ಭಾರತದಲ್ಲಿ ಶೀಘ್ರದಲ್ಲೇ ಬರಲಿದೆ 299 ರೂ. ಗೆ ಕೋವಿಡ್-19 RT-PCR ಪರೀಕ್ಷೆ

ಫ್ರಾನ್ಸ್ ಮೂಲದ ಕಂಪನಿ ಪಾತ್ ಸ್ಟೋರ್ ಭಾರತದಲ್ಲಿ ಕೇವಲ 299 ರೂ. ಬೆಲೆಗೆ ಕೋವಿಡ್-19 RT-PCR ಪರೀಕ್ಷೆಯನ್ನು ಮಾಡುವುದಾಗಿ ಘೋಷಿಸಿದ್ದು, ಅಗ್ಗ ದರದಲ್ಲಿ ಕೊರೋನ ಟೆಸ್ಟ್ ದೇಶದಲ್ಲಿ ಅತಿಶೀಘ್ರದಲ್ಲೇ ದೊರೆಯಲಿದೆ.

ದೇಶಾದ್ಯಂತ ಕೊವಿಡ್-19 ಮೂರನೇ ಅಲೆಯ ಸಾಧ್ಯತೆಗಳ ಹಿನ್ನೆಲೆ, ಅಗ್ಗದ ಬೆಲೆಯ ಈ ಟೆಸ್ಟಿಂಗ್ ಜನರಿಗೆ ತುಂಬಾ ಸಹಾಯಕವಾಗಲಿದೆ. ಇದರಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್ ಪ್ರಕ್ರಿಯೆಯನ್ನು ಕೂಡ ನಡೆಸಬಹುದಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಕಂಪನಿ, ಈ ಅಗ್ಗದ ಬೆಲೆಯ ಟೆಸ್ಟ್ ಪ್ರವಾಸೋದ್ಯಮ, ಔದ್ಯೋಗಿಕ ಹಾಗೂ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರವಾಗಲಿದೆ ಎಂದು ಹೇಳಿದೆ.

ಈ ಕುರಿತು ಹೇಳಿಕೆ ನೀಡಿರುವ ಪಾತ್ ಸ್ಟೋರ್ ಕಂಪನಿಯ ಗ್ಲೋಬಲ್ ಕಾರ್ಯನಿರ್ವಾಹಕ ಅಧಿಕಾರಿ ಅನುಭವ ಅನೇಶ್, ಆರ್ಥಿಕವಾಗಿ ಹಿಂದುಳಿದ ಜನರಿಗೆ RT-PCR ಪರೀಕ್ಷೆಯ ವೆಚ್ಚವು ಕೋವಿಡ್-19 ಡಯಾಗ್ನೋಸ್ಟಿಕ್ಸ್ ಸೌಲಭ್ಯಗಳನ್ನು ಪಡೆಯಲು ಒಂದು ದೊಡ್ಡ ಅಡೆತಡೆಯಾಗಿದೆ ಎಂದಿದ್ದಾರೆ. ಹಾಗಾಗಿ ಭಾರತದಲ್ಲಿ ಶೇಕಡ 80 ಕ್ಕಿಂತ ಹೆಚ್ಚು ಜನರಿಗೆ ತಲುಪುವ ರೀತಿಯಲ್ಲಿ ಪ್ರಾಜೆಕ್ಟ್ ಅನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.

ಪಾತ್ ಸ್ಟೋರ್ ಈ ಪರೀಕ್ಷೆಗಳನ್ನು ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಪ್ರಮುಖ ಕೋವಿಡ್ -19 ಪೀಡಿತ ರಾಜ್ಯಗಳಿಗೆ ವಿಸ್ತರಿಸಲಿದೆ ಮತ್ತು ಭಾರತದಾದ್ಯಂತ RT-PCR ಮಾದರಿ ಸಂಗ್ರಹಕ್ಕಾಗಿ 2 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಪ್ರತಿನಿಧಿಗಳನ್ನು ತೊಡಗಿಸಿಕೊಳ್ಳಲಿದೆ ಎಂದು ಅನೀಶ್ ಮಾಹಿತಿ ನೀಡಿದ್ದಾರೆ. ಗುರುಗ್ರಾಮ್ ನಲ್ಲಿ ಕಂಪನಿಯು ದೊಡ್ಡ RT-PCR ಮತ್ತು ಜೈವಿಕ ಸುರಕ್ಷತಾ ಪ್ರಯೋಗಾಲಯವನ್ನು ಸ್ಥಾಪಿಸಿದೆ, ಇದು ದಿನಕ್ಕೆ ಒಂದು ಲಕ್ಷ ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ಮೇ ತಿಂಗಳಿನಲ್ಲಿ ICMR ಈ ಹೋಮ್ ಟೆಸ್ಟಿಂಗ್ ಕಿಟ್ ಗೆ ಅನುಮೋದನೆ ನೀಡಿತ್ತು. ಈ ಕಿಟ್ ಮೂಲಕ ಮನೆಯಿಂದಲೇ ಮೂಗಿನಿಂದ ಸ್ಯಾಂಪಲ್ ಪಡೆಯಬಹುದು. ಈ ಹೊಸ ಟೆಸ್ಟಿಂಗ್ ಕಿಟ್ ಕುರಿತು ICMR ನೂತನ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಹೋಮ್ ಟೆಸ್ಟಿಂಗ್ ಕೇವಲ ಲಕ್ಷಣವುಳ್ಳ ರೋಗಿಗಳಿಗೆ ಮಾತ್ರವೇ ಸೀಮಿತವಾಗಿದೆ ಎಂದು ICMR ತನ್ನ ಮಾರ್ಗಸೂಚಿಗಳಲ್ಲಿ ತಿಳಿಸಿದೆ. ಲ್ಯಾಬ್ ನಲ್ಲಿ ಕನ್ಫರ್ಮ್ ಆಗಿರುವ ರೋಗಿಗಳ ನೇರ ಸಂಪರ್ಕಕ್ಕೆ ಬಂದವರು ಕೂಡ ಇದನ್ನು ಬಳಕೆ ಮಾಡಬಹುದು. ಹೋಂ ಟೆಸ್ಟಿಂಗ್ ಗಾಗಿ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ನಿಂದ ಮೊಬೈಲ್ ಆಪ್ ಡೌನ್ ಲೋಡ್ ಮಾಡಬೇಕಾಗಿದೆ. ಮೊಬೈಲ್ ಆಪ್ ಮೂಲಕವೇ ಧನಾತ್ಮಕ ಹಾಗೂ ಋಣಾತ್ಮಕ ವರದಿ ಸಿಗಲಿದೆ.

Leave A Reply

Your email address will not be published.