ವಯಸ್ಸಿನ ಹಂಗು ತೊರೆದು ಬಾಳ ಇಳಿಸಂಜೆಯಲ್ಲಿ ಜೊತೆಯಾದ ಜೋಡಿ | ಮಗನೇ ಮುಂದೆ ನಿಂತು ಮಾಡಿಸಿದ ತನ್ನ 79 ವರ್ಷ ವಯಸ್ಸಿನ ತಂದೆಯ ಮದುವೆ !! ಇಲ್ಲಿದೆ ನೋಡಿ ಈ ಇಂಟ್ರೆಸ್ಟಿಂಗ್ ಕಹಾನಿ

Share the Article

ಒಂದು ಹೆಣ್ಣಿಗೆ ಆಧಾರವಾಗಿ ಇರಲು ಒಂದು ಗಂಡು ಅಗತ್ಯವಾದ್ದರಿಂದ ಮದುವೆ ಎಂಬ ಪ್ರೀತಿಯ ಗಂಟು ಹಾಕಿಕೊಳ್ಳುತ್ತಾರೆ. ಪತಿಯ ಪ್ರತಿಯೊಂದು ಹೆಜ್ಜೆಲೂ ಪತ್ನಿ ಎಂಬತೆ ಇವರಿಬ್ಬರ ಬಾಂಧವ್ಯ ಗಟ್ಟಿಯಾಗಿರುತ್ತದೆ.ಮದುವೆ ಎನ್ನುವುದು ಕೇವಲ ಒಂದು ಸಂಪ್ರದಾಯ ಆಗಬೇಕೆಂದಿಲ್ಲ. ಬಾಳಿನ ಇಳಿ ಸಂಜೆಯಲ್ಲಿ ಬದುಕಿಗೆ ಆಧಾರವಾಗಿ ಇರಲು ಸಾಧ್ಯವಾಗುವುದು ಗಂಡ-ಹೆಂಡತಿ ಎಂಬ ಜೋಡಿ ಇದ್ದಾಗಲೇ.

ಹೌದು.ಇಷ್ಟೊಂದು ವಿವರಣೆ ಯಾಕೆ ನೀಡುತ್ತಿದ್ದೇವೆ ಎಂಬ ಪ್ರಶ್ನೆ ಮೂಡಿದೆಯೇ..?. ಯಾಕೆಂದರೆ ಇಂತಹ ಆಧಾರವಾಗಿರಬೇಕಾದ ಪತಿ ಅಥವಾ ಪತ್ನಿ ತೀರಿ ಹೋದಾಗ ಅಥವಾ ವಿಚ್ಛೇದನ ಪಡೆದಾಗ ಅವರ ಪಾಡು ಏನಾಗಬೇಕು. ಹೀಗೆ ಕೆಲವರು ಮತ್ತೊಮ್ಮೆ ಮದುವೆಯಾಗಲು ಒಪ್ಪುತ್ತಾರೆ , ಆದರೆ ಅದರಲ್ಲೂ ಸ್ವಲ್ಪ ವಯಸ್ಸಾಗಿದ್ದರೆ ಎಷ್ಟೋ ಮಂದಿ ಅಂಥವರನ್ನು ವಿಚಿತ್ರ ದೃಷ್ಟಿಯಿಂದ ನೋಡುವುದು ಇಂದಿಗೂ ಉಂಟು.

ಆದರೆ ಇದಕ್ಕೆಲ್ಲಾ ನಿದರ್ಶನ ಎಂಬಂತೆ ಇದೆ ಈ ಘಟನೆ.ಎಷ್ಟೋ ಮಂದಿ ಮರು ಮದುವೆಗೆ ವಿರೋಧಿಸಿದರೆ ಇಲ್ಲೊಂದು ಕಡೆ ಖುದ್ದು ಮಗನೇ ಮುಂದೆ ನಿಂತು 79 ವರ್ಷ ವಯಸ್ಸಿನ ತಮ್ಮ ತಂದೆಗೆ ಮದುವೆ ಮಾಡಿಸಿದ್ದಾರೆ.ಅಷ್ಟಕ್ಕೂ ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ.

79 ವರ್ಷದ ನಿವೃತ್ತ ಶಿಕ್ಷಕ ದಾದಾಸಾಹೇಬ್​​ ಸಾಲುಂಖೆ ಹಾಗೂ 66 ವರ್ಷದ ವಿಧವೆ ಶಾಲಿನಿ ಎಂಬುವವರು ಮರು ಮದುವೆಯಾದವರಾಗಿದ್ದಾರೆ.

ವೃದ್ಧದಾದಾಸಾಹೇಬ್​ ಸಾಲುಂಖೆ ಪತ್ನಿ ಕಳೆದುಕೊಂಡು ಹಲವು ವರ್ಷಗಳೇ ಕಳೆದಿದ್ದವು. ಅವರ ಮಗ ಬೇರೆಡೆ ವಾಸವಾಗಿದ್ದರು. ಒಂಟಿಯಾಗಿ ವಾಸವಿಗಿದ್ದರಿಂದ ಇಳಿ ವಯಸ್ಸಲ್ಲಿ ಜೋಡಿಯ ಅವಶ್ಯಕತೆ ಎನ್ನಿಸಿತು. ಮಗನಿಗೆ ಈ ವಿಷಯ ತಿಳಿಸಿದಾಗ ಅದಕ್ಕೆ ಒಪ್ಪಿದ ಅವರು, ವಧುವಿಗಾಗಿ ಹಲವೆಡೆ ವಿಚಾರಿಸಿದ್ದಾರೆ. ಆದರೆ ಎಲ್ಲಿಯೂ ಸಿಗಲಿಲ್ಲ.

ನಂತರ ಮೀರಜ್ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಅಸ್ತಾ ಬೇಗಾರ್ ಕೇಂದ್ರ( ನಿರ್ಗತಿಕ ಮಹಿಳೆಯರ ಕೇಂದ್ರ)ಕ್ಕೆ ಹೋದಾಗ ಅಲ್ಲಿ ಅವರಿಗೆ ಶಾಲಿನಿ ಎಂಬುವರರ ಬಗ್ಗೆ ತಿಳಿಯುತ್ತದೆ.

ಅವರು ಕೂಡ ವಿಧವೆಯಾಗಿದ್ದು, ಮದುವೆಗೆ ಒಪ್ಪಿಕೊಳ್ಳುತ್ತಾರೆ. ಹೀಗೆ ಇವರಿಬ್ಬರ ಮದುವೆಯನ್ನು ಮಗ ಮಾಡಿಸಿ ಇವರಿಬ್ಬರ ಮೊಗದಲ್ಲಿ ನಗು ತರಿಸಿದ್ದಾರೆ.

Leave A Reply