Indian Railways: ‘ರೈಲು ಟಿಕೆಟ್ ಬುಕಿಂಗ್’ ಮಾಡಲು ಅ. 1ರಿಂದ ಹೊಸ ನಿಯಮ

Train Ticket: ಮುಂಗಡವಾಗಿ ಟ್ರೈನುಗಳ ಟಿಕೆಟ್ (Train Ticket) ಸಿಗುವುದು ಖಾತರಿ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯ ಐಆರ್ಸಿಟಿಸಿ (Indian Railways) ಈಗ ಆಧಾರ್ ದೃಢೀಕರಣ ನಿಯಮ ಜಾರಿಗೆ ತರಲು ಯೋಜನೆ ರೂಪಿಸಿದೆ.

ಅಕ್ಟೋಬರ್ 1ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮದ ಪ್ರಕಾರ ಬುಕಿಂಗ್ ವಿಂಡೋ ಆರಂಭವಾದ ಮೊದಲ 15 ನಿಮಿಷಗಳಲ್ಲಿ ಯಾರು ಟಿಕೆಟ್ ಬುಕಿಂಗ್ ಮಾಡಲು ಮುಂದಾಗುತ್ತಾರೋ ಅವರು ಆಧಾರ್ ದೃಢೀಕರಣ ಮಾಡಬೇಕು ಎಂಬುದು ಕಡ್ಡಾಯ.
ಈ ಮುಂಚೆ, ತತ್ಕಾಲ್ ಸ್ಕೀಮ್ ಅಡಿ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ದೃಢೀಕರಣ ಕಡ್ಡಾಯವಾಗಿತ್ತು. ಇನ್ಮುಂದೆ ಜನರಲ್ ರಿಸರ್ವೇಶನ್ಗಳಿಗೂ ಮೊದಲ 15 ನಿಮಿಷ ಆಧಾರ್ ಅಥೆಂಟಿಕೇಶನ್ ನಿಯಮ ತರಲಾಗಿದೆ. ಬುಕಿಂಗ್ ವಿಂಡೋ ಶುರುವಾಗಿ 15 ನಿಮಿಷಗಳ ಬಳಿಕ ಆಧಾರ್ ಅಥೆಂಟಿಕೇಶನ್ ಅವಶ್ಯಕತೆ ಇಲ್ಲದೆಯೇ ಯಾರು ಬೇಕಾದರೂ ಬುಕಿಂಗ್ ಮಾಡಲು ಅವಕಾಶ ಇರುತ್ತದೆ.
Comments are closed.