈ ಮೀರಿದ ಪ್ರತಿಭಟನೆ : 75 ಮಂದಿ ಸಾವು

ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆಗಳು ಮುಂದುವರೆದಿವೆ. ಈ ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸರು ನಡೆಸಿದ ಗುಂಡಿನ ದಾಳಿಗಳಲ್ಲಿ ಇದುವರೆಗೆ 75 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ನಾಗರೀಕರು ಇರಾನ್‌ ಆಡಳಿತದ ವಿರುದ್ಧ ಪ್ರತಿಭಟಿಸುತ್ತಿದ್ದು, ಅಯತೊಲ್ಲಾ ಅಲಿ ಖಮೇನಿ

ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ : ತುರ್ತು ಭೂಸ್ಪರ್ಶ,135 ಪ್ರಯಾಣಿಕರಿದ್ದ ವಿಮಾನ

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಟೇಕಾಫ್ ಆದ ಕೂಡಲೇ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿಯಾಗಿದೆ‌. ಪರಿಣಾಮ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದ್ದು,ವಿಮಾನದಲ್ಲಿ 135 ಪ್ರಯಾಣಿಕರು

ಸುಳ್ಯ : ರಿಕ್ಷಾ -ಬೈಕ್ ನಡುವೆ ಅಪಘಾತ ,ಸಹ ಸವಾರ ಐಟಿಐ ವಿದ್ಯಾರ್ಥಿ ಮೃತ್ಯು

ಸುಳ್ಯ ಸಮೀಪದ ಪರಿವಾರಕಾನ ಬಳಿ 9.15 ರ ಸುಮಾರಿಗೆ ನಡೆದ ಬೈಕ್ ರಿಕ್ಷಾ ಅಪಘಾತದಲ್ಲಿ ಬೈಕ್ ಸವಾರ ಐಟಿಐ ವಿದ್ಯಾರ್ಥಿ ಪ್ರತೀಕ್ ಎಂಬವರು ಕೊನೆಯುಸಿರೆಳೆದ ದಾರುಣ ಘಟನೆ ವರದಿಯಾಗಿದೆ. ಚೆಂಬು ಗ್ರಾಮದ ಕುದುರೆಪಾಯ ನಿವಾಸಿ ತೇಜೇಶ್ವರ ಎಂಬವರ ಮಗ ಪ್ರತೀಕ್ ಇಂದು ಬೆಳಿಗ್ಗೆ ಕಲ್ಲುಗುಂಡಿಯಿಂದ

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು : 92 ಶಾಸಕರಿಂದ ರಾಜಿನಾಮೆ ಘೋಷಣೆ

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿದೆ. ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ಗೆಹ್ಲೋಟ್ ಬಣದ ಎಲ್ಲಾ ಶಾಸಕರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಗೆಹೋಟ್ ಬಣದ ಎಲ್ಲಾ ಶಾಸಕರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ಸಿಪಿ ಜೋಶಿ ಅವರಿಗೆ ಸಲ್ಲಿಸಲಿದ್ದಾರೆ. ಎಲ್ಲಾ

ಪೆರುವಾಜೆ : ನವರಾತ್ರಿ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ | ಭಾರತವು ಧರ್ಮ, ಕರ್ಮ, ಪುಣ್ಯ ಭೂಮಿ‌ : ಸಚಿವ ಎಸ್.ಅಂಗಾರ

ಪೆರುವಾಜೆ : ಭಾರತವು ಧರ್ಮ, ಕರ್ಮ, ಪುಣ್ಯ ಭೂಮಿ. ಈ ಮೂರು ಅಂಶಗಳು ಮೂರು ಯುಗದಲ್ಲಿಯು ಹಲವು ವಿಧಗಳಲ್ಲಿ ಪ್ರಕಟವಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು. ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವದ ಪ್ರಯುಕ್ತ ಸೆ.25 ರಂದು