By Election : ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಗೆ ಭಾರೀ ಮುಖಭಂಗ, 3 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು!!

By Election : ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇದೀಗ ಹೊರ ಬಿದ್ದಿದ್ದು 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಗೆ ಭಾರಿ ಮುಖಭಂಗವಾಗಿದೆ.

ಭಾರೀ ಕುತೂಹಲ ಕೆರಳಿಸಿದ ಚನ್ನಪಟ್ಟಣದಲ್ಲಿ(Channapattana) ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರು, 73417 ಮತಗಳನ್ನ ಪಡೆದುಕೊಂಡಿದ್ದು, ಇನ್ನು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು, 99,320 ಮತಗಳನ್ನ ಪಡೆದಿದ್ದಾರೆ. ಇಬ್ಬರ ಮಧ್ಯ ಒಟ್ಟು 25,193 ಸಿಪಿ ಯೋಗೇಶ್ವರ್ ಮತಗಳ ದಿಂದ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು(Sandoor) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನ್ನಪೂರ್ಣ ಇ ತುಕಾರಾಂ ಅವರು 88, 727 ಮತಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿ ಅಭ್ಯರ್ಥಿಯಾದ ಬಂಗಾರು ಹನುಮಂತು ಅವರು 79,622 ಮತಗಳನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಅನ್ನಪೂರ್ಣ ಅವರು 9105 ಮತಗಳ ಅಂತರದಿಂದ ಗೆಲವು ದಾಖಲಿಸಿದ್ದಾರೆ.

ಶಿಗ್ಗಾವಿ(Shiggavi) ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾನ್ ಖಾನ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಖಾನ್ ಅವರು 88,985 ಮತಗಳನ್ನು ಪಡೆದುಕೊಂಡಿದ್ದರೆ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರು 74,860 ಮತಗಳನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ಇವರ ಮಧ್ಯೆ 14,428 ಮತಗಳ ಅಂತರವಿದೆ ಎಂದು ತಿಳಿದುಬಂದಿದೆ.

1 Comment
  1. İstanbul su kaçağı tespiti İlk kez bu kadar hızlı bir hizmet aldım, tavsiye ederim! https://veengy.net/ustaelektrikci

Leave A Reply

Your email address will not be published.