ವೀರಮಂಗಲ ಕುಮಾರಧಾರ ನದಿಯಲ್ಲಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ

ವೀರಮಂಗಲ ಕುಮಾರಧಾರ ನದಿಯಲ್ಲಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ಶ್ರೀದೇವರ ಅವಭೃತ ಸ್ನಾನ ಸೋಮವಾರ ನಸುಕಿನ ಜಾವ 5.30 ಕ್ಕೆ ವೀರಮಂಗಲ ಕುಮಾರಧಾರ ನದಿಯಲ್ಲಿ

ಮರ್ಕಂಜ : ಗಂಡ ಹೆಂಡತಿ ಜಗಳ ,ಹೆಂಡತಿಗೆ ಗಂಡನಿಂದ ಕತ್ತಿಯೇಟು

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಹೈದಂಗೂರು ಎಂಬಲ್ಲಿ ಗಂಡ ಹೆಂಡತಿಯ ನಡುವೆ ಜಗಳವಾಗಿ ಪತಿಯು ಪತ್ನಿಗೆ ಕತ್ತಿಯಿಂದ ಕಡಿದಿರುವ ಬಗ್ಗೆ ವರದಿಯಾಗಿದೆ. ಹೈದಂಗೂರು ನಿವಾಸಿ ಸುಂದರ ಮತ್ತು ಅವರ ಪತ್ನಿ ಯಶೋದಾ ಎಂಬವರ ಮಧ್ಯೆ ನಿನ್ನೆ ರಾತ್ರಿಯಿಂದ ಜಗಳ

ಕೈ ಮೀರಿದ ಕೊರೊನಾ ಇಂದು ದೇಶದಲ್ಲಿ  2,61,500 ಮಂದಿಗೆ ಕೋವಿಡ್ ದೃಢ‌, 1,501 ಮಂದಿ ಸಾವು

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತವು 2,61,500 ಹೊಸ ಕೊರೊನ ಪ್ರಕರಣಗಳನ್ನು ಕಂಡಿದ್ದು, 1,501 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 1,38,423 ಮಂದಿಯನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ. 24 ಗಂಟೆಯೊಳಗೆ ವರದಿ ನೀಡಲು

ಕದ್ದ ರಿವಾಲ್ವರ್ ತೋರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಖದೀಮರ ತಂಡವನ್ನು ಬಂಧಿಸಿ ಪೊಲೀಸರು

ಕಳ್ಳತನ ಮಾಡಿದ ರಿವಾಲ್ವರ್ ತೋರಿಸಿ ದರೋಡೆ ಮಾಡುತ್ತಿದ್ದವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 2020 ರಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅರೆಹಳ್ಳಿಯಲ್ಲಿ ಮನೆಗೆ ಕಳ್ಳತನ ಮಾಡಲು ನುಗ್ಗಿದ್ದ ಕಳ್ಳರ ಗುಂಪೊಂದು ಬುಲೆಟ್ಗಳ ಸಮೇತ ಲೈಸೆನ್ಸ್ ಇರುವ ಪಿಸ್ತೂಲ್ ಅನ್ನು ಅಪಹರ

ತುಳು ಚಿತ್ರ ನಿರ್ದೇಶಕ ರಘು ಶೆಟ್ಟಿ ಹೃದಯಾಘಾತದಿಂದ ನಿಧನ

ಮಂಗಳೂರು : ಪ್ರತಿಭಾವಂತ ತುಳು ಚಿತ್ರ ನಿರ್ದೇಶಕ ರಘು ಶೆಟ್ಟಿ ಹೃದಯಾಘಾತದಿಂದ ಶನಿವಾರ ಸಂಜೆ ನಿಧನರಾದರು. ಅನಾರೋಗ್ಯದಿಂದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ರಘು ಶೆಟ್ಟಿ ಅವರು ತುಳುವಿನ ‘ಅರ್ಜುನ್ ವೆಡ್ಸ್ ಅಮೃತ ಚಿತ್ರವನ್ನು ನಿರ್ದೇಶಿಸಿ ಸಿನಿಮಾ ಪ್ರಿಯರ

ಉಪ್ಪಿನಂಗಡಿ | ಹಾವು ಕಡಿತಕ್ಕೊಳಗಾಗಿ ಹಾವು ಹಿಡಿಯುವ ಯುವಕ ಸ್ನೇಕ್ ಮುಸ್ತಾ ಮೃತ್ಯು

ಮನೆಗಳಿಗೆ ಬರುತ್ತಿದ್ದ ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ರಕ್ಷಿಸುತ್ತಿದ್ದ ಉಪ್ಪಿನಂಗಡಿಯ 34 ನೆಕ್ಕಿಲಾಡಿ ನಿವಾಸಿ 'ಸ್ನೇಕ್ ಮುಸ್ತಾ' ಎಂದೇ ಚಿರಪರಿಚಿತರಾಗಿದ್ದ ಎಂ.ಆರ್. ಮುಹಮ್ಮದ್ ಮುಸ್ತಾಫ ಶನಿವಾರ ನಾಗರಹಾವಿನ ಕಡಿತಕ್ಕೆ ಸಿಲುಕಿ ಮೃತಪಟ್ಟರು. 34 ನೆಕ್ಕಿಲಾಡಿ ಬೊಳಂತಿಲ

ದರೋಡೆ ಪ್ರಕರಣ: ಪುತ್ತೂರು ವಿ.ಸ. ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಅಬ್ದುಲ್ ಬಶೀರ್ ಬಂಧನ | ಸಮಾಜ ಸೇವೆಯ…

ಮಂಗಳೂರು ದ.ಕ.ಜಿಲ್ಲೆಯ ಮೂಡುಬಿದಿರೆ, ಮುಲ್ಕಿ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ದ್ವಿಚಕ್ರ ವಾಹನ, ಹಣ ಮತ್ತಿತರ ವಸ್ತುಗಳನ್ನು ದಡೋಡೆ ಮಾಡುತ್ತಿದ್ದ ಪ್ರಕರಣದ ಮತ್ತೊಬ್ಬ ಆರೋಪಿ ಪುತ್ತೂರಿನ

  ದ.ಕ. ಶನಿವಾರದ ವರದಿ 309  ಜನರಿಗೆ ಕೊರೊನಾ ದೃಢ | ಒಂದು ಸಾವು

ದ.ಕ.ಜಿಲ್ಲೆಯಲ್ಲಿಂದು 309 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 37871 ಕ್ಕೆ ಏರಿಕೆಯಾಗಿದೆ. ಇಂದು 99 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 35504 ಕ್ಕೆ ಏರಿಕೆಯಾಗಿದೆ.

ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ, ಮಹತ್ವದ ನಿರ್ಧಾರ ಸಾಧ್ಯತೆ

ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾತ್ರಿ 8 ಗಂಟೆಗೆ ವಿವಿಧ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಮುಖ

ಮತ ಪ್ರವಚನ ನೀಡಲು ತೆರಳಿದ್ದ ಸುಳ್ಯದ ವಿದ್ಯಾರ್ಥಿ ಮಸೀದಿಯಲ್ಲಿ ಮೃತ್ಯು

ಮಂಗಳೂರಿನ ಹೊರವಲಯದ ಮರಕಡ ಮಸೀದಿಗೆ ರಮಝಾನ್‌ನ ಮತ ಪ್ರವಚನ ನೀಡಲು ಬಂದಿದ್ದ ಸುಳ್ಯ ಮೂಲದ ವಿದ್ಯಾರ್ಥಿಯೊಬ್ಬ ಮಸೀದಿಯಲ್ಲೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಸುಳ್ಯ ಸಮೀಪದ ಅಜ್ಜಾವರದ ಹಸೈನಾರ್ ಹಾಜಿ-ಜೊಹರಾ ದಂಪತಿಯ ಪುತ್ರ ಅಬ್ದುಲ್ ಅಲ್ ಸಿನಾನ್ ಅಜ್ಜಾವರ (20) ಮೃತಪಟ್ಟ ಯುವಕ.