Home Death Suicide: ಸೀರಿಯಲ್ ನಲ್ಲಿ ಆತ್ಮಹತ್ಯೆ ದೃಶ್ಯ ಮಾಡುತ್ತಾ ರಿಯಲ್ ಆಗಿ ಸುಸೈಡ್ ಮಾಡಿಕೊಂಡ ಖ್ಯಾತ ನಟಿ!!

Suicide: ಸೀರಿಯಲ್ ನಲ್ಲಿ ಆತ್ಮಹತ್ಯೆ ದೃಶ್ಯ ಮಾಡುತ್ತಾ ರಿಯಲ್ ಆಗಿ ಸುಸೈಡ್ ಮಾಡಿಕೊಂಡ ಖ್ಯಾತ ನಟಿ!!

Hindu neighbor gifts plot of land

Hindu neighbour gifts land to Muslim journalist



Suicide : ಜೀವ ಹೂವಾಗಿದೆ, ಸಂಘರ್ಷ, ನೀನಾದೆ ನಾ ಧಾರಾವಾಹಿ ಖ್ಯಾತಿಯ  ಕನ್ನಡದ ಕಿರುತೆರೆ ನಟಿ ನಂದಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Crime) ಮಾಡಿಕೊಂಡಿದ್ದಾರೆ. ಬೆಂಗಳೂರಿನ (Bengaluru) ಆರ್‌ ಆರ್‌ ನಗರದಲ್ಲಿ ಈ ಘಟನೆ ನಡೆದಿದೆ.

ಮೂಲತಃ ಕೊಟ್ಟೂರಿನವರಾದ ನಂದಿನಿ ಸಿ ಎಂ ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಕನ್ನಡದ ಜೀವ ಹೂವಾಗಿದೆ, ಸಂಘರ್ಷ, ಮಧುಮಗಳು, ನೀನಾದೆ ನಾ ಧಾರಾವಾಹಿಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಕನ್ನಡವಲ್ಲದೇ ತಮಿಳು, ತೆಲುಗಿನಲ್ಲಿಯೂ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಂತ ನಟಿ ನಂದಿನಿ ಆಗಿದ್ದಾರೆ. ಗೌರಿ ಧಾರವಾಹಿಯಲ್ಲಿ ವಿಷ ಕುಡಿಯುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಂತ ನಂದಿನಿ, ಇದೀಗ ರಿಯಲ್ ಲೈಫ್ ನಲ್ಲಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಆದರೆ ನಂದಿನಿ ಅವರ ಆತ್ಮಹತ್ಯೆಗೆ ಕಾರಣವೇನು ಎಂಬ ಕುರಿತು ಇನ್ನೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಅವರ ಸಾವು ಈಗ ಅಭಿಮಾನಿಗಳಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಅಂದಹಾಗೆ, ಗೌರಿ ಧಾರಾವಾಹಿಯ ಚಿತ್ರೀಕರಣ ಆರಂಭದಿಂದಲೂ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಚೆನ್ನೈಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.