ತೆಂಗಿನ ಕಾಯಿ ಕೀಳುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮೃತ್ಯು

ತೆಂಗಿನಕಾಯಿಗಳನ್ನು ತೆಗೆಯಲು ಮರ ಹತ್ತಿದ ವ್ಯಕ್ತಿಗೆ ಅಕಸ್ಮಿಕವಾಗಿ ಮರದ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ತಾಗಿ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಬಟ್ಕಳ ನಗರಠಾಣೆಯ ವ್ಯಾಪ್ತಿಯ ಬದ್ರಿಯ ಕಾಲನಿ ತಗ್ಗರಗೋಡ ಎಂಬಲ್ಲಿ ಶುಕ್ರವಾರ ನಡೆದಿದೆ.

 

ಹಾರುಮಕ್ಕಿ ಜಾಲಿ ನಿವಾಸಿ ರಾಮಾ ಸೋಮಯ್ಯಗೊಂಡ(30) ಮೃತರು ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ಸಹೋದರ ಮಾದೇವ ಸೋಮಯ್ಯ ಗೊಂಡ ಎನ್ನುವವರು ಈ ಕುರಿತಂತೆ ಬಟ್ಕಳ ನಗರ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

ನನ್ನ ತಮ್ಮ ಕೃಷಿಕೆಲಸ ಮಾಡಿಕೊಂಡಿದ್ದು ಶುಕ್ರವಾರ ಮಧ್ಯಾಹ್ನ ತೆಂಗಿನ ಮರ ಹತ್ತಿ ತೆಂಗಿನಕಾಯಿ ತೆಗೆಯುವ ಸಂದರ್ಭದಲ್ಲಿ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿ ತಗಲಿ ಅಕಸ್ಮಿಕವಾಗಿ ಸಾವನ್ನಪ್ಪಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.