ಬೆಳ್ತಂಗಡಿ | ನೆರಿಯದ ಸಿಯೊನ್ ಆಶ್ರಮದಲ್ಲಿ ಮತ್ತೆ ಕಳವಳ | 20 ಕ್ಕೂ ಅಧಿಕ ಮಂದಿ ಧರ್ಮಸ್ಥಳದ ರಜತಾದ್ರಿ ಗೆ ಶಿಫ್ಟ್
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮದಲ್ಲಿ ಮತ್ತೆ ಕಳವಳ. ಮಾರಕ ಕೊರಾನಾಗೆ ಇದೀಗ ಮತ್ತೆ 22 ಕ್ಕಿಂತಲೂ ಅಧಿಕ ಜನರು ಕೋರೋನಾ ಭಾದೆ ಅನುಭವಿಸಿದ್ದಾರೆ.
ಈಗ ಕೋರೋನಾ ಸೋಂಕಿತರ ಪೈಕಿ ಇಬ್ಬರನ್ನು ಆಂಬುಲೆನ್ಸ್ ಮೂಲಕ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ.
ಉಳಿದ 20 ರನ್ನೂ ಅಧಿಕ ಜನರನ್ನು ಧರ್ಮಸ್ಥಳದ ರಜತಾದ್ರಿ ವಸತಿಗೃಹಕ್ಕೆ ಕಳುಹಿಸಿಕೊಡಲಾಗುತ್ತಿದ್ದು, ಅಲ್ಲಿ ಅವರನ್ನು ಕ್ವರಂಟೈನ್ ಮಾಡಲಾಗುವುದು.
ಸಿಯೋನ್ ಆಶ್ರಮದಲ್ಲಿ ಒಟ್ಟು ಸುಮಾರು 270 ಆಶ್ರಮವಾಸಿಗಳಿದ್ದು, ಅವರಲ್ಲಿ ಒಟ್ಟು 194 ಜನ ಪಾಸಿಟಿವ್ ಆಗಿದ್ದರು.
ನಂತರ, ಮೊನ್ನೆ 38 ಜನರು ಪಾಸಿಟಿವ್ ಆಗಿದ್ದರು. ಇದೀಗ 22 ಕ್ಕೂ ಜನರು ಪಾಸಿಟೀವ್ ಆಗಿರುವುದು ಆತಂಕಕಾರಿ ಸಂಗತಿಯಾಗಿದೆ.