Praveen Chennavara

ಸುಳ್ಯ | ಬಾವಿಗೆ ಆಕಸ್ಮಿಕವಾಗಿ ಬಿದ್ದು ವಿನೀತ್ ರೈ ದುರ್ಮರಣ

ಹೊಸ ಬಾವಿಯೊಂದಕ್ಕೆ ಯುವಕನೊಬ್ಬ ಆಕಸ್ಮಿಕವಾಗಿ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆಯಿಂದ ವರದಿಯಾಗಿದೆ. ನೆಲ್ಲೂರು ಕೆಮ್ರಾಜೆ ಗ್ರಾಮದ ಅಲ್ಪೆ ಗಣೇಶ್ ರೈ ಎಂಬವರು ತನ್ನ ಮನೆ ಎದುರು ಹೊಸ ಬಾವಿ ತೆಗೆಯುತ್ತಿದ್ದರು. ಮಾ.30ರಂದು ಸಂಜೆ ಬಾವಿಯ ಕೆಲಸ ಕೆಲಸ ಮುಗಿಸಿ ಎಲ್ಲರೂ ತೆರಳಿದ್ದರು. ಆ ಬಳಿಕ ಗಣೇಶ್ ರೈ ಅವರ ಪುತ್ರ ವಿನೀತ್ ರೈ ಬಾವಿಯಿಂದ ಮಣ್ಣು ತೆಗೆಯಲು ಕಟ್ಟಿದ್ದ ರಾಟೆ ಹಿಡಿದುಕೊಂಡು ಬಾವಿಯನ್ನು ನೋಡುತ್ತಿದ್ದ ವೇಳೆ ಆಕಸ್ಮಿಕ ವಾಗಿ ಬಾವಿಯೊಳಕ್ಕೆ ಬಿದ್ದ …

ಸುಳ್ಯ | ಬಾವಿಗೆ ಆಕಸ್ಮಿಕವಾಗಿ ಬಿದ್ದು ವಿನೀತ್ ರೈ ದುರ್ಮರಣ Read More »

SSLC ಪರೀಕ್ಷೆ, ಶಾಲಾ ದಾಖಲಾತಿ,ಇಲಾಖಾ ಸೇವೆಯ ಪ್ರಕ್ರಿಯೆಗಳ ವೇಳಾಪಟ್ಟಿ ಎಪ್ರಿಲ್ 20ರ ಬಳಿಕ ಪ್ರಕಟ

ಬೆಂಗಳೂರು: ಕೋವಿಡ್ 19 ವೈರಸ್ ವ್ಯಾಪಿಸುತ್ತಿರುವ ಕಾರಣದಿಂದ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನ ಈ ಹಿಂದಿನ ಸುತ್ತೋಲೆಯಲ್ಲಿ ಪ್ರಕಟಿಸಿದ್ದಂತೆ 7 ರಿಂದ 10ನೇ ತರಗತಿಯವರೆಗಿನ ಪರೀಕ್ಷೆಯನ್ನು ಮಾರ್ಚ್ 31ರವರೆಗೆ ಮುಂದೂಡಿ ಆದೇಶ ಹೊರಡಿಸಲಾಗಿತ್ತು. ಆದರೆ ಇದೀಗ ಹೊಸ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಕೋವಿಡ್ 19 ವೈರಸ್ ಪ್ರಕರಣಗಳು ರಾಜ್ಯದಲ್ಲಿ ಮುಂದುವರಿಯುತ್ತಿರುವುದರಿಂದ 21 ದಿನಗಳ ಕಾಲ ರಾಷ್ಟ್ರವನ್ನೇ ಲಾಕ್ ಡೌನ್ ಮಾಡಲು ಪ್ರಧಾನ ಮಂತ್ರಿಗಳು ಸೂಚಿಸಿರುವ ಹಿನ್ನಲೆಯಲ್ಲಿ 7 ರಿಂದ 9ನೇ ತರಗತಿವರೆಗಿನ ಪರೀಕ್ಷೆಗಳನ್ನು, …

SSLC ಪರೀಕ್ಷೆ, ಶಾಲಾ ದಾಖಲಾತಿ,ಇಲಾಖಾ ಸೇವೆಯ ಪ್ರಕ್ರಿಯೆಗಳ ವೇಳಾಪಟ್ಟಿ ಎಪ್ರಿಲ್ 20ರ ಬಳಿಕ ಪ್ರಕಟ Read More »

ಕೇರಳ ಕರ್ನಾಟಕ ಗಡಿ ಪ್ರದೇಶ | ಬೆಳಗ್ಗಿನಿಂದಲ್ಲೆ ಸಾಲಿನಲ್ಲಿ ನಿಂತ

ಪುತ್ತೂರು: ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಕೇರಳ- ಕರ್ನಾಟಕ ಗಡಿ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ. ಹೀಗಾಗಿ ಗಡಿ ಪ್ರದೇಶಗಳಲ್ಲಿ ಇಂದು ಮಾ.31ರಂದು ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳ ಮುಂದೆ ಜನರು ಸಾಲಿನಲ್ಲಿ ಅಂಗಡಿ ಮುಂದೆ ಸೇರಿದ್ದರು. ಆರ್ಲಪದವಿನಲ್ಲೂ ಬೆಳಗ್ಗಿನಿಂದಲ್ಲೆ ಸಾಲಿನಲ್ಲಿ ಜನ ನಿಂತಿರುವ ದೃಶ್ಯ ಕಂಡು ಬಂತು. ಗಡಿ ಪ್ರದೇಶವಾದ ಆರ್ಲಪದವಿನಲ್ಲಿ ಬೆಳಗ್ಗಿನಿಂದಲೇ ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.ಹೇಳಿ ಕೇಳಿ ಕಾಸರಗೋಡಿಗೆ ಹತ್ತಿರ ಇರುವ …

ಕೇರಳ ಕರ್ನಾಟಕ ಗಡಿ ಪ್ರದೇಶ | ಬೆಳಗ್ಗಿನಿಂದಲ್ಲೆ ಸಾಲಿನಲ್ಲಿ ನಿಂತ Read More »

ಅಗತ್ಯ ವಸ್ತುಗಳನ್ನು ಖರೀದಿಸಲು ಸುಳ್ಯದಲ್ಲಿ ಕ್ಯೂ ನಿಂತ ಜನ

ಸುಳ್ಯ: ಕೋರೋನಾ ವೈರಸ್ನಿಂದ ಸುರಕ್ಷತೆಗೆ ದಕ್ಷಿಣ ಕನ್ನಡ ಸಂಪೂರ್ಣ ಬಂದ್ ವ್ಯಾಪಿಸಿದ್ದ ಕಾರಣ ಜನರು ಮನೆಯಿಂದ ಹೊರಬಂದಿಲ್ಲ. ನಿಯತ್ತಾಗಿ ಮನೆಯಲ್ಲಿದ್ದು ಲಾಕ್ ಡೌನ್ ಗೆ ಬೆಂಬಲ ಘೋಷಿಸಿದ್ದರು. ಹಾಗಾಗಿ ಮನೆಯಲ್ಲಿಯೆ ಇದ್ದ ಕಾರಣ ಅಗತ್ಯ ವಸ್ತುಗಳ ಖರೀದಿಗೆ ಆಗಿರಲಿಲ್ಲ. ಇವತ್ತು ಲಾಕ್ ಡೌನ್ ಮುಂಜಾನೆ 8 ಗಂಟೆಯಿಂದ 3 ಗಂಟೆಯವರೆಗೆ ಸಡಿಲಿಕೆ ಇರುವುದರಿಂದ ಸುಳ್ಯದ ಜನತೆ ಸ್ವಲ್ಪ ನಿರಾಳ. ಕೈಯಲ್ಲಿ ದೊಡ್ಡ ಚೀಲ ಹಿಡಿದುಕೊಂಡು ಹೊರಬಂದಿದ್ದಾರೆ. ಎಲ್ಲರಲ್ಲೂ ಬೇಗ ಬೇಗ ಸಾಮಾನು ಖರೀದಿಸುವ ತವಕ. ಹಾಗಾಗಿ, ಅಗತ್ಯವಸ್ತುಗಳ …

ಅಗತ್ಯ ವಸ್ತುಗಳನ್ನು ಖರೀದಿಸಲು ಸುಳ್ಯದಲ್ಲಿ ಕ್ಯೂ ನಿಂತ ಜನ Read More »

ಕೋರೋನಾ ಸೋಂಕಿತರ ಸುಶ್ರೂಷೆಗೈದ ನರ್ಸ್ ಗೆ ವೈರಸ್ ಸೋಂಕು | ಗುಣಮುಖರಾದ 93 ವರ್ಷದ ವೃದ್ಧ ದಂಪತಿ

ತಿರುವನಂತಪುರ, ಮಾ. 31: ಕೋರೋನಾ ವೈರಸ್ ರೋಗವು ನಮಗೆಲ್ಲಾ ಗೊತ್ತಿರುವಂತೆ ವಯೋವೃದ್ಧರನ್ನು ಅತಿಯಾಗಿ ಕಾಡಿ ಅವರನ್ನು ಸಾವಿಗೀಡಾಗುವಂತೆ ಮಾಡುತ್ತದೆ. ವೃದ್ಧರಲ್ಲಿ, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸಹಜವಾಗಿ ವೈರಾಣು ಅವರ ದೇಹವನ್ನು ಆಕ್ರಮಿಸಿ ಸಾವನ್ನು ತಂದೊಡ್ಡುತ್ತದೆ. ಆದರೆ ಕೇರಳದ ತಿರುವನಂತಪುರದಲ್ಲಿ 93 ವರ್ಷದ ಮತ್ತು 88 ವರ್ಷದ ಜೋಡಿ ತಂದು ಕರೋನಾ ವೈರಸ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ವರದಿಯಾಗಿದೆ. ಈ ಮೊದಲು ವೃದ್ಧ ದಂಪತಿಗಳನ್ನು ಕೇರಳದ ತಿರುವನಂತಪುರದ ಎರಡು ಪ್ರತ್ಯೇಕ ಕೋಣೆಗಳಲ್ಲಿ ಹಾಕಿ ಟ್ರೀಟ್ಮೆಂಟ್ …

ಕೋರೋನಾ ಸೋಂಕಿತರ ಸುಶ್ರೂಷೆಗೈದ ನರ್ಸ್ ಗೆ ವೈರಸ್ ಸೋಂಕು | ಗುಣಮುಖರಾದ 93 ವರ್ಷದ ವೃದ್ಧ ದಂಪತಿ Read More »

ಸಿಇಟಿ ಸಾಮಾನ್ಯ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದೂಡಿಕೆ

ಏಪ್ರಿಲ್ 12 ರ ನಂತರ ರಾಜ್ಯದ ಎಲ್ಲಾ ಶಾಲೆಗಳಿಗೆ ವಾರ್ಷಿಕ ರಜೆ ಘೋಷಿಸಲಾಗಿದೆ. ಕೋರೋನಾ ಕಾರಣದಿಂದ ಈಗಾಗಲೇ ಮಕ್ಕಳಿಗೆ, ಶಿಕ್ಷಕರಿಗೂ ರಜೆ ನೀಡಲಾಗಿದೆ ಎಂದು ಅಧಿಕೃತವಾಗಿ ಸರಕಾರ ಈ ಘೋಷಣೆ ಮಾಡಿದೆ. ಎಪ್ರಿಲ್ 22 ರಿಂದ 24 ಕ್ಕೆ ನಡೆಯಲಿರುವ CET ಸಾಮಾನ್ಯ ಪ್ರವೇಶ ಪರೀಕ್ಷೆ ಗಳನ್ನು ಸರಕಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. ಈಗಾಗಲೇ ಕೆಲವು ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಪಿಯುಸಿ ಪರೀಕ್ಷೆಗಳು ಕೂಡ ನಡೆದಿಲ್ಲವಾದ್ದರಿಂದ ಅನಿವಾರ್ಯವಾಗಿ …

ಸಿಇಟಿ ಸಾಮಾನ್ಯ ಪರೀಕ್ಷೆ ಅನಿರ್ದಿಷ್ಟಾವಧಿ ಮುಂದೂಡಿಕೆ Read More »

ಇಂದು ಸಂಜೆ 3 ಗಂಟೆ ತನಕ‌ ಅವಶ್ಯಕ ಸಾಮಗ್ರಿ ಖರೀದಿಗೆ ಅವಕಾಶ| ಮತ್ತೆ ಲಾಕ್‌ಡೌನ್ ಮುಂದುವರಿಕೆ

ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡದಂತೆ ದೇಶವ್ಯಾಪಿಯಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಈ ನಡುವೆ ಔಷಧಿ, ಹಾಲು, ಪತ್ರಿಕೆಗೆ ಬೆಳಗ್ಗಿನ ಜಾವ ಬೆಳಿಗ್ಗೆ ಗಂಟೆ 6 ರಿಂದ 8ಗಂಟೆಯ ತನಕ ಸ್ವಲ್ಪ ರಿಲಾಕ್ಸ್ ನೀಡಲಾಗಿತ್ತು. ಇದೀಗ ಮಾ.31ರಂದು ಬೆಳಿಗ್ಗೆ ಗಂಟೆ 6 ರಿಂದ 3 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದ್ದು, ಈ ಅವಧಿಯಲಿ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಇತರ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ …

ಇಂದು ಸಂಜೆ 3 ಗಂಟೆ ತನಕ‌ ಅವಶ್ಯಕ ಸಾಮಗ್ರಿ ಖರೀದಿಗೆ ಅವಕಾಶ| ಮತ್ತೆ ಲಾಕ್‌ಡೌನ್ ಮುಂದುವರಿಕೆ Read More »

ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಗೆ ಲಾಕ್ ಡೌನ್ ಅನ್ವಯಿಸಲ್ಲ | ಸರಳವಾಗಿ ಜಾತ್ರೋತ್ಸವ

ಗೊನೆ ಮುಹೂರ್ತ : ಏಪ್ರಿಲ್ 1 ರಂದು || ಧ್ವಜಾರೋಹಣ / ಜಾತ್ರೋತ್ಸವ ಪ್ರಾರಂಭ : ಏಪ್ರಿಲ್ 10 ಕ್ಕೆ ಲಾಕ್ ಡೌನ್ ಆಗಿ ದೇಶ ಸ್ಥಬ್ದವಾಗಿದ್ದರೂ ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯು ಶಾಸ್ತ್ರೋಕ್ತವಾಗಿಯೇ ನಡೆಯಲಿದೆ. ಆ ಮೂಲಕ ಜಾತ್ರೆ ನಡೆಯುತ್ತಾ ಇಲ್ಲವಾ ಎಂದು ಭಕ್ತರಲ್ಲಿದ್ದ ಅನಿಶ್ಚಿತತೆ ಕೊನೆಯಾಗಿದೆ. ಆದರೆ ಎಂದಿನ ಜನ, ಗೌಜಿ, ಅಬ್ಬರ, ಜಾತ್ರೆ, ಸಂತೆ ಇಲ್ಲದೆ ಸರಳವಾಗಿ ನಡೆಸಲು ಉದ್ದೇಶಿಸಲಾಗಿದೆ. ತಂತ್ರಿಗಳು, ದೇವಾಲಯದ ಅರ್ಚಕರು, ಮತ್ತು ಆಯ್ದ ನೌಕರರು ಮತ್ತು ಆಯ್ದ …

ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಗೆ ಲಾಕ್ ಡೌನ್ ಅನ್ವಯಿಸಲ್ಲ | ಸರಳವಾಗಿ ಜಾತ್ರೋತ್ಸವ Read More »

ಕೊರೋನಾ ವೈರಸ್ ಹಿನ್ನೆಲೆ | ಬೆಳಂದೂರು ಗ್ರಾ.ಪಂ, ಕಾರ್ಯಪಡೆಯ ಮೂಲಕ ಪರವೂರಿನಿಂದ ಬಂದವರ ಮನೆಗೆ ಭೇಟಿ

ಕಾಣಿಯೂರು: ಮಹಾಮಾರಿ ಕೊರೋನಾ ವೈರಸ್‌ನ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಈ ಬಗ್ಗೆ ಜನರಲ್ಲಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಉಮೇಶ್ವರಿ ಅಗಳಿ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿಕೊಂಡು ಪಂಚಾಯತ್ ವ್ಯಾಪ್ತಿಯಲ್ಲಿ ದೂರದ ಊರುಗಳಿಂದ ಬಂದವರ ಮೇಲೆ ನಿಗಾ ಇಡುವ ಕಾರ್ಯದ ಉದ್ದೇಶದಿಂದ ಅವರ ಮನೆಗಳಿಗೆ ಭೇಟಿ ಮತ್ತು ಮಾಹಿತಿ ಸಂಗ್ರಹ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾ.30ರಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. …

ಕೊರೋನಾ ವೈರಸ್ ಹಿನ್ನೆಲೆ | ಬೆಳಂದೂರು ಗ್ರಾ.ಪಂ, ಕಾರ್ಯಪಡೆಯ ಮೂಲಕ ಪರವೂರಿನಿಂದ ಬಂದವರ ಮನೆಗೆ ಭೇಟಿ Read More »

ಬಿರು ಬಿಸಿಲಿಗೆ ಕೊರೊನಾ ಜಾಗೃತಿ ಮೂಡಿಸೋ ಆಶಾ ಕಾರ್ಯಕರ್ತರಿಗೆ ವಾಹನ ಸೌಕರ್ಯ ನೀಡುವಂತಾಗಲಿ

ಶಾಸಕರೇ, ಅಧಿಕಾರಿಗಳೇ, ಒಂದಷ್ಟು ಕರುಣೆ ತೋರಿಸಿ. ಆಶಾ ಕಾರ್ಯಕರ್ತೆಯರಿಗೂ ನಡೆದರೆ ಸುಸ್ತಾಗುತ್ತದೆ. ಬಿಸಿಲಿಗೆ ಅವರೂ ದಣಿಯುತ್ತಾರೆ. ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಮತ್ತು ಮನೆಯವರ ಅವಹೇಳನಕ್ಕೆ ಅವರಿಗೂ ನೋವಾಗುತ್ತದೆ….! ದಕ್ಷಿಣ ಕನ್ನಡ : ದೇಶಾದ್ಯಂತ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಡಿ ಕರ್ತವ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಸ್ಥಳಿಯಾಡಳಿತ ವಾಹನ ಸೌಕರ್ಯ ಮಾಡಿಕೊಡಬೇಕಿದೆ. ಆಶಾ ಕಾರ್ಯಕರ್ತೆಯರು ಕೊರೊನಾ ವೈರಸ್ ನ ಕುರಿತಾಗಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ‌ ಮಾಡುತ್ತಿದ್ದಾರೆ. …

ಬಿರು ಬಿಸಿಲಿಗೆ ಕೊರೊನಾ ಜಾಗೃತಿ ಮೂಡಿಸೋ ಆಶಾ ಕಾರ್ಯಕರ್ತರಿಗೆ ವಾಹನ ಸೌಕರ್ಯ ನೀಡುವಂತಾಗಲಿ Read More »

error: Content is protected !!
Scroll to Top