ರಾಜ್ಯದಲ್ಲೂ ದ್ವಿತೀಯ ಪಿಯು ಪರೀಕ್ಷೆ ರದ್ದು ಆದರೆ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತದೆ | ಸುರೇಶ್ ಕುಮಾರ್ ಹೇಳಿಕೆ
ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು. ಪರೀಕ್ಷೆ ಇಲ್ಲದೆ ಮೌಲ್ಯಮಾಪನ ನಡೆಸಲಾಗುವುದು. ಸಿಬಿಎಸ್ಸಿ ಮತ್ತು ಐಸಿಎಸ್ಸಿ ಮಾದರಿಯಲ್ಲೇ ರಾಜ್ಯದಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು.
ಹಿಂದಿನ ಎಲ್ಲಾ ಶಿಕ್ಷಣ ಸಚಿವರು ಗಳೊಂದಿಗೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸಲಾಗಿತ್ತು.
ಹಲವು ಶಿಕ್ಷಣತಜ್ಞರು ಮತ್ತು ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸ್ಪಾರ್ಟ್ಸ್ ಜೊತೆ ಮಾತನಾಡಿ ಇದೀಗ ಒಂದು ನಿರ್ಧಾರಕ್ಕೆ ಬರಲಾಗಿದೆ.
ಪೋಷಕರು ಮತ್ತು ವಿದ್ಯಾರ್ಥಿಗಳು ಅಭಿಪ್ರಾಯವನ್ನು ಕೂಡ ಸಂಗ್ರಹಿಸಲಾಗಿದೆ.
ಪ್ರಥಮ ಪಿಯುಸಿ ಪರೀಕ್ಷೆಯ ಗ್ರೇಡಿಂಗ್ ಮೇಲೆ ದ್ವಿತೀಯ ಪಿಯುಸಿ ಗ್ರೇಡಿಂಗ್ ನಿರ್ಧಾರ. ಸರಕಾರದ ಈ ಕ್ರಮದ ಮೇಲೆ ಸಮ್ಮತಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು.
ಸದ್ಯಕ್ಕೆ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪಾಸ್.
ಆದರೆ ಎಸೆಸೆಲ್ಸಿ ಪರೀಕ್ಷೆ ಇರುತ್ತದೆ. ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ಸೇರಿ ಒಂದು ಪರೀಕ್ಷೆ , ಹಾಗೆಯೇ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಸೇರಿ ಎರಡನೇ ಪರೀಕ್ಷೆ ಎಂಬಂತೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಸರಳ ಮತ್ತು ನೇರ ಮಾದರಿ ಪರೀಕ್ಷೆಗಳು ಇರುತ್ತದೆ.ಮಲ್ಟಿಪಲ್ ಚಾಯ್ಸ್ ಮಾದರಿ ಪ್ರಶ್ನೋತ್ತರಗಳು ಇರಲಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರೇ, ಆದರೆ ಗ್ರೇಡ್ ಗೋಸ್ಕರ ಪರೀಕ್ಷೆ ನಡೆಸುವುದಾಗಿ ಹೇಳಿದರು. ಯಾರನ್ನು ಅನುತ್ತೀರ್ಣರನ್ನಾಗಿ ಮಾಡುವುದಿಲ್ಲ ಎಂದು ಇದೇ ವೇಳೆ ಹೇಳಿದರು.
ರಾಜ್ಯದಲ್ಲಿ ಸುಮಾರು 6000 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗುವುದು. ಇಪ್ಪತ್ತು ದಿನ ಮುಂಚಿತವಾಗಿಯೇ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಿದರು.
ಒಂದು ದಿನಕ್ಕೆ ಮೂರು ಪರೀಕ್ಷೆಗಳು ನಡೆಸಲಾಗುತ್ತದೆ. ಮೂರು ಪ್ರಶ್ನೆ ಪತ್ರಿಕೆಗಳಿಗೆ 120 ಅಂಕಗಳನ್ನು ನಿಗದಿ ಮಾಡಲಾಗಿದೆ. ಆಯ್ಕೆ ಪ್ರಶ್ನೆಗಳು ಸರಳ ಮತ್ತು ನೇರ ಪ್ರಶ್ನೆಗಳಾಗಿರುತ್ತವೆ. ಎಲ್ಲಾ ವಿದ್ಯಾರ್ಥಿಗಳಿಗೂ N95 ಮಾಸ್ಕ್ ನೀಡಲಾಗುತ್ತದೆ ಹಾಗೂ ಒಂದು ಕೊಠಡಿಯಲ್ಲಿ 10-12 ವಿದ್ಯಾರ್ಥಿಗಳಿಗಷ್ಟೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುತ್ತದೆ.
ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಪರೀಕ್ಷೆ ಇದ್ದರೂ ವಿಭಿನ್ನ ರೀತಿಯಲ್ಲಿ ಇರುತ್ತದೆ. ಅದೇನೆಂದರೆ ಎರಡೇ ಪರೀಕ್ಷೆಗಳು ನಡೆಯಲಿವೆ.
ಒಂದನೇ ಪತ್ರಿಕೆಯಲ್ಲಿ ವಿಜ್ಞಾನ, ಗಣಿತ, ಸಮಾಜವಿಜ್ಞಾನ (science, maths and socialscience) ausd ವಿಷಯಗಳು ಸೇರಿ ಇರುತ್ತದೆ. ಇದರಲ್ಲಿ ಮಲ್ಟಿ ಚಾಯ್ಸ್ ಪ್ರಶ್ನೆಗಳು ಇರುತ್ತವೆ. ಪ್ರತಿ ಪ್ರಶ್ನೆಗೂ ನಾದು ಉತ್ತರ, ಗ್ರೂಪ್ ಇರುತ್ತವೆ. ಇವು ಸರಳ ಮತ್ತು ನೇರವಾಗಿರುತ್ತದೆ. ಅವುಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.
ಇನ್ನೊಂದು ಲಾಂಗ್ವಿಜ್ ಪರೀಕ್ಷೆ. (ಕನ್ನಡ/ ಸಂಸ್ಕೃತ/ಹಿಂದಿ ಮತ್ತು ಇಂಗ್ಲಿಷ್) ಇದರಲ್ಲಿಯೂ ಇದೇ ರೀತಿ ಮಲ್ಟಿ ಚಾಯ್ಸ್ ಪ್ರಶ್ನೆಗಳು ಇರಲಿವೆ. ಮಕ್ಕಳಿಗೆ ಗ್ರಿಡೇಷನ್ ಅಂದರೆ ಎ ಪ್ಲಸ್, ಎ, ಈ ರೀತಿಯಾಗಿ ನೀಡಲಾಗುತ್ತದೆ. ಯಾರಿಗಾದರೂ ಒಂದು ವೇಳೆ ಕೋವಿಡ್ ಅಥವಾ ಇನ್ನಾವುದೇ ಕಾರಣಗಳಿಂದ ಪರೀಕ್ಷೆ ಬರೆಯಲು ಆಗದಿದ್ದರೆ ಅವರಿಗೆ ಪೂರಕ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಆ ಬಗ್ಗೆ ಸವಿಸ್ತಾರವಾಗಿ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಪ್ರತಿ ವಿಷಯಕ್ಕೂ ತಲಾ 40-40 ಅಂಕಗಳನ್ನು ನೀಡಲಾಗುತ್ತದೆ. ಇದರರ್ಥ ಮೊದಲ ಪತ್ರಿಕೆಯಲ್ಲಿ ಮೂರು ಸಬ್ಜೆಕ್ಟ್ ಇರುವ ಕಾರಣ 40, 40 ಎಂದರೆ 120 ಅಂಕಗಳು ಇರುತ್ತವೆ. ಎರಡನೆಯ ದಿನದ ಪತ್ರಿಕೆಯಲ್ಲಿ 120 ಅಂಕಗಳು ಇರುತ್ತವೆ.
ಜುಲೈ ಕೊನೆಯ ಭಾಗ ಅಥವಾ ಆಗಸ್ಟ್ ಮೊದಲ ಭಾಗದಲ್ಲಿ ದಿನಾಂಕ ನಿಗದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಎಲ್ಲರಿಗೂ 95 ಮಾಸ್ಕ್ ವಿತರಣೆ ಮಾಡುತ್ತೇವೆ, ಮನೆಯ ಸಮೀಪ ಕೇಂದ್ರದಲ್ಲಿಯೇ ಬರೆಯಲು ಅವಕಾಶ ಕಲ್ಪಿಸುತ್ತೇವೆ. ಯಾವುದೇ ಕಾರಣಕ್ಕೂ ಮಕ್ಕಳು ಹೆದರುವ ಅಗತ್ಯವಿಲ್ಲ, ಎಲ್ಲರನ್ನೂ ಪಾಸ್ ಮಾಡಲಾಗುವುದು. ನಾನು ಚೆನ್ನಾಗಿ ಓದಿಲ್ಲ ಪರೀಕ್ಷೆ ಬರೆದರೂ ಫೇಲ್ ಆಗುತ್ತೇನೆ ಎಂಬ ಆಲೋಚನೆ ಬಿಟ್ಟು ಪರೀಕ್ಷೆ ಹಾಜರಾದರೆ ಸಾಕು ನೀವು ಪಾಸ್.ಎಂದು ಸಚಿವರು ಹೇಳಿದರು.
ಮೂರನೇ ವೇವ್ ಮಕ್ಕಳ ಮೇಲೆ ಅಫೆಕ್ಟ್ ಆಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ವಿಭಿನ್ನ ನಿಲುವು ವ್ಯಕ್ತವಾಗುತ್ತಿದೆ. ಆದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಬೇಕೋ ಎಂಬ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಸಚಿವರು ಹೇಳಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ 8.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.