ಫೇಕ್ ಲವ್ ಸ್ಟೋರಿಯನ್ನು ಸೃಷ್ಟಿಸುವುದು ಮತ್ತು ಬಡತನವನ್ನು ಮಾರಲು ಹೊರಡುವ ರಿಯಾಲಿಟಿ ಶೋಗಳು | ಇಂಡಿಯನ್ ಐಡಲ್-1 ವಿನ್ನರ್ ಅಭಿಜಿತ್ ಸಾವಂತ್ ಟೀಕೆ

ರಿಯಾಲಿಟಿ ಶೋಗಳಲ್ಲಿ ನಿಜವಾದ ಟ್ಯಾಲೆಂಟ್ ಗೆ ಬೆಲೆ ನೀಡುವ ಬದಲು ಫೇಕ್​ ಲವ್​​ಸ್ಟೋರಿ ಮತ್ತು ಸ್ಪರ್ಧಿಗಳ ಬಡತನವನ್ನು ಮುಂದಿಟ್ಟುಕೊಂಡು ಶೋ ನಡೆಸುತ್ತಿರುವುದು ಸರಿಯಲ್ಲ ಇಂಡಿಯನ್ ಐಡಲ್ -1 ರಿಯಾಲಿಟಿ ಶೋ ನ ವಿನ್ನರ್ ಅಭಿಜೀತ್​ ಸಾವಂತ್ ಟೀಕೆ ಮಾಡಿದ್ದಾರೆ.

ಕಿರುತೆರೆ ಪ್ರೇಕ್ಷಕರನ್ನು ಹೇಗಾದರೂ ಮಾಡಿ ಸೆಳೆದುಕೊಂಡು ಆ ಮೂಲಕ ತಮ್ಮ ಟಿಆರ್ಪಿ ಸೆಳೆದುಕೊಳ್ಳಲು ಮನರಂಜನಾ ವಾಹಿನಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತವೆ. ಅದರಲ್ಲೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ಮೋಡಿ ಮಾಡಲು ಹಲವು ತಂತ್ರಗಳನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳ ಬಗ್ಗೆ ವಿರೋಧವಾಗಿ ಅನೇಕ ಚರ್ಚೆಗಳು ಸೋಶಿಯಲ್​ ಮೀಡಿಯಾದಲ್ಲಿ ನಡೆದಿದೆ. ಇದೀಗ ನಡೆಯುತ್ತಿರುವ ಹಿಂದಿಯ ‘ಇಂಡಿಯನ್​ ಐಡಲ್​ 12’ ಸಿಂಗಿಂಗ್​ ರಿಯಾಲಿಟಿ ಶೋ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಪರ್ಧಿಗಳನ್ನು, ನಿರೂಪಕರನ್ನು ಹಾಗೂ ಜಡ್ಜ್​ಗಳನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗುತ್ತಿದೆ. ‘ಇಂಡಿಯನ್​ ಐಡಲ್​ 12’ ರ ವಿರುದ್ಧ ಈಗ ಇಂಡಿಯನ್​ ಐಡಲ್​ ಮೊದಲ ಸೀಸನ್​ನ ವಿನ್ನರ್​ ಅಭಿಜೀತ್​ ಸಾವಂತ್​ ಮಾತನಾಡಿದ್ದಾರೆ.

ಈ ರೀತಿಯ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಗಳ ನಡುವಿನ ಲವ್​ಸ್ಟೋರಿಯನ್ನು ತೋರಿಸಲಾಗುತ್ತದೆ. ಆದರೆ ಅದು ನಿಜವಾದ ಪ್ರೇಮಕಥೆ ಆಗಿರುವುದಿಲ್ಲ. ಅಲ್ಲಿ ಫೇಕ್​ ಲವ್​ ಸ್ಟೋರಿಗಳನ್ನು ಸೃಷ್ಟಿಸಿ ಜನರನ್ನು ಸೆಳೆಯುವ ತಂತ್ರ ನಡೆಯುತ್ತಿದೆ. ನಿಜವಾದ ಟ್ಯಾಲೆಂಟ್​ಗೆ ಬೆಲೆ ನೀಡುವ ಬದಲು ಇಂಥ ಫೇಕ್​ ಲವ್​​ಸ್ಟೋರಿ ಮತ್ತು ಸ್ಪರ್ಧಿಗಳ ಬಡತನವನ್ನು ಮುಂದಿಟ್ಟುಕೊಂಡು ಶೋ ನಡೆಸುತ್ತಿರುವುದು ಸರಿಯಲ್ಲ ಎಂದು ಅಭಿಜೀತ್​ ಸಾವಂತ್ ಟೀಕೆ ಮಾಡಿದ್ದಾರೆ.

ಈಗ ಇಂಡಿಯನ್​ ಐಡಲ್​ 12’ರ ಸ್ಪರ್ಧಿಗಳಾದ ಪವನ್​ ದೀಪ್​ ರಾಜನ್​ ಅರುಣಿತಾ ನಡುವೆ ಪ್ರೀತಿ ಇದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಈ ಕಾರ್ಯಕ್ರಮದಲ್ಲಿ ಲೆಜೆಂಡರಿ ಗಾಯಕ ಕಿಶೋರ್​ ಕುಮಾರ್​ ಅವರಿಗೆ ನಮನ ಸಲ್ಲಿಸುವ ಸಲುವಾಗಿ ವಿಶೇಷ ಎಪಿಸೋಡ್​ ನಡೆಸಲಾಯಿತು. ಆ ಎಪಿಸೋಡ್​ ಸರಿಯಾಗಿ ಮೂಡಿಬಂದಿಲ್ಲ ಹಾಗೂ ಕಿಶೋರ್​ ಕುಮಾರ್​ಗೆ ಅಗೌರವ ಸೂಚಿಸಿದಂತಾಗಿದೆ ಎಂದು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

ಈ ವಿಶೇಷ ಎಪಿಸೋಡ್​ಗಳಲ್ಲಿ ಮುಖ್ಯ ಅತಿಥಿಯಾಗಿ ಕಿಶೋರ್​ ಕುಮಾರ್​ ಅವರ ಮಗ ಅಮಿತ್​ ಕುಮಾರ್​ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಬಂದ ಬಳಿಕ ಅವರು ಕೂಡ ‘ಇಂಡಿಯನ್​ ಐಡಲ್​ 12’ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ‘ನನಗೆ ಆ ಶೋ ಖಂಡಿತಾ ಇಷ್ಟ ಆಗಲಿಲ್ಲ. ಎಲ್ಲ ಸ್ಪರ್ಧಿಗಳನ್ನು ಹೊಗಳಬೇಕು ಎಂದು ಆಯೋಜಕರು ಹೇಳಿದ್ದರು. ಅದರಂತೆ ನಾನು ನಡೆದುಕೊಂಡೆ’ ಎಂದು ಮಾಧ್ಯಮವೊಂದಕ್ಕೆ ಅಮಿತ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದರು. ಹೀಗೆ ಎಲ್ಲ ಕಡೆಗಳಿಂದಲೂ ಇಂಡಿಯನ್​ ಐಡಲ್​ ಕಾರ್ಯಕ್ರಮದ ಬಗ್ಗೆ ಟೀಕೆ ಕೇಳಿಬರುತ್ತಿದೆ.
ಈ ಮನಸ್ಥಿತಿ ಇದೀಗ ಕನ್ನಡಕ್ಕೂ ಹಬ್ಬುತ್ತಿದೆ.

ಕನ್ನಡದ ಹುಡುಗ ಕುರಿಗಾಹಿ ಹನುಮಂತಪ್ಪನ ಲುಂಗಿ, ಬೈರಾಸ್( ಶಾಲು), ಚಪ್ಲಿ ಮತ್ತು ಕೊನೆಗೆ ಕುರಿಗಳನ್ನು ಕೂಡ ಮಾರಿಕೊಂಡು ಟಿವಿ ಚಾನಲ್ ತನ್ನ ಟಿಆರ್ಪಿ ಏರಿಸಿಕೊಂಡಿತ್ತು. ಇದು ಬಡತನವನ್ನು ಎಂಕ್ಯಾಶ್ ಮಾಡುವ ಒಂದು ಉದಾಹರಣೆಯಾಗಿದ್ದರೆ, ಅತ್ತ ಆಂಕರ್ ಗಳು ಶೋ ನ ಜಡ್ಜ್ ಗಳನ್ನು ಪ್ರೀತಿಸುವಂತೆ ( ಅನುಶ್ರೀ Vs ಅರ್ಜುನ್ ಜನ್ಯ ) ಕಥೆ ಕ್ರಿಯೇಟ್ ಮಾಡಿ ಜನರನ್ನು ಮಂಗ ಮಾಡಲು ಹೊರಟಿವೆ. ವೀಕ್ಷಕರ ಮನಸ್ಸಿನ ಜತೆ ಆತ ಆಡುವ ಅಂತಹಾ ಶೋ ಗಳಿಂದ ದೂರ ಉಳಿದರೆ ಒಳ್ಳೆಯದು.

Leave A Reply

Your email address will not be published.