Mangalore: ಪೂಂಜಾ ಇಂಟರ್‌ನ್ಯಾಷನಲ್‌ ಹೋಟೆಲ್‌ ಮಾಲಕ ಪ್ರಭಾಕರ್‌ ಪೂಂಜಾ ನಿಧನ

Share the Article

Mangalore: ಮಂಗಳೂರಿನ ಹೆಸರಾಂತ ಹೋಟೆಲ್‌ ಪೂಂಜಾ ಇಂಟರ್‌ನ್ಯಾಷನಲ್‌ ಮಾಲಕ, ಬಂಟ್ವಾಳ ಮೂಲದ ಪ್ರಭಾಕರ ಪೂಂಜಾ (72) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ನಂತರ 1986 ರಲ್ಲಿ ಮಂಗಳೂರಿಗೆ ಬಂದು ಪೂಂಜಾ ಇಂಟರ್‌ನ್ಯಾಷನಲ್‌ ಹೋಟೆಲ್‌ ಮಾಡಿದರು. ಆಗ ಇದ್ದ ಮೋತಿ ಮಹಲ್‌ ಬಿಟ್ಟರೆ ಅದ್ಧೂರಿ ಮತ್ತು ಬೃಹತ್‌ ಹೋಟೆಲ್‌ ಎಂದು ಪೂಂಜಾ ಹೋಟೆಲ್‌ ಹೆಸರನ್ನು ಪಡೆದಿತ್ತು.

ಸಣ್ಣ ವಯಸ್ಸಿನಲ್ಲಿಯೇ ಮುಂಬೈಗೆ ತೆರಳಿದ್ದರಿಂದ ಅವರಿಗೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಹಿಂದಿ, ಮರಾಠಿ, ತುಳು ಮಾತ್ರ ಮಾತನಾಡುತ್ತಿದ್ದರು. ಇವರ ಮಕ್ಕಳು ಹೋಟೆಲ್‌ ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾರೆ.

Comments are closed.