ಏರ್ ಇಂಡಿಯಾ ಮೇಲೆ ಅಟ್ಯಾಕ್ | ಸೈಬರ್ ದಾಳಿಗೆ 45 ಲಕ್ಷ ಗ್ರಾಹಕರ ವಿವಿಧ ಕಾರ್ಡ್ ಗಳ ಮಾಹಿತಿ ಸೋರಿಕೆ

Share the Article

ಭಾರತದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆಯಾದ ದೇಶದ ಹೆಮ್ಮೆಯ ಏರ್ ಇಂಡಿಯಾ ಸರ್ವರ್ ಹ್ಯಾಕ್ ಆಗಿ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವ ಕಳವಳಕಾರಿ ವಿಷಯ ಬೆಳಕಿಗೆ ಬಂದಿದೆ.

ಬಹುದೊಡ್ಡ ಸೈಬರ್ ದಾಳಿ ನಡೆದಿದ್ದು, ಸಿಟಾ PSS ತಂತ್ರಜ್ಞಾನ ಪೂರೈಕೆ ಸಂಸ್ಥೆ ಈ ಸರ್ವರ್ ನಿರ್ವಹಿಸುತ್ತಿದ್ದು, ಏರ್ ಇಂಡಿಯಾದ ಡೇಟಾ ಪ್ರೊಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಮ್ ನಲ್ಲಿ ಈ ದಾಳಿಯಾಗಿದೆ.

ಇದರಿಂದಾಗಿ 45 ಲಕ್ಷ ಏರ್ ಇಂಡಿಯಾ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. 2011ರ ಆಗಸ್ಟ್ 26 ರಿಂದ 2021 ರ ಫೆಬ್ರವರಿ 26 ನಡುವೆ ನೋಂದಾವಣೆ ಮಾಡಿದ ಪ್ರಯಾಣಿಕರ ಹೆಸರು, ಸಂಪರ್ಕ, ಪಾಸ್ಪೋರ್ಟ್ ಮಾಹಿತಿ, ಟಿಕೆಟ್ ವಿವರ, ಕ್ರೆಡಿಟ್ ಕಾರ್ಡ್ ಗಳ ಮಾಹಿತಿ ಸೋರಿಕೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮಾಧ್ಯಮಗಳಿಗೆ ತಿಳಿಸಿದೆ.

ಈ ನಡುವೆ ಕ್ರೆಡಿಟ್ ಕಾರ್ಡ್ ಹೊಂದಿದವರ ಕಾರ್ಡಿನ ಸಿವಿವಿ ಮಾಹಿತಿಯನ್ನು ಸಿಟಾ PSS ನಲ್ಲಿ ಸಂಗ್ರಹಿಸಿಡುವ ಪರಿಪಾಠ ಇಲ್ಲ ಎಂದು ಏರ್ ಇಂಡಿಯಾ ಮೂಲಗಳು ಸ್ಪಷ್ಟಪಡಿಸಲಾಗಿದೆ.

ಪ್ರಯಾಣಿಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಜವಾಬ್ದಾರಿ ಹೊಂದಿದ ಸಿಟಾ ಸರ್ವರ್ ಸೈಬರ್ ದಾಳಿಗೆ ತುತ್ತಾಗಿದ್ದು, ಒಟ್ಟು 45 ಲಕ್ಷ ಪ್ರಯಾಣಿಕರ ಡಾಟಾ ಸೋರಿಕೆ ಆಗಿದ್ದು ಈ ಬಗ್ಗೆ ಏರ್ ಇಂಡಿಯಾ ತಿಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗಿದೆ.

ದಾಳಿಗೊಳಗಾದ ಸರ್ವರ್ ಗಳನ್ನು ಸರಿಪಡಿಸಲಾಗಿದೆ. ಪರಿಶೀಲನೆಗಾಗಿ ಬಾಹ್ಯ ತಜ್ಞರನ್ನು ನಿಯೋಜಿಸಲಾಗಿದ್ದು, ಕ್ರೆಡಿಟ್ ಕಾರ್ಡ್ ಸೋರಿಕೆಯಾದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವಂತೆ ಕ್ರೆಡಿಟ್ ಕಾರ್ಡ್ ನೀಡಿದ ಬ್ಯಾಂಕುಗಳಿಗೆ ತಿಳಿಸಲಾಗಿದೆ. ಏರ್ ಇಂಡಿಯಾ ವೆಬ್ ಸೈಟ್ ನಲ್ಲಿ ಅಥವಾ ಬೇರೆ ಕಡೆ ಅನ್ವಯವಾಗುವಂತಹ ಪಾಸ್ ವರ್ಡ್ ಗಳನ್ನು ಹೊಂದಿದ್ದರೆ ಬದಲಾಯಿಸಿಕೊಳ್ಳುವಂತೆ ಗ್ರಾಹಕರಿಗೆ ಏರ್ ಇಂಡಿಯಾ ಮನವಿ ಮಾಡಿದೆ.

Leave A Reply

Your email address will not be published.